ಮೆಡಿಕಲ್ ಟೆಸ್ಟ್ ವೇಳೆ ಡಾಕ್ಟರ್​​​ಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ ರಾಗಿಣಿ…ಅವರು ಮಾಡಿದ್ದಾದ್ರೂ ಏನು ನೋಡಿ..!

0
234

ಇಷ್ಟು ದಿನ ಮಾಧ್ಯಮಗಳಲ್ಲಿ ಕೊರೊನಾ ಹೆಚ್ಚು ಸದ್ದು ಮಾಡುತ್ತಿತ್ತು. ಆದರೆ ಇದೀಗ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಪ್ರತಿದಿನ ಮಾಧ್ಯಮಗಳಿಗೆ ಆಹಾರವಾಗುತ್ತಿದ್ದಾರೆ. ಅವರು ಮಾಡಿರುವ ಕೆಲಸ ಕೂಡಾ ಅಂತದ್ದೇ ಬಿಡಿ. ಇಷ್ಟು ದಿನಗಳ ಕಾಲ ಸಿನಿಮಾ, ಪಾರ್ಟಿ, ಫಿಟ್ನೆಸ್ ಎಂದು ತಿರುಗಾಡಿಕೊಂಡು ಇದ್ದ ಈ ನಟಿಯರು ಈಗ ಸಿಸಿಬಿ ಪಂಜರದಲ್ಲಿದ್ದಾರೆ. ತಿಂಗಳ ಹಿಂದೆ ಕೆಲವು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದು, ಸ್ಯಾಂಡಲ್​ವುಡ್​​​ ನಟ-ನಟಿಯರು, ಸಂಗೀತ ನಿರ್ದೇಶಕರು ನಮ್ಮೊಂದಿಗೆ ಶಾಮೀಲಾಗಿದ್ಧಾರೆ ಎಂದು ಬಾಯಿ ಬಿಟ್ಟದ್ದೇ ತಡ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿದರು. ಒಬ್ಬೊಬ್ಬರಾಗಿ ತಮ್ಮ ವಶಕ್ಕೆ ಪಡೆದರು. ಅದರಲ್ಲಿ ರಾಗಿಣಿ ಬಾಯ್​ ಫ್ರೆಂಡ್ ಎನ್ನಲಾದ ಆರ್​​ಟಿಒ ಸಿಬ್ಬಂದಿ ರವಿಶಂಕರ್ ಕೂಡಾ ಒಬ್ಬರು. 35 ಸಾವಿರ ಸಂಬಳ ಪಡೆಯುತ್ತಿದ್ದ ಆತ ನಾನು ದಿನಕ್ಕೆ ರಾಗಿಣಿಗಾಗಿ 1 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದೇನೆ ಎಂದು ಹೇಳಿದ್ದರು.

ವಶಕ್ಕೆ ಪಡೆಯಲಾದ ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರು ಅದರ ಆಧಾರದ ಮೇಲೆ 1 ವಾರದ ಹಿಂದೆ ಬೆಳ್ಳಂಬೆಳಗ್ಗೆ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ಅವರ ಫೋನ್, ಲ್ಯಾಪ್​ಟಾಪ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡರು ರಾಗಿಣಿಯನ್ನು ತಮ್ಮ ವಶಕ್ಕೆ ಪಡೆದರು. ನಾಲ್ಕು ದಿನಗಳ ಹಿಂದಷ್ಟೇ ಸಂಜನಾ ಗಲ್ರಾನಿ ಮನೆ ಮೇಲೆ ಕೂಡಾ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ಅಲ್ಲೂ ಕೂಡಾ ಶೋಧ ಕಾರ್ಯ ನಡೆಸಿದ ಸಂಜನಾರನ್ನು ಹೆಚ್ಚಿನ ವಿಚಾರಣೆಗೆ ಕರೆತಂದು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದರು.

