ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ: 65 ಮಂದಿಗೆ ಪ್ರಶಸ್ತಿ ಪ್ರಧಾನ

0
110

ಬೆಂಗಳೂರು: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 65 ಮಂದಿ ಗೆ ರಾಜ್ಯ ಸರ್ಕಾರ 2020 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿರ್ಧರಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಸರಳ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದು, ನವೆಂಬರ್ 7 ರಂದು ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರಧಾನ ಮಾಡಲು ನಿರ್ಧರಿಸಲಾಗಿದೆ.ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸಿಟಿ ರವಿ, 2020 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಸಿಎಂ ಅಧ್ಯಕ್ಷತೆಯ ಸಮಿತಿ ಸಿದ್ಧಪಡಿಸಿರುವ ಪಟ್ಟಿ ಪ್ರಕಟಿಸುತ್ತಿದ್ದೇನೆ. ಕೊವಿಡ್ ಹಿನ್ನೆಲೆಯಲ್ಲಿ ಸರಳ ರಾಜ್ಯೋತ್ಸವ ಆಚರಣೆ ಮಾಡಲು ತೀರ್ಮಾನ ಮಾಡಲಾಗುದೆ. ಈ ವರ್ಷ 65 ನೇ ರಾಜ್ಯೋತ್ಸವ. ಹಿಂದ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ನೀಡಿದ ಶಿಫಾರಸ್ಸಿನ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು ಅದರಂತೆ ಪ್ರತಿ ಜಿಲ್ಲೆಗೆ ಕನಿಷ್ಠ ಒಬ್ಬರನ್ನು ಪರಿಗಣಿಸಲಾಗಿದೆ ಎಂದರು.

ಕ್ರೀಡಾ ಕ್ಷೇತ್ರ ಹೊರತು ಪಡಿಸಿ ಉಳಿದವರನ್ನು 60 ಮೀರಿದವರನ್ನು ಆಯ್ಕೆ ಮಾಡಿದ್ದೇವೆ. ಸಾಮಾಜಿಕ ನ್ಯಾಯ, ವೈವಿದ್ಯತೆಗೆ ಆದ್ಯತೆ ನೀಡಲಾಗಿದೆ. ಕೃಷಿ, ಶಿಕ್ಷಣ, ಸಮಾಜ ಸೇವೆ ಸೇರಿದಂತೆ ವೈವಿಧ್ಯತೆಯ.ನ್ಯಾಯ ಪ್ರಾದೇಶಿಕ ನ್ಯಾಯ ಒದಗಿಸಲಾಗಿದೆ. 1788 ಅರ್ಜಿಗಳ ಪರಿಶೀಲನೆ ನಡೆಸಲಾಗಿತ್ತು. ಅವುಗಳಲ್ಲಿ 130 ಕ್ಕೆ ಇಳಿಸಿ.ಸಿಎಂ ಸಮಿತಿಗೆ ನೀಡಲಾಗಿತ್ತು ಎಂದು ತಿಳಿಸಿದರು.

Rajyotsva Award 2020 

ಬೆಂಗಳೂರು ಜನಸಂಖ್ಯೆ ಹಾಗೂ ಜನ ಸಾಂಧ್ರತೆಯಲ್ಲಿ. ಹೆಚ್ಚಿರುವುದರಿಂದ ಸಿಂಹ ಪಾಲಿದೆ. ಯಾವುದೇ ಅರ್ಜಿ ಹಾಕದವರನ್ನೂ. ಹುಡುಕಿ ಪ್ರಶಸ್ತಿ ನೀಡುವ ಕೆಲಸ ಮಾಡಲಾಗಿದೆ. ಅರ್ಹತೆಯನ್ನು ಕಡೆಗಣಿಸಿಲ್ಲ. ಶಿಫಾರಸ್ಸಿಗಿಂತ ಅರ್ಹತೆಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಹೀಗಾಗಿ ಬಹಳ ಜನರಿಗೆ ಅರ್ಹತೆ ಇದ್ದರೂ ಆಯ್ಕೆಯಾಗಲು ಸಾಧ್ಯವಾಗಿಲ್ಲ. ನ್ಯಾಯಾಲಯಕ್ಕೆ ಹೋಗಿ ಅರ್ಹತೆಯನ್ನು ಒರೆಗೆ ಹಚ್ಚಿದವರಿಗೂ ಪ್ರಶಸ್ತಿ ನೀಡಲು ಆಗಿಲ್ಲ. ನವೆಂಬರ್ 7.ರಂದು ಬೆಳಿಗ್ಗೆ 11 ಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಸರಳ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು‌

ಚುನಾವಾಣಾ ಆಯೋಗ ಪ್ರಶಸ್ತಿ ನೀಡಿದೆ ಆದರೂ ನವೆಂಬರ್ 7 ರಂದು ನೀಡಲಾಗುವುದು. ಯುವ ಬ್ರಿಗೇಡ್ ಸಮಾಜ ಸೇವೆಯಲ್ಲಿ ತೊಡಗಿದೆ. ಕಲ್ಯಾಣಿಗಳನ್ನು ಪುನರುಜ್ಜೀವನ ಮಾಡುವುದರಿಂದ ಹಿಡಿದು ಸಾಮಾಜಿಕ ಕೆಲಸ ಮಾಡಿದೆ. ಆರ್ ಎಸ್ ಎಸ್ ನವರಿಗೆ ಪ್ರಶಸ್ತಿ ಕೊಡಬಾರದು ಎಂದು ಯಾವುದೇ ನಿಯಮ ಇಲ್ಲ.
ನಿಯಮ ಮೀರಿ ಕೊಡುವಂತೆ ಯಾರೂ ಒತ್ತಡ ಹೇರಿಲ್ಲ. ಪ್ರಶಸ್ತಿ 1 ಲಕ್ಷ ರೂ 25 ಗ್ರಾಂ ಚಿನ್ನ ಇದೆ. ರಾಜ್ಯೋತ್ಸವ ನಿಲ್ಲಿಸುವುದಿಲ್ಲ ಎಂದ ಮೇಲೆ ಪ್ರಶಸ್ತಿ ಏಕೆ ನಿಲ್ಲಿಸಬೇಕು ಎಂಬ ಅಭಿಪ್ರಾಯ ಬಂತು ಅದಕ್ಕೆ ನೀಡಲಾಗಿದೆ ಎಂದರು.

LEAVE A REPLY

Please enter your comment!
Please enter your name here