ರಾಜರಾಜೇಶ್ವರಿ ನಗರದ ಚುನಾವಣೆ ಕೈಯಾರೆ ಮಾಡಿಕೊಂಡ ಅನಾಹುತ !

0
219

ಯಾಕೋ ಏನೋ ರಾಜರಾಜೇಶ್ವರಿ ನಗರದ ಚುನಾವಣೆ ನನ್ನನ್ನು ತುಂಬಾ ಕಾಡ್ತಾ ಇದೆ. ಕರೋನಾ ದಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಕೈಯಾರೆ ಮಾಡಿಕೊಂಡ ಅನಾಹುತಕ್ಕೆ ಈ ಚುನಾವಣೆ ಅವಶ್ಯಕತೆ ಇದೆಯಾ ಅಂತ ಅನ್ಸತ್ತೆ ,ಸಿದ್ಧಾಂತಗಳನ್ನೇ ಒಗ್ಗಿ ಕೇಳ್ಳೋಕೆ ಕಷ್ಟ ಆಗಿರುವ ಪಕ್ಷಕ್ಕೆ ಐಟಿ ರೈಡ್ ಎಂಬ ಅಸ್ತ್ರಕ್ಕೆ ಸೋತು ಮುನಿರತ್ನ ಅವರು ಬಿಜೆಪಿ ಹೋದ್ರೋ ಏನೋ ಗೊತ್ತಿಲ್ಲ .ಆದರೆ ಪ್ರಸ್ತುತ ಪರಿಸ್ಥಿತಿ ನೋಡ್ತಾ ಇದ್ರೆ ಅಲ್ಲಿ ಅವರಿಗೆ ಟಿಕೆಟ್ ಮರೀಚಿಕೆಯಾಗಿದೆ. ಇನ್ನು ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಅಂತ ಒಂದು ಗಾದೆ ಇದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹೊತ್ತುಕೊಂಡ ಡಿಕೆ ರವಿಯವರ ಆತ್ಮಹತ್ಯೆಯಾ ಆಪಾದನೆಗಳನ್ನು ಶ್ರೀಮತಿ ಕುಸುಮಾರವಿ ಅವರನ್ನು ಗೆಲ್ಲಿಸುವ ಮೂಲಕ ದೂರ ಮಾಡ್ಕೋಬೇಕು,ಮಂಡ್ಯದಲ್ಲಿ ನಡೆದಂತಹ ಸುಮಲತಾ ಅವರ ಸ್ವಾಭಿಮಾನದ ಹೋರಾಟ ಇಲ್ಲೂ ತರಬೇಕು ಅನ್ನೋ ಒಂದು ಪ್ಯಾನ್ ಇದೇ ಅನ್ನಿಸ್ತಾ ಇದೆ. ಕುಸುಮಾ ರವಿಯವರ ಸ್ಟೇಟ್ ಮೆಂಟ್ ಗಳು ಯಾರು ಏನೇ ಟೀಕಿಸಿದರೂ ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳುತ್ತಿರುವ ರೀತಿ ನೋಡಿದ್ರೆ ಕುಸುಮಾರ ಅವರು ಸುಮಲತಾ ಅವರನ್ನು ಅನುಕರಿಸುತ್ತಿದ್ದಾರೆ ಅನ್ಸುತ್ತೆ.

ಇನ್ನು ಪ್ರಾದೇಶಿಕ ಪಕ್ಷ ಜೆಡಿಎಸ್ ಕಥೆ ಕಾದು ನೋಡುವ ತಂತ್ರ,ವಲಸಿಗರಿಗೆ ನಾನು ಟಿಕೆಟ್ ಕೊಟ್ಟು ಕಾರ್ಯಕರ್ತರನ್ನು ಅನಾಥರಾಗಿ ಮಾಡ್ಲಾ ಅನ್ನುವ ಮಾಜಿ ಮುಖ್ಯಮಂತ್ರಿಗಳ ಸ್ಟೇಟ್ಮೆಂಟ್ ತುಂಬಾ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ .ಇದೇ ಕಾರ್ಯಕರ್ತರು ಮಂಡ್ಯದ ಉಪ ಚುನಾವಣೆಯಲ್ಲಿ ನೆನಪಾಗಲಿಲ್ಲವೇ? ಇನ್ನು ಅಂತಿಮ ಹಂತದಲ್ಲಿ ಮಂಡ್ಯದ ರೀತಿ ನಿಖಿಲ್ ಕುಮಾರಸ್ವಾಮಿ ಅವರನ್ನು ಎಲೆಕ್ಷನ್ ಗೆ ನಿಲ್ಲಿಸಿದ ಹಾಗೆ. ಒಂದೂವರೆ ವರ್ಷದ ಅಧಿಕಾರ ಹಿಡಿಯುವಲ್ಲಿ ಸಹಕರಿಸಿದ ಡಿಕೆ ಶಿವಕುಮಾರ ಋಣ ಸಂದಾಯಕ್ಕೆ ಕಾರ್ಯಕರ್ತರನ್ನು ಬಲಿ ಕೊಟ್ಟರೂ ಆಶ್ಚರ್ಯ ಇಲ್ಲ.

