ಶ್ವೇತಾ ಚಂಗಪ್ಪ ಬಗ್ಗೆ ಅಪಪ್ರಚಾರ : ಸಿಟ್ಟಾದ `ಮಜಾಟಾಕೀಸ್ ರಾಣಿ’

0
815

ಕಿರುತೆರೆ ಪ್ರಿಯರಿಗೆ ಮನರಂಜನೆ ನೀಡಲು ಕನ್ನಡದಲ್ಲಿ ಸಾಕಷ್ಟು ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ವಾರವೆಲ್ಲಾ ಕೆಲಸದ ಜಂಜಾಟದಿಂದ ಬೇಸತ್ತವರಿಗೆ ಶನಿವಾರ ಮತ್ತು ಭಾನುವಾರ ಮನಸ್ಸು ಪೂರಕವಾಗಿ ನಗುವ ದಿನ. ಯಾಕೆಂದರೆ ಪ್ರತಿ ವಾರದ ಅಂತ್ಯದಲ್ಲಿ ಕಿರುತೆರೆ ವಾಹಿನಿಗಳಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಮಜಾ ಟಾಕೀಸ್, ಕಾಮಿಡಿ ಕಿಲಾಡಿಗಳು, ಕಾಮಿಡಿ ಕಂಪನಿ,ಮಜಾ ಭಾರತ ಹೀಗೆ ಬೇರೆ ಬೇರೆ ವಾಹಿನಿಗಳಲ್ಲಿ ವಿಭಿನ್ನವಾದ ಕಾಮಿಡಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ.

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಸೃಜನ್ ಲೋಕೇಶ್ ನೇತೃತ್ವದ `ಮಜಾ ಟಾಕೀಸ್’ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ. ಇನ್ನು ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ, ಕುರಿ ಪ್ರತಾಪ್ ಮತ್ತು ಶ್ವೇತಾ ಚಂಗಪ್ಪ(ರಾಣಿ). ಕುರಿ ಇಲ್ಲಾ ಅಂದರೆ ಮಜಾ ಟಾಕೀಸೇ ಇಲ್ಲಾ ಎಂಬುವ ಮಾತುಗಳು ಕೇಳಿಬರುತ್ತಿವೆ. ಹಾಗೇಯೆ ರಾಣಿಯ ಮಾತು ಮತ್ತು ಪಂಚಿಂಗ್ ಡೈಲಾಗ್‍ಗಳೂ ಪ್ರೇಕ್ಷಕರನ್ನು ಹೊಟ್ಟೆಹುಣ್ಣಾಗುವಂತೆ ನಗಿಸುತ್ತದೆ.

ಕಿರುತೆರೆಯಲ್ಲಿ ಮಿಂಚಿದ್ದ ರಾಣಿ ಶ್ವೇತಾ ಚಂಗಪ್ಪ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸೀಮಂತ ಸಮಾರಂಭದ ಫೋಟೋಗಳು ಮತ್ತು ಬೇಬಿ ಬಂಪ್ ಫೋಟ್ ಶೂಟ್ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಇನ್ನು ತುಂಬು ಗರ್ಭಿಣಿ ಶ್ವೇತಾ ಚಂಗಪ್ಪ ಅವರಿಗೆ ಅಭಿಮಾನಿಗಳು,ಸ್ನೇಹಿತರು ಮತ್ತು ಕುಟುಂಬ ವರ್ಗದಿಂದ ಶುಭಾಶಯಗಳು ಹರಿದು ಬರುತ್ತಿದೆ. ಇದರಿಂದ ಮಜಾಟಾಕೀಸ್ ರಾಣಿ ಫುಲ್ ಕುಷಿಯಾಗಿದ್ದಾರೆ.

ವಿಷಯವೇನೆಂದರೆ ಸುಂದರವಾದ ಶ್ವೇತಾ ಚಂಗಪ್ಪ ಅವರ ಬೇಬಿ ಬಂಪ್ ಫೋಟೋಗಳಿಗೆ ನೆಟ್ಟಿಗರು ಅಸಭ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಮಜಾಟಾಕೀಸ್ ನಲ್ಲಿ ಸೃಜನ್ ಅವರ ಪತ್ನಿ ಪಾತ್ರವನ್ನು ಶ್ವೇತಾ ನಿರ್ವಹಿಸಿದ್ದಾರೆ. ಇದನ್ನು ಇಟ್ಟುಕೊಂಡು ಶ್ಚೇತಾ ಅವರ ಪೋಸ್ಟ್ ಗಳಲ್ಲಿ ಸೃಜನ್ ಲೋಕೇಶ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಇದನ್ನು ಕಂಡ ಮಜಾಟಾಕೀಸ್ ರಾಣಿ ನೆಟ್ಟಿಗರಿಗೆ ಖಾರಾವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಇನ್ನು ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಹಳ ಸಂತಸದಿಂದಿರುವ ಶ್ವೇತಾಗೆ ನೆಟ್ಟಿಗರು ಕೊನೆಗು ಸೃಜನ್ ತಂದೆಯಾಗುತ್ತಿದ್ದಿರಾ ಅಭಿನಂದನೆಗಳು,ಮಜಾ ಟಾಕೀಸ್‍ಗೆ ಹೊಸ ಎಂಟ್ರಿ’ ಎಂದು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಇದಕ್ಕೆ ಬೇಸತ್ತ ಶ್ವೇತಾ ನೀವೂ ಸೃಜನ್ ಲೋಕೆಶ್ ಅವರಿಗೆ ಯಾಕೆ ಅಭಿನಂದನೆ ತಿಳಿಸುತ್ತಿದ್ದಿರಾ ಎಂದು ಗರಂ ಆಗಿದ್ದಾರೆ. ನನ್ನ ವೈಯಕ್ತಿಕ ಫೋಟೋಗಳನ್ನು ಫೋಸ್ಟ್ ಮಾಡಿದ್ದೀನಿ. ನೀವೇನು ತಮಾಷೆ ಅಂತ ಅಂದುಕೊಂಡಿದ್ದೀರಾ. ಮೊದಲು ವೃತ್ತಿ ಪರ ಮತ್ತು ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳುವ ಸೂಕ್ಷ್ಮತೆಯನ್ನು ಹೊಂದಿರಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.

ಕೊಡಗು ಮೂಲದವರಾಗಿರುವ ಶ್ವೇತಾ ಚಂಗಪ್ಪ, ಕೊಡಗು ಶೈಲಿಯಾ ವಸ್ತ್ರ ಧರಿಸಿ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ. ಸಾಕಷ್ಟು ಫೋಟೋಗಳನ್ನು ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಇನ್ನು ಅವರ ಸೀಮಂತಾ ಕಾರ್ಯಕ್ಕೆ ಸೃಜನ್ ಲೋಕೇಶ್ ಅವರ ಕುಟುಂಬ ಸಹಿತಾ ಭಾಗಿಯಾಗಿದ್ದರು. ಎಲ್ಲಾ ಪೋಟೋಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here