ಈ ನಡುವೆ ನಿನ್ನೆ ಇಬ್ಬರೂ ನಟಿಯರನ್ನು ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ರಕ್ತಪರೀಕ್ಷೆ ವೇಳೆ ಸಂಜನಾ ಪೊಲೀಸರೊಂದಿಗೆ ಕಿರಿಕಿರಿ ಮಾಡಿಕೊಂಡಿದ್ದಾರೆ. ನಟಿ ರಾಗಿಣಿ ಒಂದು ಹೆಜ್ಜೆ ಮುಂದೆ ಹೋಗಿ ವೈದ್ಯರನ್ನೇ ಯಾಮಾರಿಸಲು ಯತ್ನಿಸಿದ್ದಾರೆ. ಮೂತ್ರ ಪರೀಕ್ಷೆಗೆಂದು ಸಂಗ್ರಹಿಸಲಾಗಿದ್ದ ಯೂರಿನ್​ ಟ್ಯೂಬ್​​​​ನಲ್ಲಿ ​​​ರಾಗಿಣಿ ನೀರನ್ನು ಬೆರೆಸಿ ತಂದುಕೊಟ್ಟಿದ್ದಾರೆ. ಪರೀಕ್ಷೆ ವೇಳೆ ಯೂರಿನ್​​ನಲ್ಲಿ ನೀರು ಬೆರೆಸಿರುವ ವಿಚಾರ ವೈದ್ಯರಿಗೆ ತಿಳಿದಿದೆ. ಕೂಡಲೇ ಡಾಕ್ಟರ್​ಗಳು ಈ ವಿಚಾರವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಕೂಡಲೇ ರಾಗಿಣಿಗೆ ಸಿಸಿಬಿ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ. ನಮ್ಮನ್ನು ಮೋಸ ಮಾಡಲು ಯತ್ನಿಸಬೇಡಿ ರಾಗಿಣಿ ಎಂದು ಎಚ್ಚರಿಸಿದ್ದಾರೆ. ನಂತರ ಮತ್ತೆ ರಾಗಿಣಿ ಯೂರಿನ್ ಸಂಗ್ರಹಿಸಿ ನೀಡಿದ್ದಾರೆ.

ಹೇರ್ ಪೋಲಿಕ್ ಟೆಸ್ಟ್ ವೇಳೆ ಕೂಡಾ ಇಬ್ಬರೂ ನಟಿಯರು ಕಿರುಚಾಡಿದ್ದಾರೆ. ನಮ್ಮ ಜೀವನ ಈಗಾಗಲೇ ಹಾಳಾಗಿ ಹೋಗಿದೆ. ನೀವು ಏನೇ ಪರೀಕ್ಷೆ ಮಾಡಬೇಕಿದ್ದರೂ ನಮ್ಮ ವಕೀಲರು ಬರಲಿ ಅವರ ಮುಂದೆಯೇ ಮಾಡಿ ಎಂದು ಇಬ್ಬರೂ ಅರಚಾಡಿದ್ದಾರೆ. ನಿನ್ನೆ ರಾಗಿಣಿ ಕಸ್ಟಡಿ ಅಂತ್ಯವಾಗಿತ್ತು. ಸಿಸಿಬಿ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಗಿಣಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಇದೀಗ ಮತ್ತೆ 3 ದಿನಗಳ ಕಾಲ ಸಿಸಿಬಿ ಪೊಲೀಸರು ರಾಗಿಣಿಯನ್ನು ಕಸ್ಟಡಿಗೆ ಪಡೆದಿದ್ದಾರೆ. ರಾಗಿಣಿ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು ಮೂರು ದಿನಗಳಲ್ಲಿ ರಾಗಿಣಿ ಹೊರಗಾ…ಒಳಗಾ ನಿರ್ಧಾರವಾಗಲಿದೆ.

ನಿರಂತರ ಸಂಶೋಧನೆ ಹಾಗೂ ಕಠಿಣ ಪರಿಶ್ರಮದಿಂದ ಶ್ರೀ ರವಿಶಂಕರ್ ಗುರೂಜಿಯವರು ತಯಾರಿಸಿರುವ ‘ಶಂಕರಾಮೃತ’ ಅನೇಕ ಸಮಸ್ಯೆಗಳಿಗೆ ಮದ್ದು. 16 ವರ್ಷ ಮೇಲ್ಪಟ್ಟ ವಯಸ್ಸಿನವರು ಈ ಶಂಕರಾಮೃತವನ್ನು ಸೇವಿಸಬಹುದು. ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಡಯಾಬಿಟಿಸ್, ಶೀತ, ಕೆಮ್ಮು ಸೇರಿದಂತೆ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ‘ಶಂಕರಾಮೃತ’ ರಾಮಬಾಣ. ಏಕೆಂದರೆ ಅಶ್ವಗಂಧ, ನೆಲ್ಲಿಕಾಯಿ, ಅಮೃತಬಳ್ಳಿ, ಶತಾವರಿ, ಬಾಲ, ಮಂಜಿಷ್ಟ, ಕಾಪಿಕಚ್ಚು ಸೇರಿದಂತೆ ಬಹೋಪಯೋಗಿ ಗಿಡಮೂಲಿಕೆಗಳನ್ನು ಬಳಸಿ ಶಂಕರಾಮೃತವನ್ನು ತಯಾರಿಸಲಾಗಿದೆ. ಇದನ್ನು ಬೆಳಗ್ಗೆ ತಿಂಡಿಗೂ ಮುನ್ನ 15 ಮಿಲಿ ರಾತ್ರಿ ಊಟಕ್ಕೂ ಮುನ್ನ 15 ಮಿಲಿ ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹದಲ್ಲಾಗುವ ಬದಲಾವಣೆಯನ್ನು ಗಮನಿಸಬಹುದು.

LEAVE A REPLY

Please enter your comment!
Please enter your name here