ಕರ್ತವ್ಯ ನಿಷ್ಠೆಯನ್ನು ಗಮನದಲ್ಲಿ ಇಟ್ಟುಕೊಂಡು ತಮ್ಮ ಕೆಲಸ, ಕಾರ್ಯವನ್ನು ನಿರ್ವಹಿಸಬೇಕಿದ್ದ ಪೊಲೀಸ್ ಸಿಬ್ಬಂದಿಯನ್ನು ಎ. ನಾಗರಾಜ್ ಅವರು ಆರು ತಿಂಗಳ ಕಾಲ ಅಮಾನತು ಮಾಡಿ ಎಂದು ಖಡಕ್ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪವೆಸಗಿದ ಕಾರಣ ರಾಜಭವನದ ಮೂರು ಪೇದೆಗಳನ್ನು ಆರು ತಿಂಗಳು ಸಸ್ಪೆಂಡ್ ಮಾಡಲಾಗಿದ್ದು, ರಾಜಭವನದ ಪೇದೆಗಳಾದ ಹುಚ್ಚೇಗೌಡ, ತಿಮ್ಮಯ್ಯ ಮತ್ತು ಪ್ರವೀಣ್ ಕುಮಾರ್ ಕರ್ತವ್ಯ ಮರೆತು ನಡೆದ ಪೊಲೀಸ್ ಪೇದೆಗಳು.
ರಾಜಭವನದಿಂದ ಈ ಮೂವರು ಪೇದೆಗಳು ಯಾವುದೇ ಅನುಮತಿಯನ್ನು ಪಡೆಯದೇ ತಮ್ಮ ವರ್ಗಾವಣೆ ಕುರಿತು ಎಸ್ಐಡಿ ಮೇಲಧಿಕಾರಿ ಭೇಟಿಗೆ ಹೊರಟಿದ್ದರು. ಈ ಒಂದು ಪ್ರಮುಖ ಕಾರಣದ ಹಿನ್ನೆಲೆ ಒಂದನೇ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಮಾಂಡೆಟ್ ಮತ್ತು ಶಿಸ್ತು ಪ್ರಾಧಿಕಾರಿ ವಿ. ನಾಗರಾಜ್ ಅವರು ಮೂರು ಪೊಲೀಸ್ ಪೇದಗಳನ್ನು ಆರು ತಿಂಗಳ ಅವಧಿಯವರೆಗೂ ಅಮಾನತು ಮಾಡಿದ್ದಾರೆ.
ಈ ಕುರಿತು ಮಾತನಾಡಿದ ವಿ. ನಾಗರಾಜ್ ಅವರು ಬಹುದಿನಗಳಿಂದ ರಾಜಭವನದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಪೇದೆಗಳು, ವರ್ಗಾವಣೆಗಾಗಿ ಹೋಗಿದ್ದರು ಹೀಗಾಗಿ ಅವರನ್ನು ಮೂಲ ಕಾರಣದಿಂದ ಆರು ತಿಂಗಳ ಕಾಲ ಅಮಾನತು ಮಾಡಲಾಗಿದೆ ಎಂದು ಹೇಳಿದರು. ಈ ಬಗ್ಗೆ ಹೆಚ್ಚು ಮಾಹಿತಿಯನ್ನು ಕಲೆ ಹಾಕಲು ತನಿಖೆ ಆರಂಭಿಸಿ ಎಂದು ನಾಗರಾಜ್ ಅವರು ಆದೇಶ ನೀಡಿದ್ದಾರೆ.