2016ರಲ್ಲೇ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರಾ ರಜನಿಕಾಂತ್..?! ಏನಿದು ರಜನಿ ಆರೋಗ್ಯ ರಹಸ್ಯ..!

0
96

ಭಾರತ ಸೇರಿದಂತೆ ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿ ಬಳಗ ಹೊಂದಿರುವ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶ ಮತ್ತು ಆರೋಗ್ಯದ ಕುರಿತು ಅನೇಕ ಚರ್ಚೆಗಳು ಮುನ್ನಲೆಗೆ ಬಂದಿವೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲ್ಲಿದ್ದು ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸುತ್ತಾರೆ. ಹೊಸ ರಾಜಕೀಯ ಅಲೆ ತಮಿಳುನಾಡಿನಲ್ಲಿ ಸೃಷ್ಟಿಯಾಗುತ್ತದೆ ಎಂದು ಅವರ ಅಭಿಮಾನಿಗಳು ಭಾವಿಸಿದ್ದರು. ಆದರೆ ಇದೀಗ ರಜನಿಕಾಂತ್ ಅವರ ಆರೋಗ್ಯದ ಕುರಿತು ಹೊರಬಿದ್ದಿರುವ ಕೆಲವು ಸತ್ಯಗಳು ರಜನಿ ಅಭಿಮಾನಿಗಳಿಗೆ ತೀವ್ರ ನಿರಾಸೆಯನ್ನುಂಟು ಮಾಡಿವೆ.

ಹೌದು, ತಲೈವಾ ರಜನೀಕಾಂತ್ ತಮಿಳುನಾಡಿನಲ್ಲಿ ರಾಜಕೀಯ ಪ್ರವೇಶಿಸುತ್ತಾರೆ.…ಚುನಾವಣಾ ರಾಜಕಾರಣದಲ್ಲಿ ಸಕ್ರಿಯರಾಗುತ್ತಾರೆಂಬ ಮಾತು ಎರಡು ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಅದಕ್ಕೆ ಪುಷ್ಟಿ ನೀಡುವಂತೆ ರಜನಿಕಾಂತ್ ಅವರು ಮಕ್ಕಳ್ ಮಂದ್ರಮ್ ಸದಸ್ಯರೊಂದಿಗೆ ಸಭೆಗಳನ್ನೂ ನಡೆಸಿದ್ದರು. ರಾಜಕೀಯ ಪ್ರವೇಶಕ್ಕೆ ಬೇಕಾದ ಸಿದ್ದತೆಗಳನ್ನು ರಜನಿ ತೆರೆಮರೆಯಲ್ಲಿ ನಡೆಸಿದ್ದರು. ತಮ್ಮ ಅಭಿಮಾನಿಗಳಿಗೂ ಚುನಾವಣೆಗೆ ತಯಾರಾಗಿರುವಂತೆ ಸೂಚನೆಯನ್ನು ನೀಡಿದ್ದರು. ಆದರೆ ಇದೀಗ ರಜನಿಕಾಂತ್ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮತ್ತೊಮ್ಮೆ ಯೋಚಿಸಿ, ಒಂದು ಸೂಕ್ತ ಸಮಯದಲ್ಲಿ ನನ್ನ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದ್ದಾರೆ. ರಜನಿಕಾಂತ್ ಅವರು ನೀಡಿರುವ ಈ ಹೇಳಿಕೆ ರಜನಿಕಾಂತ್ ಅವರು ರಾಜಕೀಯದಿಂದ ಹಿಂದೆ ಸರಿದರಾ..? ಎಂಬ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.


ರಜನಿಕಾಂತ್ ಅವರ ಈ ಹೇಳಿಕೆಗೆ ಕಾರಣ ಆ ಒಂದು ಪತ್ರ…!!

ಇತ್ತೀಚೆಗೆ ರಜನೀಕಾಂತ್ ಅವರು ಅಭಿಮಾನಿಗಳಿಗೆ ಬರೆದಿದ್ದಾರೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. “ಪ್ರೀತಿಯ ಅಭಿಮಾನಿಗಳೇ ನನ್ನ ಆರೋಗ್ಯ ಸರಿ ಇಲ್ಲದ ಕಾರಣ ರಾಜಕೀಯದಿಂದ ಸದ್ಯದ ಮಟ್ಟಿಗೆ ದೂರವೇ ಉಳಿಯುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ ನಾನು ರಾಜಕೀಯ ಪ್ರವೇಶ ಮಾಡುವುದು ಅನುಮಾನ.. 2016ರಲ್ಲೇ ನನಗೆ ಮೂತ್ರಪಿಂಡ ಕಸಿ ಮಾಡಲಾಗಿದೆ. ಹೀಗಾಗಿ ನನಗೆ ರೋಗನಿರೋಧಕ ಶಕ್ತಿಯೂ ಕಡಿಮೆ ಇದೆ. ಹಾಗಾಗಿ ಕೊವಿಡ್-19 ಸೋಂಕು ಬೇಗನೇ ತಗುಲುವ ಸಾಧ್ಯತೆ ಇದೆ. ಇದೀಗ ಕರೊನಾ ಪ್ರಮಾಣ ಅಧಿಕವಾಗಿರುವುದರಿಂದ ನಾನು ಸಾರ್ವಜನಿಕ ಜೀವನದಿಂದ ದೂರ ಉಳಿಯುವುದು ಉತ್ತಮ” ಎಂದು ಆ ಪತ್ರದಲ್ಲಿ ರಜನಿ ಅಭಿಮಾನಿಗಳಿಗೆ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ರಜನಿಕಾಂತ್ ಅವರು ತಮ್ಮ ಅನಾರೋಗ್ಯದ ಕಾರಣಗಳನ್ನೆಲ್ಲ ವಿವರಿಸದಂತೆ ಪತ್ರದಲ್ಲಿ ಬರೆಯಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಪತ್ರವನ್ನು ನೋಡಿದ ರಜನಿ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಇದೀಗ ರಜನಿಕಾಂತ್ ಅವರು ತಮ್ಮ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. “ಈ ಪತ್ರ ಬರೆದವನು ನಾನಲ್ಲ. ಆದರೆ ಅದರಲ್ಲಿ ಹೇಳಲಾದ ವಿಚಾರಗಳೆಲ್ಲ ಸತ್ಯ. ನನಗೆ 2016ರಲ್ಲೇ ಮೂತ್ರಪಿಂಡ ಕಸಿಯಾಗಿದೆ. ಹೀಗಾಗಿ ರಾಜಕೀಯದಿಂದ ದೂರ ಇರುವಂತೆ ವೈದ್ಯರು ಸಲಹೆ ನೀಡಿದ್ದೂ ಹೌದು” ಎಂದು ರಜನಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here