ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ರಶ್ಮಿಕಾ ಅವರನ್ನು ಪರಿಚಯಿಸಿದ ರಕ್ಷಿತ್ ಶೆಟ್ಟಿ ಅವರು, ಈ ಸಿನಿಮಾವನ್ನು ಎಷ್ಟು ಪ್ರೀತಿ ಮಾಡಿ ಚಿತ್ರಿಸಿದ್ದರೋ ಅಷ್ಟೆ ಪ್ರೀತಿ ರಶ್ಮಿಕಾ ಅವರ ಮೇಲೂ ಇತ್ತು. ಅಲ್ಲದೇ ಇವರಿಬ್ಬರು ಪ್ರೀತಿಸುತ್ತಿರುವ ವಿಷಯ ಕಾಡ್ಗಿಚ್ಚಿನ್ನಂತೆ ಎಲ್ಲೆಡೆ ಹರಡಿತ್ತು ಮತ್ತು ಅವರ ಅಭಿಮಾನಿಗಳೆಲ್ಲಾ ಸಖತ್ ಖುಷಿ ಪಟ್ಟಿದ್ದರು.
ನಂತರ ಎರಡು ಕುಟುಂಬದ ಸಮೂಖದಲ್ಲಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ ಈ ಪ್ರೀತಿ, ನಿಶ್ಚಿತಾರ್ಥಗಳೆಲ್ಲಾ ಜಾಸ್ತಿ ದಿನ ಉಳಿಯಲಿಲ್ಲ. ಇತ್ತ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದಿಂದ ಜನಪ್ರಿಯತೆ ಗಳಿಸಿ ಪರಭಾಷೆಯಲ್ಲಿ ಬ್ಯುಸಿಯಾಗಿಬಿಟ್ಟರು. ದಿನಗಳು ಉರುಳಿದಂತೆ ರಶ್ಮಿಕಾ ಕನ್ನಡ ಚಿತ್ರರಂಗವನ್ನು ಮರೆಯುತ್ತಾ ರಕ್ಷಿತ್ ಅವರಿಗೂ ಕೈ ಕೊಟ್ಟರು.
ಇದರಿಂದ ಬೇಸತ್ತ ರಕ್ಷಿತ್ ಶೆಟ್ಟಿ, ಸಾಮಾಜಿಕ ಜಾಲತಾಣದಿಂದ ದೂರ ಉಳಿದು ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ಎರಡು ವರುಷಗಳ ಬಳಿಕ ಅವನೇ ಶ್ರೀಮನ್ನಾರಯಣ ಎಂಬ ಪಾನ್ ಇಂಡಿಯಾ ಸಿನಿಮಾವನ್ನು ಬರೆದು ನಟಿಸುತ್ತಿರುವುದು ತಮಗೆಲ್ಲರಿಗೂ ಗೊತ್ತಿದೆ. ಆದರೆ ಈಗ ಹೊಸದಾಗಿ ಹರಿದಾಡುತ್ತಿರುವ ವಿಷಯವೇನೆಂದರೆ, ರಶ್ಮಿಕಾ ಅವರು ಹೋದ್ರೆ ಹೊಗ್ಲಿ ಅಂತಾ ಶಾನ್ವಿ ಶ್ರೀವಾಸ್ತವ್ ಜೊತೆ ವಿವಾಹವಾಗುತ್ತಿದ್ದಾರೆ ಎಂಬ ಸುದ್ಧಿ ಹರಿದಾಡುತ್ತಿದೆ.
ಅವನೇ ಶ್ರೀಮನ್ನಾರಾಯಣ ಇದೇ ತಿಂಗಳು 27 ರಂದು ಪಂಚ ಭಾಷೆಯಲ್ಲಿ ಭಾರತಾದ್ಯಂತ ತೆರೆ ಕಾಣುತ್ತಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದ ಟ್ರೈಲರ್ ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಇದರ ಬೆನ್ನಲ್ಲೆ ರಕ್ಷಿತ್ ಅಭಿಮಾನಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಶಾನ್ವಿ ಅವರನ್ನು ವಿವಾಹವಾಗಿ ಎಂದು ಒತ್ತಾಯಿಸುತ್ತಿದ್ದಾರೆ.. ಅಲ್ಲದೆ ರಶ್ಮಿಕಾಗಿಂತ ಶಾನ್ವಿ ಬೆಸ್ಟ್ ಎನ್ನುತ್ತಿದ್ದಾರೆ.
ಆದರೆ ಎದಕ್ಕೆಲ್ಲಾ ತೆರೆ ಎಳೆದಿರುವ ರಕ್ಷಿತ್ ಸುಮ್ಮನೆ ಈ ರೀತಿಯಾಗಿ ಗಾಸಿಪ್ ಎಬ್ಬಿಸಬೇಡಿ.. ಸಿನಿಮಾ ಬಿಡುಗಡೆಯಾಗುತ್ತಿದೆ, ಸಿನಿಮಾವನ್ನು ಪ್ರೋತ್ಸಾಹಿಸಿ ಎಂದು ಹೇಳಿದ್ದಾರೆ !