ಸುಪ್ರೀಂ ತೀರ್ಪಿನ ಭವಿಷ್ಯ ನುಡಿದ ಅನರ್ಹ ಶಾಸಕ ಆರ್ ಶಂಕರ್…!

0
494

ಇಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯುವ ಹಿನ್ನೆಲೆ ಪ್ರತಿಕ್ರಿಯಿಸಿರುವ ಅನರ್ಹ ಶಾಸಕ ಆರ್. ಶಂಕರ್ ನನ್ನನ್ನು ಅನರ್ಹಗೊಳಿಸಿರುವ ಸ್ಪೀಕರ್ ರಮೇಶ್ ಕುಮಾರ್ ಕ್ರಮ ಸರಿಯಲ್ಲ .! ಹಾಗಾಗಿ ಸುಪ್ರೀಂಕೋರ್ಟಿನಲ್ಲಿ ಖಂಡಿತವಾಗಿ ಇಂದು ನನ್ನ ಪರ ತೀರ್ಪು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟಿನಲ್ಲಿ ಇಂದು ಎಲ್ಲ ಅನರ್ಹ ಶಾಸಕರ ಅರ್ಜಿ ವಿಚಾರಣೆ ಹಿನ್ನೆಲೆಯ ಮಾಧ್ಯಮದವರೊಡನೆ ಮಾತನಾಡಿದ ಆರ್ ಶಂಕರ್ ಅವರು ನನ್ನ ಪರ ಶೇಕಡ ನೂರರಷ್ಟು ತೀರ್ಪು ನನ್ನ ಕಡೆ ಆಗಲಿದೆ. ಅನರ್ಹರ ಪರವಾಗಿಯೇ ಬರಲಿದೆ ಎಂದು ದೃಢವಾಗಿ ಹೇಳಿದ್ದಾರೆ.

ನಾನು ಇದುವರೆಗೂ ಸ್ಪೀಕರ್ ಗೆ ಯಾವ ಪತ್ರವನ್ನು ಬರೆದು ನೀಡಿಲ್ಲ, ಬದಲಾಗಿ ಸಿದ್ದರಾಮಯ್ಯನವರು ಬರೆದಿದ್ದ ಪತ್ರವನ್ನು ಸ್ಪೀಕರ್ ಅವರಿಗೆ ಕೊಟ್ಟಿದ್ದೆ ಅಷ್ಟೆ.! ಈ ಕುರಿತು ಸ್ಪೀಕರ್ ನನ್ನ ಬಳಿ ನಿನ್ನ ಪ್ರತಿಕ್ರಿಯೆಯನ್ನು.? ದಾಖಲೆಯಿದ್ದರೆ ಕೋಡು ಎಂದು ಕೇಳಿದ್ದರು. ಅನಂತರ ನಾನು ಮತ್ತೆ ಸ್ಪೀಕರ್ ಅವರನ್ನು ಭೇಟಿಯಾಗಿ ಮಾತನಾಡಿಲ್ಲ. ನನ್ನನ್ನು ಅನರ್ಹಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ.!? ಇದು ತಪ್ಪು ಹಾಗಾಗಿ ಸುಪ್ರೀಂನಿಂದ ಬರುವ ತೀರ್ಪು ನನ್ನ ಪರ ಆಗಲಿದೆ. ವಿಚಾರಣೆ ಕುರಿತು ನನ್ನ ಪರ ವಾದ ಮಂಡಿಸಲು ಪ್ರತ್ಯೇಕ ವಕೀಲರನ್ನು ಕೂಡ ನಿಯೋಜಿಸಿದ್ದೇವೆ ಎಂದು ಹೇಳಿದರು.

ಅನರ್ಹ ಶಾಸಕರಾದ ಭೈರತಿ ಬಸವರಾಜು, ಶಿವರಾಮ ಹೆಬ್ಬಾರ್, ರಮೇಶ್ ಜಾರಕಿಹೊಳಿ, ಎಸ್. ಟಿ ಸೋಮಶೇಖರ್ ಇನ್ನೂ ಹಲವರು ಬೆಂಗಳೂರಿನ ಏರ್ಪೋರ್ಟ್ಗೆ ಬಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅನರ್ಹ ಶಾಸಕರು ನಾವು ಯಾವ ತಪ್ಪು ಮಾಡಿಲ್ಲ ಖಂಡಿತವಾಗಿ ಚುನಾವಣೆಗೆ ನಿಲ್ಲುತ್ತೇವೆ ಎಂದು ಭರವಸೆಯ ಮಾತುಗಳನ್ನು ಹೇಳಿದ್ದಾರೆ. ಇಂದು ಸುಪ್ರೀಂ ಕೋರ್ಟಿನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಸುದೀರ್ಘವಾಗಿ ನಡೆಯಲಿದ್ದು, ಅನರ್ಹ ಶಾಸಕರ ಪರ ವಾದ ಮಂಡಿಸಲು ಮುಕುಲ್ ರೋಹಟಗಿ, ಹರೀಶ್ ಸಾಳ್ವೆ, ಗಿರಿ ಅವರು ಸೇರಿದಂತೆ ೪ ಜನ ವಕೀಲರು ವಾದ ಮಂಡಿಸಲಿದ್ದಾರೆ ಎಂಬುದು ತಿಳಿದು ಬಂದಿದೆ. ಅನರ್ಹ ಶಾಸಕರ ಕುರಿತು ಸುಪ್ರೀಂ ನೀಡುವ ಮಹತ್ವದ ತೀರ್ಪಿಗಾಗಿ ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here