ಪುಟ್ಮಲ್ಲಿ ಉಮಾಶ್ರೀ ಈಗ ನಿರೂಪಕಿ…ಅವರು ನಡೆಸಿಕೊಡುವ ಕಾರ್ಯಕ್ರಮ ಯಾವುದು…?

0
221

1884 ರಲ್ಲಿ ಬಿಡುಗಡೆಯಾದ ‘ಅನುಭವ’ ಸಿನಿಮಾ ಮೂಲಕ ಬಣ್ಣದ ಪಯಣ ಆರಂಭಿಸಿದ ನಟಿ ಉಮಾಶ್ರೀ, ತಮ್ಮ ನಟನೆಯಿಂದ ಜನರನ್ನು ರಂಜಿಸಿ, ನಗಿಸಿದವರು. ಅವರು ಸಿನಿಮಾ ಲೋಕ ಮಾತ್ರವಲ್ಲ,ಜೊತೆ ಜೊತೆಗೆ ರಾಜಕೀಯದಲ್ಲಿ ಕೂಡಾ ಮಿಂಚಿದವರು.

 

ಬಹಳ ದಿನಗಳ ಕಾಲ ಆ್ಯಕ್ಟಿಂಗ್ನಿಂದ ದೂರವಿದ್ದ ನಟಿ ಉಮಾಶ್ರೀ ‘ಆರತಿಗೊಬ್ಬ ಕೀರ್ತಿಗೊಬ್ಬ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವುದು ಹಳೆಯ ವಿಚಾರ. ಇದೀಗ ಅವರು ನಿರೂಪಕಿಯಾಗಿ ಕೂಡಾ ನಿಮ್ಮ ಮುಂದೆ ಬರಲಿದ್ದಾರೆ. ಅಷ್ಟಕ್ಕೂ ಉಮಾಶ್ರೀ ನಡೆಸಿಕೊಡುತ್ತಿರುವ ಕಾರ್ಯಕ್ರಮ ಯಾವುದು ಗೊತ್ತಾ..? ಈ ಮುನ್ನ ಪಾಚೋ ಖ್ಯಾತಿಯ ನಟಿ ಶಾಲಿನಿ ನಡೆಸಿಕೊಡುತ್ತಿದ್ದ ಮಕ್ಕಳ ಕಾರ್ಯಕ್ರಮ ‘ಚಿಣ್ಣರ ಚಿಲಿಪಿಲಿ’.

 

 

ನಿಜ, ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ‘ಚಿಣ್ಣರ ಚಿಲಿಪಿಲಿ’ ಸೀಸನ್ 2 ಕಾರ್ಯಕ್ರಮವನ್ನು ಇನ್ನುಮುಂದೆ ಹಿರಿಯ ನಟಿ ಉಮಾಶ್ರೀ ನಡೆಸಿಕೊಡಲಿದ್ದಾರೆ. ಈ ಮೂಲಕ ಅವರು ಮಕ್ಕಳೊಂದಿಗೆ ಮಕ್ಕಳಾಗಿ ನಿಮಗೆ ಮನರಂಜನೆ ನೀಡಲಿದ್ದಾರೆ. ಈ ಕಾರ್ಯಕ್ರಮ ಯಾವಾಗ ಆರಂಭವಾಗಲಿದೆ ಎಂಬ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ.

LEAVE A REPLY

Please enter your comment!
Please enter your name here