ಅಣ್ಣ-ತಂಗಿಯ ಬಾಂಧವ್ಯದ ಸಂಕೇತ ಈ ರಕ್ಷಾ ಬಂಧನ. ಭಾರತದ ಹಲವಾರು ಪ್ರದೇಶಗಳಲ್ಲಿ ಈ ಸಂಪ್ರದಾಯ ರೂಢಿಯಲ್ಲಿದೆ. ಇನ್ನು ರಕ್ಷಾ ಬಂಧನಕ್ಕೆ ರಾಜ್ಯಾದ್ಯಂತ ತಯಾರಿ ಶುರುವಾಗಿದೆ. ಈ ಬಾರಿಯ ವಿಶೇಷ ಅಂದ್ರೆ ಆಗಸ್ಟ್ 15ರಂದು ರಕ್ಷಾ ಬಂಧನ ಆಚರಿಸಲಾಗ್ತಿದೆ. 19 ವರ್ಷಗಳ ನಂತರ ಸ್ವತಂತ್ರ್ಯ ದಿನದಂದು ರಕ್ಷಾ ಬಂಧನ ಬಂದಿದೆ. 2000ನೇ ಇಸವಿಯಲ್ಲಿ ಈ ಸಂದರ್ಭ ಬಂದಿತ್ತು. ಇನ್ನು 2084ರಲ್ಲಿ ಮತ್ತೆ ಇದೇ ಶುಭ ದಿನ ಬರಲಿದೆ.
ಇನ್ನು ಬಾಂಧವ್ಯದ ಸಂಕೇತವಾಗಿ ಸಹೋದರಿಯರು, ಸಹೋದರರಿಗೆ ರಾಖಿ ಕಟ್ಟುತ್ತಾರೆ. ರಕ್ಷಾ ಬಂಧನದ ದಿನ ಕೂಡ ಮುಹೂರ್ತ ನೋಡಿ ರಾಖಿ ಕಟ್ಟಬೇಕು. ಉತ್ತಮ ಸಮಯದಲ್ಲಿ ರಾಖಿ ಕಟ್ಟುವುದು ಕೂಡಾ ಅಷ್ಟೇ ಮುಖ್ಯ. ರಾಹು ಕಾಲದಲ್ಲಿ ಅಪ್ಪಿತಪ್ಪಿಯೂ ರಾಖಿ ಕಟ್ಟಬಾರದು.

ಹೌದು, ಆಗಸ್ಟ್ 14ರ ಮಧ್ಯಾಹ್ನ 2 ಗಂಟೆ 47 ನಿಮಿಷದಿಂದ ಪೂರ್ಣಿಮೆ ಶುರುವಾಗಲಿದೆ. ಆಗಸ್ಟ್ 15 ರ ಸಂಜೆ 4.23 ರವರೆಗೆ ಪೂರ್ಣಿಮೆ ಇರಲಿದೆ. ಆಗಸ್ಟ್ 15 ರಂದು ಮಧ್ಯಾಹ್ನ 1.30ರಿಂದ ಮೂರು ಗಂಟೆಯವರೆಗೆ ರಾಹುಕಾಲವಿರಲಿದೆ. ಈ ರಾಹು ಕಾಲದಲ್ಲಿ ರಾಖಿಯನ್ನು ಕಟ್ಟಬಾರದು. ಹೀಗಾಗಿ ರಾಹುಲ್ ಕಾಲದಲ್ಲಿ ರಾಖಿ ಕಟ್ಟಬೇಡಿ. ಅದು ನಿಮ್ಮ ಬಾಂಧವ್ಯಕ್ಕೆ ಧಕ್ಕೆ ತರಬಹುದು.