ಕುರಾನ್ ಪೈಗಂಬರ್ ಅರಬ್ಬಿ ಜನರಿಗೆ ಮಾತ್ರ ಅನ್ವಯ ?!!?

0
377

ಇಸ್ಲಾಮ್ ಹುಟ್ಟಿದ್ದು ಅರೇಬ್ಬಿ ಜನರಿಗಾಗಿ, ಕುರಾನಿನ ವಚನಗಳು ಅನ್ವಯಿಸುವುದು ಅರೆಬ್ಬಿ ಬಾಷೆಯ ಜನರಿಗೆ ಮಾತ್ರ, ಇಸ್ಲಾಮ್ ಮೆಕ್ಕಾದ ಸುತ್ತ ಮುತ್ತಲಿನ ಜನರಿಗೆ ಮಾತ್ರ ಸೀಮಿತ. ಕುರಾನನ್ನು ರಚಿಸಿದ್ದು ಪೈಗಂಬರರ ಕಾಲಮಾನದವರಿಗಾಗಿ ಇಂದಿಗೆ ಅದು ಅಪ್ರಸ್ತುತ.

ಆದರೆ ಇದನ್ನು ಬಲವಂತವಾಗಿ ಜನರ ಮೇಲಿರುವ ಪ್ರಯತ್ನಗಳು ಜಗತ್ತಿನಾದ್ಯಂತ ಪ್ರತಿನಿತ್ಯ ನಡೆಯುತ್ತಲಿವೇ. ಈ ಪ್ರಯತ್ನಗಳು ತೀವ್ರವಾಗಿ ಭಯೋತ್ಪಾದನೆಯ ಸ್ವರೂಪ ಪಡೆದಿದೆ. ಆ ಮೂಲಕ ಜಗತ್ತಿನ ನೆಮ್ಮದಿ ಹಾಳುಮಾಡಿದೆ.

ಕುರಾನ್ ಸ್ವತಃ ಈ ಸತ್ಯವನ್ನು ಬಿಚ್ಚಿಟ್ಟಿದೆ ನೋಡಿ:

ಇದು, ನಾವು ಇಳಿಸಿಕೊಟ್ಟಿರುವ ಸಮೃದ್ಧಿ ತುಂಬಿದ ಗ್ರಂಥ – ತನಗಿಂತ ಮೊದಲು ಬಂದಿದ್ದ ಗ್ರಂಥಗಳನ್ನು ಇದು ಸಮರ್ಥಿಸುತ್ತದೆ. ಇದರ ಮೂಲಕ ನೀವು ಮಕ್ಕಾದವರನ್ನು ಮತ್ತು ಅದರ ಸುತ್ತ ಮುತ್ತಲಿನವರನ್ನು ಎಚ್ಚರಿಸಬೇಕೆಂದು ಇದನ್ನು ಕಳಿಸಲಾಗಿದೆ. ಪರಲೋಕದಲ್ಲಿ ನಂಬಿಕೆ ಉಳ್ಳವರು, ಇದರಲ್ಲಿ ನಂಬಿಕೆ ಇರಿಸುತ್ತಾರೆ ಮತ್ತು ಅವರು ತಮ್ಮ ನಮಾಝ್‌ಗಳನ್ನು ಕಾಪಾಡುತ್ತಾರೆ. [ ಕುರಾನ್ 6.92 ]

ನೋಡಿ ಕುರಾನಲ್ಲಂತೂ ಸ್ಪಷ್ಟವಾಗಿ ಮೆಕ್ಕಾ ನಿವಾಸಿಗಳಿಗಾಗಿ ಮಾತ್ರವೇ ಇಸ್ಲಾಮ್ ಎಂದು ಆದೇಶಿಸಲಾಗಿದೆ. ಮತ್ತೊಂದು ಕಡೆ ಇದನ್ನು ಅರೆಬ್ಬಿ ಭಾಷೆಯ ಜನರಿಗೆ ಮುನ್ನೆಚ್ಚರಿಕೆ ನೀಡಲಿಕ್ಕಾಗಿ ಎಂದು ಹೇಳಿದೆ.

ಈ ರೀತಿ ನಾವು ನಿಮಗೆ ದಿವ್ಯವಾಣಿಯ ಮೂಲಕ ಅರಬೀ ಭಾಷೆಯ ಕುರ್‌ಆನ್‌ಅನ್ನು ನೀಡಿರುವೆವು. ನೀವು ಕೇಂದ್ರ ನಗರ (ಮಕ್ಕಾ)ದವರನ್ನು ಮತ್ತು ಅದರ ಸುತ್ತಮುತ್ತಲಿನವರನ್ನು ಎಚ್ಚರಿಸಬೇಕೆಂದು ಹಾಗೂ ನೀವು, ನಿಸ್ಸಂದೇಹವಾಗಿ ಬರಲಿರುವ ಸಮ್ಮೇಳನದ ದಿನ (ಪುನರುತ್ಥಾನ)ದ ಕುರಿತು ಮುನ್ನೆಚ್ಚರಿಕೆ ನೀಡಬೇಕೆಂದು. ಕೊನೆಗೆ ಒಂದು ಪಂಗಡವು ಸ್ವರ್ಗದಲ್ಲಿರುವುದು ಮತ್ತು ಇನ್ನೊಂದು ಪಂಗಡವು ನರಕದಲ್ಲಿರುವುದು. [ ಕುರಾನ್ 42.7]

