ಒಂದೆಡೆ ರಶ್ಮಿಕಾ ಮಂದಣ್ಣ ತೆಲುಗು ಚಿತ್ರಗಳಲ್ಲಿ ಬ್ಯುಸಿ ಇದ್ದರೆ, ಇತ್ತ ರಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪ್ರಮೋಷನ್ಗಾಗಿ ಚೆನ್ನೈ, ಹೈದರಾಬಾದ್ ಎಂದೆಲ್ಲಾ ಓಡಾಡುತ್ತಿದ್ದಾರೆ. ಹಾಗೇ ರಶ್ಮಿಕಾ ಜೊತೆ ಬ್ರೇಕ್ ಅಪ್ ಆದ ನಂತರ ಇದೇ ಮೊದಲ ಬಾರಿಗೆ ಅವರ ಬಗ್ಗೆ ಮಾತನಾಡಿದ್ದಾರೆ.
‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪ್ರಮೋಷನ್ ವೇಳೆ ಚೆನ್ನೈ ಪತ್ರಕರ್ತರು ರಕ್ಷಿತ್ ಶೆಟ್ಟಿ ಬಳಿ ರಶ್ಮಿಕಾ ಬಗ್ಗೆ ಕೇಳಿದ್ದಾರೆ. ‘ಕ್ರಿಸ್ಮಸ್ ಹತ್ತಿರ ಬರುತ್ತಿದೆ. ರಶ್ಮಿಕಾಗಾಗಿ ನೀವು ಏನು ಕೇಳಿಕೊಳ್ಳಲು ಇಷ್ಟಪಡುತ್ತೀರ ಎಂದು ಪ್ರಶ್ನಿಸಿದಾಗ, ರಶ್ಮಿಕಾ ದೊಡ್ಡ ಕನಸುಗಾರ್ತಿ, ಆಕೆಯ ಕನಸುಗಳೆಲ್ಲಾ ನನಸಾಗಲಿ’ ಎಂದು ಹಾರೈಸಿದ್ದಾರೆ. ನಂತರ ‘ರಶ್ಮಿಕಾ ಜೊತೆ ಬ್ರೇಕ್ಅಪ್ ಆದ ನಂತರ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಿದೆ’ ಎಂದು ಪ್ರಶ್ನಿಸಿದಾಗ, ‘ನಾನು ಜೀವನದಲ್ಲಿ ಬಂದದ್ದನ್ನು ಹಾಗೆ ಸ್ವೀಕರಿಸಿ ಮುನ್ನಡೆಯುತ್ತಿದ್ದೇನೆ.
ಎಲ್ಲರ ಜೀವನದಲ್ಲಿ ಇವೆಲ್ಲಾ ಸಹಜ. ಜೀವನದಲ್ಲಿ ಸಾಕಷ್ಟು ಪಾಠ ಕಲಿತಿದ್ದೇನೆ. ಇವೆಲ್ಲಾ ಚಿಕ್ಕ ಚಿಕ್ಕ ವಿಚಾರಗಳು. ಜೀವನ ಬಹಳ ದೊಡ್ಡದು ಆದ್ದರಿಂದ ಇವೆಲ್ಲವನ್ನೂ ಮರೆತು ಹೆಜ್ಜೆ ಹಾಕುತ್ತಿದ್ದೇನೆ’ ಎಂದು ಮನ ಬಿಚ್ಚಿ ಮಾತನಾಡಿದ್ದಾರೆ.
ಪುಷ್ಕರ್ ಫಿಲ್ಮ್ಸ್ ಹಾಗೂ ಶ್ರೀದೇವಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿರ್ಮಾಣವಾಗಿದ್ದು, ಸಚಿನ್ ರವಿ ನಿರ್ದೇಶನ ಮಾಡಿದ್ದಾರೆ. ಕನ್ನಡ, ತಮಿಳು, ಮಲಯಾಳಂ, ತೆಲುಗು ಹಾಗೂ ಹಿಂದಿ ಐದು ಭಾಷೆಗಳಲ್ಲಿ ಸಿನಿಮಾ ತಯಾರಾಗಿದೆ. ಡಿಸೆಂಬರ್ 27 ರಂದು ಕನ್ನಡ ವರ್ಷನ್ ಬಿಡುಗಡೆಯಾಗುತ್ತಿದೆ.