ತಮಿಳ್ ರಾಕರ್ಸ್ ಅಟ್ಟಹಾಸ ತಡೆಯಲು ರಜನಿ ಅಭಿಮಾನಿಗಳ ಹೊಸ ಪ್ಲಾನ್ !

0
197

ತಮಿಳು ರಾಕರ್ಸ್.ಕಾಮ್ ಒಂದು ಕಡಲ್ಗಳ್ಳತನದ ವೆಬ್‍ಸೈಟ್ ಆಗಿದ್ದು ಇತ್ತೀಚಿನ ತಮಿಳು, ತಲುಗು,ಕನ್ನಡ,ಮಲಯಾಳಂ ಬಾಲಿವುಡ್ ಚಲನಚಿತ್ರಗಳನ್ನು ಆನ್‍ಲೈನ್ ನಲ್ಲಿ ಹೆಚ್.ಡಿ ಡೌನ್‍ಲೋಡ್ ಒದಗಿಸುತ್ತದೆ. ಬೇಸರದ ಸಂಗತಿ ಏನೆಂದರೆ ದಕ್ಷಿಣ ಭಾರತದ ಚಲನಚಿತ್ರದ ಅಭಿಮಾನಿಗಳಲ್ಲಿ ಈ ಅಪ್ಲಿಕೇಶನ್ ಬಹಳ ಜನಪ್ರಿಯವಾಗಿದೆ.

 

 

ಎರಡು ವರ್ಷಗಳ ಹಿಂದೆ ರಜನಿಕಾಂತ್ ಅವರ ರೋಬೋ 2.0 ಸಿನಿಮಾವನ್ನು ನಂವೆಂಬರ್ ತಿಂಗಳಲ್ಲಿ ಲೀಕ್ ಮಾಡುತ್ತೇವೆ ಎಂಬ ಹೇಳಿಕೆ ನೀಡುವ ಮೂಲಕ ಹೊಸ ಸಿನಿಮಾಗಳಿಗೆ ವಿಲನ್ ಆಗಿರುವ ತಮಿಳು ರಾಕರ್ಸ್ ವೆಬ್‍ಸೈಟ್ ಬೆದರಿಕೆಯೊಡ್ಡಿತ್ತು. ಚಿತ್ರತಂಡ ಮುಂಜಾಗೃತ ಕ್ರಮವಾಗಿ ಮದರಾಸು ಹೈಕೋರ್ಟ್ ಮೊರೆ ಹೋಗಿ ಯಾವುದೇ ವೆಬ್‍ಸೈಟ್ನಲ್ಲಿ ಪ್ರಸಾರವಾಗದಂತೆ ನಿರ್ಭಂಧ ಹೇರಿತ್ತು ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ತಮಿಳ್ ರಾಕರ್ಸ್ ರೋಬೋ ಸಿನಿಮಾವಮನ್ನು ಬಿಡುಗಡೆಯಾದ ದಿನವೇ ಚಿತ್ರವನ್ನು ಲೀಕ್ ಮಾಡಿತ್ತು.

 

 

ಸಾವಿರಾರು ತಂತ್ರಜ್ಞರು ಮತ್ತು ಕಲಾವಿದರ ಪರಿಶ್ರಮ,ಕೋಟಿ-ಕೋಟಿ ಬಂಡವಾಳ ಸುರಿಯುವ ನಿರ್ಮಾಪಕರ ಕನಸು ನೀರಿನಲ್ಲಿ ಹೋಮ ಮಾಡಿದಂತೆ ಮಾಡಿರುವ ಈ ಕುಖ್ಯಾತ ವೆಬ್‍ಸೈಟ್ ಗೆ ಸಾವಿರಾರು ಜನ ಫಾಲೋವರ್ಸ್ ಇರುವುದು ದುಃಖದ ವಿಚಾರ.. ಈ ಕಡಲ್ಗಳ್ಳರ ಅಟ್ಟಹಾಸಕ್ಕೆ ಬಾಹುಬಲಿ ಸೇರದಂತೆ ಕನ್ನಡದ ಅನೇಕ ಸಿನಿಮಾಗಳು ತುತ್ತಾಗಿವೆ, ಇದೀಗ ಇವರಿಗೆ ಪಾಠ ಕಲಿಸಲು ರಜನಿಕಾಂತ್ ಅಭಿಮಾನಿಗಳು ಹೊಸದೊಂದು ಪ್ಲಾನ್ ಮಾಡಿದ್ದಾರೆ.