(ದೂತರೇ,) ಅವರೇನು, ಈತನೇ ಇದನ್ನು ರಚಿಸಿಕೊಂಡಿದ್ದಾನೆ ಎನ್ನುತ್ತಾರೆಯೇ? ನಿಜವಾಗಿ ಇದು ನಿಮ್ಮ ಒಡೆಯನ ಕಡೆಯಿಂದ ಬಂದಿರುವ ಸತ್ಯವಾಗಿದೆ. ನಿಮಗಿಂತ ಮೊದಲು, ತಮ್ಮ ಬಳಿಗೆ ಎಚ್ಚರಿಸುವವರು ಬಂದಿಲ್ಲದ ಜನಾಂಗವೊಂದನ್ನು ನೀವು ಎಚ್ಚರಿಸಬೇಕೆಂದು. ಮತ್ತು ಅವರು (ಈ ಮೂಲಕ) ಸರಿದಾರಿಗೆ ಬರಬಹುದೆಂದು (ಇದನ್ನು ಕಳಿಸಲಾಗಿದೆ). [ ಕುರಾನ್ 32.2]

ಅಲ್ಲದೆ ಕುರಾನಿನಲ್ಲಿ ಪೈಗಂಬರರ ಮನೆಯೊಳಗೆ ಅನುಮತಿ ಇಲ್ಲದೆ ಹೋಗಬೇಡಿ, ಪೈಗಂಬರರ ಪತ್ನಿಯೊಂದಿಗೆ ಮಾತನಾಡಬೇಡಿ ಎನ್ನುವಂತಹ ವಯಕ್ತಿಕ ಸಂದೇಶ ಬಹಳಷ್ಟು ಸಿಗುತವೇ ಇದನ್ನೆಲ್ಲಾ ಈ ಕಾಲಕ್ಕೆ ಅನ್ವಯಿಸುವುದು ಅಸಾಧ್ಯ ಮತ್ತು ದೇವರು ಯಾವುದೋ ಒಂದು ಕಾಲಕ್ಕೆ ಯಾರದೋ ವಯಕ್ತಿಕ ವಿಚಾರಗಳನ್ನು ಹೇಳುವುದಿಲ್ಲವಾದ್ದರಿಂದ ಕುರಾನ್ ಈ ಕಾಲಕ್ಕೆ ಅಪ್ರಸ್ತುತ ಎಂದು ಹೇಳಬೇಕಾಗುತ್ತದೆ.

ಅರೇಬಿಯಾ ವಾತಾವರಣ, ಸ್ಥಿತಿ,ಗತಿಗಳ ಆಧಾರ ಮೇಲೆ ರೂಪಗೊಂಡ ಆಚರಣೆಗಳನ್ನು ಇತರೆ ಜನರ ಮೇಲೆ ಏರುವುದು ಅಕ್ಷಮ್ಯ ಅಪರಾಧ.

ಸುನ್ನತ್ ನಂತಹ ಆಚರಣೆಗಳೆಲ್ಲವೂ ಅರೇಬಿಯಾದ ಜನರಿಗೆ ಅನ್ವಯಿಸುವಂತಹವುಗಳು, ಅರೇಬಿಯಾದಲ್ಲಿ ನೀರು ಸಿಗುವುದು ಬಹಳ ಕಷ್ಟವಾಗಿತ್ತು ಪ್ರತಿನಿತ್ಯ ಸ್ನಾನಾದಿಗಳನ್ನು ಮಾಡಲು ನೀರಿನ ಕೊರತೆಯಿದ್ದರಿಂದ ಸುನ್ನತ್ ನಂತಹ ಆಚರಣೆಗಳು ಹುಟ್ಟಿಕೊಂಡಿತು, ಈಗಲೂ ಕೂಡ ಮುಸ್ಲಿಮರು ಮೂತ್ರ ಮಾಡಿದ ನಂತರ ಇಟ್ಟಿಗೆಯ ತುಂಡನ್ನು ತಮ್ಮ ಶಿಶ್ನಕ್ಕೆ ಮುಟ್ಟಿಸಿಕೊಂಡು ಸ್ವಚ್ಛಗೊಳಿಸಿಕೊಳ್ಳುತ್ತಾರೆ ಏಕೆಂದರೆ ಮೂತ್ರವು ಬಟ್ಟೆಗೆ ಹತ್ತಬಾರದು ಎನ್ನುವ ಕಾರಣಕ್ಕೆ ಬಟ್ಟೆಗೆ ಹತ್ತಿದರೆ ಅದನ್ನು ತೊಳೆಯ ಬೇಕಾಗುತ್ತದೆ, ಅರೇಬಿಯಾದಲ್ಲಿ ಬಟ್ಟೆಗಳನ್ನು ಹೊಗೆಯಲು ನೀರಿನ ಸಮಸ್ಯೆ ಇದ್ದರಿಂದ ಈ ರೀತಿಯ ಉಪಾಯಗಳನ್ನು ಕಂಡುಕೊಳ್ಳಲಾಯಿತು.

ಆದರೆ ಭಾರತದಲ್ಲೆನ್ನೂ ನೀರಿನ ಸಮಸ್ಯೆ ಇಲ್ಲ, ಹಾಗಾಗಿ ಇತರೆ ಕಡೆಗಳಲ್ಲಿ ಈ ರೀತಿಯ ಆಚರಣೆಗಳು ಅಪ್ರಸ್ತುತ.

LEAVE A REPLY

Please enter your comment!
Please enter your name here