ಬಿಸಿಸಿಐನಿಂದ ರಾಹುಲ್ ದ್ರಾವಿಡ್‍ಗೆ ಅವಮಾನ..?!

0
399

ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್‍ಗೆ ಬಿಸಿಸಿಐ ನೋಟಿಸ್ ನೀಡಿದೆ. ಹೌದು, ಸ್ವಹಿತಾಸಕ್ತಿ ಸಂಘರ್ಷದ ಕಾರಣಕ್ಕೆ ದ್ರಾವಿಡ್‍ಗೆ ಬಿಸಿಸಿಐ ನೋಟಿಸ್ ಜಾರಿ ಮಾಡಿದ್ದು, ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಇನ್ನು ನೋಟಿಸ್‍ಗೆ 2 ವಾರದಲ್ಲಿ ಉತ್ತರ ನೀಡುವಂತೆಯೂ ಸೂಚಿಸಲಾಗಿದೆ. ಆದರೆ ಬಿಸಿಸಿಐ ನಡೆಯನ್ನು ಅನೇಕ ಕ್ರಿಕೆಟಿಗರು ವಿರೋಧಿಸಿದ್ದಾರೆ.

ಸೌರವ್ ಗಂಗೂಲಿ ಹಾಗೂ ಹರ್ಭಜನ್ ಸಿಂಗ್ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಭಾರತೀಯ ಕ್ರಿಕೆಟ್‍ನ್ನು ದೇವರೇ ಕಾಪಾಡಬೇಕು’ ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ.

ಹರ್ಭಜನ್ ಸಿಂಗ್ ಕೂಡ ಟ್ವೀಟ್ ಮಾಡಿದ್ದು, “ಎತ್ತ ಸಾಗುತ್ತಿದೆ? ಇದು ಆತಂಕಕಾರಿ ಬೆಳವಣಿಗೆ. ರಾಹುಲ್ ದ್ರಾವಿಡ್‍ಗಿಂತ ಉತ್ಯುತ್ತಮ ಆಟಗಾರ ಹಾಗೂ ವ್ಯಕ್ತಿ ಭಾರತೀಯ ಕ್ರಿಕೆಟ್‍ನಲ್ಲಿ ಇಲ್ಲ. ಈ ದಿಗ್ಗಜನಿಗೆ ನೋಟಿಸ್ ನೀಡೋ ಮೂಲಕ ಬಿಸಿಸಿಐ ಅವಮಾನ ಮಾಡಿದೆ. ಭಾರತದ ಕ್ರಿಕೆಟ್ ಅಭಿವೃದ್ದಿಗೆ ದ್ರಾವಿಡ್ ಸೇವೆ ಅಗತ್ಯ. ನಿಜ. ದೇವರೇ ಕಾಪಾಡಬೇಕು” ಎಂದಿದ್ದಾರೆ.

LEAVE A REPLY

Please enter your comment!
Please enter your name here