 

 

ರಜನಿಕಾಂತ್ ಅವರು ನಟಿಸಿರುವ ದರ್ಬಾರ್ ಸಿನಿಮಾದ ದ ಟ್ರೈಲರ್ ಈಗಾಗಲೇ ಸದ್ದು ಮಾಡುತ್ತಿದ್ದು, ಜನವರಿ 9 ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ.. ಸುಮಾರು ಎರಡು ದಶಕಗಳ ನಂತರ ರಜನಿಕಾಂತ್ ಅವರು ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದು ,ಆರ್ ಮುರುಗದಾಸ್ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

 

 

ಇನ್ನು ರಜನಿಕಾಂತ್ ಅವರ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ವಿಶ್ವವೇ ಕಾಯುತ್ತಿರುತ್ತದೆ.. ಅಂತೆಯೇ ಈ ಸಿನಿಮಾ ದೊಡ್ಡದೊಂದು ದಾಖಲೆ ಬರೆಯುವ ನಿರೀಕ್ಷೆಯಲ್ಲಿದೆ.ಆದರೆ ಈ ಲೆಕ್ಕಾಚಾರವನ್ನು ತಮಿಳ್ ರಾಕರ್ಸ್ ತಂಡ ಉಲ್ಟಾ ಮಾಡುತ್ತದೆಯೇ ಎಂಬ ಆತಂಕವೂ ಸಹ ಹೆಚ್ಚಾಗಿಯೇ ಇದೆ .. ಹೌದು ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ತಮ್ಮ ವೆಬ್ ಸೈಟ್ನಲ್ಲಿ ಹಂಚಿಕೊಳ್ಳುವ ತಮಿಳ್ ರಾಕರ್ಸ್ ವಿರುದ್ಧ ಹೋರಾಡಲು ರಜನಿ ಫ್ಯಾನ್ಸ್ ಹೊಸ ಪ್ಲಾನ್ ಮಾಡಿದ್ದಾರೆ.

 

 

ದರ್ಬಾರ್ ಸಿನಿಮಾ ಪೈರಸಿ ಆಗುವುದನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ತಿಳಿದಿರುವ ರಜನಿಕಾಂತ್ ಅಭಿಮಾನಿಗಳು, ಪೈರಸಿ ಕಾಪಿ ನೋಡದಿರಲು ತೀರ್ಮಾನಿಸಿದ್ದಾರೆ. ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡುವಂತೆ ಇತರೆ ಫ್ಯಾನ್ಸ್ ಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.. ಚಿತ್ರವನ್ನು ಮತ್ತೆ ಮತ್ತೆ ಚಿತ್ರಮಂದಿರದಲ್ಲಿ ನೋಡುವಂತೆ ಮಾಡುವ ಚಿಂತನೆ ಮಾಡಿದ್ದಾರೆ. ಇದರಿಂದ ದರ್ಬಾರ್ ಕಲೆಕ್ಷನ್ ಮೇಲೆ ಕೂಡ ಯಾವುದೇ ವ್ಯತಿರಿಕ್ತ ಪರಿಣಾಮ ಆಗದಂತೆ ಮಾಡುವುದು. ಆನ್ ಲೈನ್ ನಲ್ಲಿ ಲೀಕ್ ಆದರೆ ಆ ಕಾಪಿಗೆ ಮಹತ್ವ ಸಿಗಬಾರದು ಎನ್ನುವುದು ಅಭಿಮಾನಿಗಳು ಉದ್ದೇಶ.

 

 

ಕನ್ನಡ ಭಾಷೆ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾಗಳು ಮೊದಲ ಶೋ ಬಿಡುಗಡೆಯಾಗುತ್ತಿದ್ದಂತೆ ಲೀಗ್ ಮಾಡುವ ಇವರ ಅಟ್ಟಹಾಸವನ್ನು ತಡೆಯಲು ಸಾಧ್ಯವಾಗುತ್ತಿಲ್ಲ .. ಆದುದರಿಂದ ಜನರಿಗೆ ಅರಿವು ಮೂಡಿಸಿದರೆ ಅವರ ಅಟ್ಟಹಾಸವನ್ನು ತಡೆಯಬಹುದು ಎಂಬುದು ರಜನಿ ಅಭಿಮಾನಿಗಳ ಉದ್ದೇಶ

LEAVE A REPLY

Please enter your comment!
Please enter your name here