ಬೆಂಗಳೂರಿನಲ್ಲಿ ಪರ್ಪಲ್ ಬಣ್ಣದ ಮೆಟ್ರೋ ಸಂಚಾರ ಸ್ಥಗಿತ..!

0
100

ಬೆಂಗಳೂರಿನಲ್ಲಿ ಅತಿ ದೊಡ್ಡ ಸಮಸ್ಯೆ ಎಂದರೆ ಅದು ಟ್ರಾಫಿಕ್,ವಾಹನ ಸಂಚಾರದ ಅಡಚಣೆ! ಎಂದೇ ಹೇಳಬಹುದು. ಬೆಂಗಳೂರಿನ ಜನತೆಗೆ ರಸ್ತೆಯಲ್ಲಿ ತಮ್ಮ ವಾಹನದ ಮೂಲಕ ಸಂಚಾರ ಮಾಡುವಾಗ ಬಹಳ ಹಿಂಸೆಯಾಗುವುದು ಖಂಡಿತ. ಯಾಕೆಂದರೆ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.! ಜೊತೆಗೆ ಪರ ರಾಜ್ಯದಿಂದ ವಲಸೆ ಬಂದಿರುವವರು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಕಾರಣ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಸುಲಭವಾಗಿ ಕಡಿಮೆಯಾಗುವುದಿಲ್ಲ.! ವಾಹನಗಳ ದಟ್ಟಣೆ ನಿಯಂತ್ರಿಸಲು ಬೆಂಗಳೂರು ಮೆಟ್ರೋ ಪ್ರಯಾಣವನ್ನು ಆರಂಭಿಸಿತು.

ಇದರ ಮೂಲಕ ಟ್ರಾಫಿಕ್ ನಿಯಂತ್ರಿಸುವುದರ ಜೊತೆಗೆ ಜನಗಳಿಗೆ ವೇಗವಾಗಿ ಪ್ರಯಾಣಿಸುವುದಕ್ಕೆ ಅನುಕೂಲ ಮಾಡಿಕೊಟ್ಟಿದೆ ಮೆಟ್ರೊ ಬಂದ ನಂತರ ಉದ್ಯೋಗಿಗಳು ವಿದ್ಯಾರ್ಥಿಗಳು ಮತ್ತು ವಯಸ್ಸಾದವರು ಆರಾಮದಾಯಕವಾಗಿ ತಮ್ಮ ಮನೆಗಳಿಗೆ ಕೆಲಸಕ್ಕೆ ಹೋಗಲು ಅನುಕೂಲವಾಗಿದೆ ಎಂದರೆ ತಪ್ಪಾಗಲಾರದು ಆದರೆ ಮೆಟ್ರೊ ಸಂಸ್ಥೆಯಿಂದ ಪ್ರಯಾಣಿಕರಿಗೆ ಒಂದು ಬೇಸರ ಸಂಗತಿ ಹೊರ ಬಂದಿದೆ ಅದು ಏನೆಂದರೆ ನೇರಳೆ ಬಣ್ಣದ ಮೆಟ್ರೋ ನಾಳೆ ರಾತ್ರಿಯಿಂದ ಆಗಸ್ಟ್ ನಾಲ್ಕು ರವರೆಗೆ ಸಂಚಾರ ಸ್ಥಗಿತವಾಗಲಿದೆ.

ಹೌದು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಿಂದ ಮಹಾತ್ಮ ಗಾಂಧಿ ರಸ್ತೆ ಮೆಟ್ರೊ ನಿಲ್ದಾಣದವರೆಗೆ ನಾಳೆ ರಾತ್ರಿ ಒಂಬತ್ತು ಮೂವತ್ತು ರಿಂದ ಆಗ ಸ್ಕರ ಬೆಳಗ್ಗೆ ಹನ್ನೊಂದು ಗಂಟೆಯವರೆಗೆ ಸಂಚಾರ ಸ್ಥಗಿತವಾಗಲಿದೆ. ಈ ವಿಚಾರ ಕುರಿತು ಪ್ರಯಾಣಿಕರಿಗೆ ಪತ್ರ ಬರೆಯುವ ಮೂಲಕ ಬಿಎಂಆರ್ಸಿಎಲ್ ಅಧಿಕೃತವಾಗಿ ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here