ಬೆಳಗಾವಿಯಲ್ಲಿ ಮುಂದುವರಿದಿದೆ ವರುಣನ ಆರ್ಭಟ.!

0
129

ಕಳೆದ ಒಂದು ವಾರದಿಂದ ಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಕರ್ನಾಟಕಕ್ಕೂ ಮಳೆಯ ಆರ್ಭಟ ತಟ್ಟಿದೆ. ಕೃಷ್ಣಾ ನದಿ, ಪವನ ಡ್ಯಾಂ ಸಂಪೂರ್ಣವಾಗಿ ಭರ್ತಿಯಾಗಿದ್ದು, ಬೆಳಗಾವಿ ಜಿಲ್ಲೆಗೆ ಪ್ರವಾಹ ಭೀತಿ ಎದುರಾಗಿದೆ. ಇಂದು ಬೆಳಗ್ಗೆಯಿಂದಲೇ ಮಳೆಯ ಆರ್ಭಟ ಜೋರಾಗಿದ್ದು, ಕರ್ನಾಟಕ- ಗೋವಾ ಗಡಿ ಭಾಗದಲ್ಲಿ ಗುಡ್ಡ ಕುಸಿದಿದೆ.

ಚೋರ್ಲಾ ಘಾಟ್ನಲ್ಲಿ ಕುಸಿಯುತ್ತಿರುವ ಗುಡ್ಡ ಪ್ರದೇಶಗಳು, ಗುಡ್ಡ ಕುಸಿತದಿಂದ ಗೋವಾ ಹಾಗೂ ಕರ್ನಾಟಕ ಗಡಿ ಸಂಪರ್ಕ ಸಂಪೂರ್ಣ ಕಡಿತವಾಗಿದ್ದು, ರಸ್ತೆ ಸಂಚಾರದಲ್ಲಿ ತೊಡಗಿದ್ದ ಲಾರಿಯೊಂದು ಗುಡ್ಡ ಕುಸಿದ ಪರಿಣಾಮ ಮಣ್ಣಿನ ರಭಸಕ್ಕೆ ಉರುಳಿ ಬಿದ್ದಿದೆ. ಲಾರಿಯಲ್ಲಿ ನೂರಕ್ಕೂ ಹೆಚ್ಚು ಕುರಿ, ಜಾನುವಾರುಗಳು ಇದ್ದವು ಎನ್ನಲಾಗಿದೆ. ಮಳೆಯ ಆರ್ಭಟದಿಂದ ಬೆಳಗಾವಿ ಜಿಲ್ಲೆ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ ಹಾಗೂ ಜನ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದೇ ರೀತಿ ಮಳೆಯ ಆರ್ಭಟ ಮುಂದುವರಿದರೆ, ಪ್ರವಾಹ ಭೀತಿ ಎದುರಾಗುವ ಸನ್ನಿವೇಶಗಳು ಇದ್ದು, ಮಳೆಯ ಆರ್ಭಟ ಹೆಚ್ಚಿರುವ ಕಾರಣ ಗುಡ್ಡ ನಿರಂತರವಾಗಿ ಕುಸಿಯುತ್ತಿದೆ ಇದರ ಹಿನ್ನೆಲೆ ಅಧಿಕಾರಿಗಳು ಆ ಮಾರ್ಗದಲ್ಲಿ ಯಾರೂ ಸಂಚರಿಸಬಾರದು ಎಂಬ ಮುನ್ನೆಚ್ಚರಿಕೆ ಕ್ರಮ ನೀಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಬೆಳಗಾವಿ ಜಿಲ್ಲಾಡಳಿತ ಹಾಗೂ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತು ಸೂಕ್ತ ಭದ್ರತೆಯನ್ನು ಆಯಾ ಪ್ರದೇಶದ ಜನರಿಗೆ ನೀಡಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here