ಏನ್ ಆಗ್ತಾ ಇದೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಚುನಾವಣಾ ವೆಚ್ಚವನ್ನು ನಾವು ಯಾಕೆ ಹೊರಬೇಕು. ಇಲ್ಲಿ ಗಮನಿಸಬೇಕಾದ ಅಂಶ ಅಂದರೆ ಮುನಿರತ್ನ ಅವರಿಗೆ ತಮ್ಮದೇ ಆದ ವೋಟ್ ಬ್ಯಾಂಕ್ ಇದೆ ಅದು ಕಾಂಗ್ರೆಸ್ ಕೃಪಾಕಟಾಕ್ಷದಿಂದ ಡಿಕೆ ಸುರೇಶ್ ಅವರಿಗೆ ಅನುಕೂಲ ಆಗುವ ರೀತಿ ಸೃಷ್ಟಿಸಿಕೊಂಡಿರುವ ಬ್ಯಾಂಕ್. ಯಾಕೆಂದರೆ ಇಲ್ಲಿ ಮಧ್ಯಮ ವರ್ಗದವರು ಮತ್ತೆ ಮೇಲ್ಮಧ್ಯಮ ವರ್ಗದವರಿಗಿಂತ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮತ್ತೆ ಕಟ್ಟಡದ ಕೂಲಿ ಕಾರ್ಮಿಕರಿಗಾಗಿ ದುಡಿಯುವವರೇ ಹೆಚ್ಚಾಗಿದ್ದಾರೆ ಅವರೆಲ್ಲ ಮುನಿರತ್ನ ಅವರ ಕಾಂಗ್ರೆಸ್ ವೋಟ್ ಬ್ಯಾಂಕ್ ಅಂದ್ರೆ ತಪ್ಪಾಗಲ್ಲ. ಇನ್ನು ಇಲ್ಲಿ ನಿಷ್ಠಾವಂತ ಬಿಜೆಪಿಯ ಟಿಕೆಟ್ ಆಕಾಂಕ್ಷಿ ತುಳಸಿ ಮುನೇಗೌಡರ ಸ್ಥಿತಿ ಏನು ಒಂದು ಪಕ್ಷ ಅವರ ಅಭ್ಯರ್ಥಿಯಾದರೂ ಸಹ ಈಗ ಅತಿವೃಷ್ಟಿ  ಹಾಗೂ ಕರೋನ ದಂತಹ ವಿಷಮ ಪರಿಸ್ಥಿತಿಯನ್ನು ನಿಭಾಯಿಸಲು ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿರುವುದು ಇವರಿಗೆ ಮುಳುವಾಗಬಹುದು.

ಕುಮಾರಸ್ವಾಮಿಯವರ ಸ್ಪಷ್ಟತೆ ಇಲ್ಲ ಇಲ್ಲದ ಮಾತುಗಳಿಂದ ತುಂಬಾ ಜನ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು ಆ ಭಾಗದಲ್ಲಿ ಪಕ್ಷ ತೆರೆಯುತ್ತಾ ಇದ್ದಾರೆ.  ಇನ್ನು ಡಿಕೆ ಶಿವಕುಮಾರ್ ಅವರಿಗೆ ತಾವು ಅಧ್ಯಕ್ಷರಾದ ನಂತರ ಶಿರಾ ಹಾಗೆ ರಾಜರಾಜೇಶ್ವರಿ ನಗರ ಎರಡು ಚುನಾವಣೆಯಲ್ಲಿ ಜಯಿಸಲೇಬೇಕೆಂಬ ಪಣ.  ಇನ್ನು ಈಗಿನ ಬೆಳವಣಿಗೆಯಲ್ಲಿ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ಗಳು ಪಕ್ಷೇತರವಾಗಿ ಮುನಿರತ್ನ ಅವರನ್ನು ಗೆಲ್ಲಿಸಲೇಬೇಕೆಂಬ ಹೋರಾಟ.  ಇನ್ನೂ ಕುಮಾರಸ್ವಾಮಿಯವರು ಹನುಮಂತರಾಯಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಕಾಂಗ್ರೆಸ್ಸಿಗೆ ಕಳಿಸಿರಬಹುದು ಎಂಬ ಒಂದು ಸಂಶಯ ಕೂಡ ಕಾಡ್ತಾ ಇದೆ.  ಇನ್ನು ಈ ಚುನಾವಣೆ ತುಂಬ ಅನುಮಾನ ಮತ್ತು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ ನವೆಂಬರ್ ಎರಡರಷ್ಟರಲ್ಲಿ ಎಲ್ಲರನ್ನು ತಾಯಿ ರಾಜರಾಜೇಶ್ವರಿಯ ಕಾಪಾಡಬೇಕು.

ಸಿಂಹಿಣಿ….

LEAVE A REPLY

Please enter your comment!
Please enter your name here