‘ರಾಂಚಿ’ ಕನ್ನಡದ ಬಹುನಿರೀಕ್ಷಿತ ಚಿತ್ರ. ಬಿಡುಗಡೆಗೂ ಮುನ್ನವೇ ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರ ಅನೇಕ ವಿಶಿಷ್ಟತೆಗಳನ್ನು ಹೊಂದಿದೆ. ‘ರಾಂಚಿ’ಯಲ್ಲಿ ನಡೆದ ನೈಜ ಘಟನೆಯನ್ನೇ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶಶಿಕಾಂತ ಘಟ್ಟಿ.
ಇನ್ನು ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಯುವ ನಟ ಪ್ರಭು ಮುಂಡ್ಕುರ್ ‘ಫಸ್ಟ್ಲುಕ್’ನಲ್ಲಿಯೇ ಪ್ರೇಕ್ಷಕರ ಮನ ಸೆಳೆಯುತ್ತಿದ್ದಾರೆ. ಈ ಹಿಂದೆ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದಲ್ಲಿ ಹರಿಪ್ರಿಯಾಗೆ ಜೋಡಿಯಾಗಿ ನಟಿಸಿದ್ದ ನಟ ಪ್ರಭು ಮುಂಡ್ಕುರ್ ‘ರಾಂಚಿ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಅಚ್ಚರಿ ಎಂದರೆ ‘ರಾಂಚಿ’ ಚಿತ್ರದಲ್ಲಿ ಪ್ರಭು ಮುಂಡ್ಕುರ್ ನಾಯಕನಾಗಿ ಡೈರೆಕ್ಟರ್ ಪಾತ್ರವನ್ನು ಮಾಡುತ್ತಿದ್ದಾರೆ. ಇನ್ನು ತಮ್ಮ ಪಾತ್ರದ ಕುರಿತು ಪ್ರಭು ಮುಂಡ್ಕುರ್ ಹೇಳಿಕೊಂಡಿದ್ದು ಹೀಗೆ, “ಇದೊಂದು ನೈಜ ಘಟನೆಯಾದರಿತ ಚಿತ್ರ. ಚಿತ್ರದಲ್ಲಿ ನಾನು ಚಿತ್ರದ ನಿರ್ದೇಶಕನ ಪಾತ್ರವನ್ನು ಮಾಡುತ್ತಿದ್ದೇನೆ. ಕನ್ನಡದ ನಿರ್ದೇಶಕರೊಬ್ಬರ ಜೀವನದಲ್ಲಿ ನಡೆದ ಸತ್ಯ ಘಟನೆಯನ್ನು ‘ರಾಂಚಿ’ ಒಳಗೊಂಡಿದೆ. ಹಾಗಾಗಿಯೇ ಪಾತ್ರವೂ ತುಂಬಾ ಜವಬ್ದಾರಿಯುತವಾಗಿದೆ. ಈ ಪಾತ್ರವನ್ನು ನಿರ್ವಹಿಸುವಾಗ ನಿರ್ದೇಶಕರ ಕೆಲಸ ನಿಭಾಯಿಸುವುದು ಎಷ್ಟು ಕಷ್ಟವೆಂದು ನನಗೆ ತಿಳಿಯಿತು. ಸಿನಿಮಾಗೂ ರಾಂಚಿಗೂ ತುಂಬಾ ಕನೆಕ್ಟ್ ಆಗುತ್ತದೆ. ಹಾಗಾಗಿಯೇ ಈ ಚಿತ್ರಕ್ಕೆ ‘ರಾಂಚಿ’ ಎಂದು ಹೆಸರಿಡಲಾಗಿದೆ” ಎಂದು ತಮ್ಮ ಮನದಾಳ ಹಂಚಿಕೊಂಡರು.
ಇನ್ನು ‘ರಾಂಚಿ’ ಚಿತ್ರದ ಫಸ್ಟ್ಲುಕ್ ಪೋಸ್ಟರ್ಗೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನೈಜ ಘಟನೆಯಾಧಾರಿತ ಚಿತ್ರವಾಗಿರುವುದರಿಂದ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಯುವ ನಟ ಪ್ರಭು ಮುಂಡ್ಕುರ್ ಪೋಸ್ಟರ್ನಲ್ಲಿ ರಗಡ್ ಲುಕ್ನಲ್ಲಿ ಕಾಣಿಸಿಕೊಂಡು ಚಿತ್ರಕ್ಕೆ ಹೊಸ ಮೆರುಗು ನೀಡಿದ್ದಾರೆ. ಇನ್ನು ಈ ಸಿನಿಮಾವನ್ನು ಶಶಿಕಾಂತ ಘಟ್ಟಿ ನಿರ್ದೇಶನ ಮಾಡುತ್ತಿದ್ದು, ಆನಂದ್ ಹಾಗೆ ಅರುಣ್ ನಿರ್ಮಿಸುತ್ತಿದ್ದಾರೆ. ರುದ್ರ ಫಿಲಂ ಹಾಗಿ ಗಿರಿಜಾ ಟಾಕೀಸ್ ಬ್ಯಾನರ್ ಅಡಿಯಲ್ಲಿ ‘ರಾಂಚಿ’ ನಿರ್ಮಾಣವಾಗುತ್ತಿದೆ.