ಕನ್ನಡಿಗರಿಗೆ ಇದೆಂಥಾ ಅನ್ಯಾಯ, 2200 ಹುದ್ದೆಗಳಲ್ಲಿ ಕನ್ನಡಿಗರಿಗೆ ಸಿಕ್ಕಿದೆಷ್ಟು ಗೊತ್ತಾ..?!

0
270

ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆ. ಕರ್ನಾಟಕ ರಾಜ್ಯದಲ್ಲೇ 92ರಷ್ಟು ಸೇವಾ ಜಾಲವನ್ನು ಹೊಂದಿರುವ ನೈಋತ್ಯ ರೈಲ್ವೆಯ 2017-18ನೇ ಸಾಲಿನ 2,200 ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ದೊರೆತಿದ್ದು ಶೇಕಡಾ 1ರಷ್ಟು ಉದ್ಯೋಗ ಮಾತ್ರ. ಅಂದರೆ 2200 ಹುದ್ದೆಗಳಲ್ಲಿ ಕನ್ನಡಿಗರಿಗೆ ಸಿಕ್ಕಿದ್ದು ಕೇವಲ 22..! ಇನ್ನು ಕನ್ನಡಿಗರಿಗೆ ಆಗಿರುವ ಈ ಅನ್ಯಾಯಕ್ಕೆ ಅನೇಕ ಕಾರಣಗಳಿವೆ. ಕನ್ನಡಿಗರಿಗೆ ಕೇಂದ್ರ ಸರ್ಕಾರದ ರೈಲ್ವೆ ಉದ್ಯೋಗ, ಸೌಲಭ್ಯಗಳ ಮಾಹಿತಿ ದೊರೆಯದಂತೆ ಮಾಡುವುದು, ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆ, ಹಿಂದಿ ಭಾಷೆ ಸೇರಿದಂತೆ ಅನೇಕ ಕಾರಣಗಳಿವೆ.

ಹೌದು, ಕೇಂದ್ರ ಸರ್ಕಾರದ ಇಲಾಖೆಗಳು, ಕಚೇರಿಗಳು ನೀಡುವ ಜಾಹಿರಾತುಗಳಲ್ಲಿ ಶೇಕಡಾ 50ರಷ್ಟು ಜಾಹಿರಾತುಗಳು ಕಡ್ಡಾಯವಾಗಿ ಹಿಂದಿ ಭಾಷೆಯಲ್ಲಿರಬೇಕು ಎಂಬ ಆದೇಶವಿದೆ. ಹೀಗಾಗಿ ರೈಲ್ವೆಯಲ್ಲಿ ನಡೆಯುವ ಬಹುತೇಕ ನೇಮಕಾತಿಗಳ ಜಾಹಿರಾತುಗಳು ಹಿಂದಿಯಲ್ಲೇ ಇರುತ್ತದೆ. ಇದರಿಂದ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೂ ರೈಲ್ವೆ ನೇಮಕಾತಿಯಲ್ಲಿ ಭಾರೀ ಹಿನ್ನಡೆಯಾಗುತ್ತಿದೆ. ಈ ಕ್ರಮದ ಫಲವಾಗಿ ಕರ್ನಾಟಕ ಸೇರಿದಂತೆ ಹಿಂದಿಯೇತರ ಭಾಷಾ ಬಳಕೆಯ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರದ ಮಾಹಿತಿಗಳೇ ದೊರೆಯುತ್ತಿಲ್ಲ.

ಇನ್ನು ರಾಜ್ಯದಲ್ಲಿರುವ ನೈಋತ್ಯ ರೈಲ್ವೆಗೆ ನಡೆದ ನೇಮಕಾತಿ ಮಾಹಿತಿ ಸುದ್ದಿ ಪತ್ರಿಕೆಗಳಲ್ಲಿ ಜಾಹಿರಾತು ಬರಲೇ ಇಲ್ಲ. ಕರ್ನಾಟಕದಲ್ಲಿನ ರೈಲ್ವೆ ಉದ್ಯೋಗದ ಮಾಹಿತಿ ಬಗ್ಗೆ ರೈಲ್ವೆ ನೇಮಕಾತಿ ಮಂಡಳಿ ಮಧ್ಯಪ್ರದೇಶ, ಗುಜರಾತ್, ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶದಲ್ಲೇ ಹೆಚ್ಚು ಜಾಹೀರಾತು ನೀಡಿದೆ. ಹೀಗಾಗಿ ಎಲ್ಲ ಉದ್ಯೋಗಗಳು ಉತ್ತರ ಭಾರತೀಯರ ಪಾಲಾಗಿವೆ. ಅಚ್ಚರಿ ಎಂದರೆ ನೈಋತ್ಯ ರೈಲ್ವೆಗೆ 2011ರಲ್ಲಿ ನಡೆದಿದ್ದ ನೇಮಕಾತಿಯಲ್ಲಿ 4,590 ಹುದ್ದೆಗಳಲ್ಲಿ 2,200 ಹುದ್ದೆಗಳು ಕನ್ನಡಿಗರಿಗೆ ದೊರೆತಿತ್ತು.

ಕೆನೆಪದರ ನಿಯಮಾವಳಿ ವ್ಯತ್ಯಾಸ, ಕೇಂದ್ರ ಹಾಗೂ ರಾಜ್ಯ ಒಬಿಸಿ ಪಟ್ಟಿಯಲ್ಲಿನ ವ್ಯತ್ಯಾಸದಿಂದಾಗಿ ಕನ್ನಡಿಗರು ಕಡಿಮೆ ನೇಮಕವಾಗಿದ್ದಾರೆ ಎಂದು ಕನ್ನಡಿಗ ಯುವಕರು ಹೋರಾಟ ಮಾಡಿದ್ದರು.

LEAVE A REPLY

Please enter your comment!
Please enter your name here