ಸನ್ನಿ, ಬಿಪಾಶಾ ಜಾಹಿರಾತಿನ ಕಾಂಡೋಮ್ ಬಳಸ್ಬೇಡಿ

0
554

ಬಾಲಿವುಡ್ ಐಟಂ ಬಾಂಬ್ ರಾಖಿ ಸಾವಂತ್ ತಮ್ಮ ವಿಚಿತ್ರ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಾರೆ. ಸದ್ಯ ಸನ್ನಿ ಲಿಯೋನ್ ಮತ್ತು ಬಿಪಾಶಾ ಬಸು ಜಾಹೀರಾತಿನ ಕಾಂಡೋಮ್ ಗಳನ್ನು ಬಳಸಬೇಡಿ ಎಂದು ತಮ್ಮ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಸನ್ನಿ ಲಿಯೋನ್, ಬಿಪಾಶಾ ಮತ್ತು ನಾನು ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದೇವೆ. ಆದ್ರೆ ನೀವುಗಳು ಮಾತ್ರ ನಾನು ತೋರಿಸುವ ಕಾಂಡೋಮ್ ಬಳಸಬೇಕು. ನನ್ನ ಕಾಂಡೋಮ್ ಗಳು ಯಾರಿಗೂ ಮೋಸ ಮಾಡಲ್ಲ. ನೋಡಿ ನನ್ನ ಪರ್ಸ್ ನಲ್ಲಿಯೂ ಕಾಂಡೋಮ್ ಇದೆ. ಪಾಕೆಟ್ ಮೇ ರಾಕೆಟ್ ಎಂದು ಡೈಲಾಗ್ ಹೊಡೆದಿರುವ ರಾಖಿ ಸಾವಂತ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಈ ಹಿಂದೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಮದುವೆಗೆ ಶುಭಕೋರುವಾಗ, ನಾನು ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಕಾಂಡೋಮ್ ಗಳನ್ನೇ ಬಳಸಿ ಎಂಬ ಉಚಿತ ಸಲಹೆಯನ್ನು ನೀಡಿದ್ದರು. ಬಾಬಾ ರಾಮ್‍ದೇವ್ ‘ಪತಂಜಲಿ’ ಬ್ರಾಂಡ್ ಮೂಲಕ ಎಲ್ಲ ಉತ್ಪನ್ನಗಳನ್ನು ಉತ್ಪಾದಿಸುತ್ತಾ ತಮ್ಮ ಕಂಪೆನಿಯ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಬಾಬಾ ರಾಮ್‍ದೇವ್ ಜೀ, ಜನರು ಪತಂಜಲಿ ಕಾಂಡೋಮ್ ಹೇಗಿರುತ್ತೆ ಎಂಬ ಕುತೂಹಲವನ್ನು ಜನರು ಹೊಂದಿದ್ದಾರೆ. ಆದಷ್ಟು ಬೇಗ ನಿಮ್ಮ ಕಂಪೆನಿಯಿಂದ ಪತಂಜಲಿ ಕಾಂಡೋಮ್’ ತಯಾರಿಸಿ ಅಂತಾ ರಾಖಿ ಸಾವಂತ್ ಚಾಲೆಂಜ್ ಹಾಕಿದ್ದರು.

ಈ ಹಿಂದೆ ಸನ್ನಿಲಿಯೋನ್ ನನ್ನ ಫೋನ್ ನಂಬರನ್ನು ವಯಸ್ಕರ ಚಿತ್ರರಂಗದವರಿಗೆ(ಪೋರ್ನ್ ಫಿಲ್ಮ್ ಜನರಿಗೆ) ನೀಡಿದ್ದಾರೆ. ನನಗೆ ಕರೆ ಮಾಡಿದ ಕೆಲವರು ನನ್ನನ್ನು ಪೋರ್ನ್ ಫಿಲ್ಮ್ ಗಳಲ್ಲಿ ನಟಿಸಲು ಆಹ್ವಾನಿಸಿದ್ದಾರೆ. ನನ್ನ ನಂಬರ್ ನಿಮಗೆ ಯಾರು ಕೊಟ್ಟರು ಅಂತಾ ಕೇಳಿದ್ದಕ್ಕೆ ಆ ವ್ಯಕ್ತಿ ಸನ್ನಿಲಿಯೋನ್ ಹೆಸರು ಹೇಳಿದ್ದಾರೆ ಅಂತಾ ರಾಖಿ ಸಾವಂತ್ ಆರೋಪಿಸಿದ್ದರು.

ನಾನು ಸಾಯುತ್ತೇನೆ ವಿನಃ ಸೆಕ್ಸ್ ಫಿಲ್ಮ್ ಗಳಲ್ಲಿ ನಟಿಸಲಾರೆ. ನಾನು ಭಾರತೀಯ ಮಹಿಳೆಯಾಗಿದ್ದು, ಸಮಾಜದ ಮೌಲ್ಯಗಳ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದೇನೆ. ಬಿ-ಟೌನ್ ಗೆ ಒಳ್ಳೆಯ ಸಿನಿಮಾಗಳನ್ನು ನೀಡಿದ್ದೇನೆ. ನಾನು ನಟಿಸಿರುವ ಚಿತ್ರಗಳನ್ನು ಫ್ಯಾಮಿಲಿ ಜೊತೆ ನೋಡಬಹುದು. ನನಗೆ ಕರೆ ಮಾಡಿದ ವ್ಯಕ್ತಿ, ನನ್ನ ಮೊಬೈಲ್ ನಂಬರ್ ಸನ್ನಿ ನೀಡಿದ್ದಾಳೆ ಅಂತಾ ಹೇಳಿದನು ಅಂತಾ ರಾಖಿ ಸಾವಂತ್ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದ

LEAVE A REPLY

Please enter your comment!
Please enter your name here