‘ಪೈಲ್ವಾನ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ‘ ಪುನೀತ್ ರಾಜ್ ಕುಮಾರ್’!

0
95

ಪೈಲ್ವಾನ್ ,ಅಭಿನಯ ಚಕ್ರವರ್ತಿ ಬಾದ್ ಶಾ ಕಿಚ್ಚ ಸುದೀಪ್, ಅಭಿನಯದ ಕನ್ನಡದ ಬಹು ನಿರೀಕ್ಷಿತ ಚಿತ್ರ ! ಸದ್ಯ ಟೀಸರ್, ಟ್ರೇಲರ್ ಮತ್ತು ಸಾಂಗ್ಸ್ ಗಳಿಂದ ಕನ್ನಡದಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದೆ ..

ಇನ್ನು ಪೈಲ್ವಾನ್ ಕನ್ನಡ ಮಾತ್ರವಲ್ಲದೆ ತೆಲುಗು , ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಐದು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ..
ಇನ್ನು ಚಿತ್ರಕ್ಕೆ ಕೃಷ್ಣ ಅವರು ಆಕ್ಷನ್ ಕಟ್ ಹೇಳಿದ್ದು, ಸುದೀಪ್ ಅವರ ಬಾಕ್ಸಿಂಗ್ ಲುಕ್ಕಿಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ ! ಇನ್ನು ಸಿನಿಮಾದ ‘ಕನ್ಯಾಮಣಿಯೆ ಕಣ್ಣು ಹುಡುಯೆ’ ಸಾಂಗ್ ಈಗಾಗಲೇ ಪಡ್ಡೆ ಹುಡುಗರ ಬಾಯಲ್ಲಿ ಸದಾ ಗುನುಗುವಂತೆ ಮಾಡಿದೆ ..
ಇನ್ನು ಚಿತ್ರದಲ್ಲಿ ಬಿ ಟೌನ್ನ ಸುನೀಲ್ ಶೆಟ್ಟಿ, ನಟಿಸುತ್ತಿರುವುದು ವಿಶೇಷ !.
ಸದ್ಯ ಚಿತ್ರ ತಂಡ ಈಗ ಆಡಿಯೋ ರಿಲೀಸ್ಗೆ ಸಜ್ಜಾಗಿದೆ !
ಈ ಮೊದಲೇ ಆಗಸ್ಟ್ ಎರಡರಂದೆ ಆಡಿಯೋ ಬಿಡುಗಡೆಗೆ ಸಜ್ಜಾಗಿದ್ದ ಚಿತ್ರತಂಡ,ತಾಂತ್ರಿಕ ತೊಂದರೆಯಿಂದ ವರಮಹಾಲಕ್ಷ್ಮಿ ಹಬ್ಬದಂದು ಅಂದರೆ ಆಗಸ್ಟ್ ಒಂಬತ್ತ ರಂದು ಚಿತ್ರದುರ್ಗದಲ್ಲಿ ಆಡಿಯೋ ಬಿಡುಗಡೆ ಸಮಾರಂಭಕ್ಕೆ ತಯಾರಿ ಮಾಡಿಕೊಂಡಿದೆ..

ಇನ್ನು ಈ ಸಮಾರಂಭಕ್ಕೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬಂದು ಆಡಿಯೋ ಬಿಡುಗಡೆ ಮಾಡಲಿದ್ದಾರೆ ! ಸದ್ಯ ಯುವ ರತ್ನ ಚಿತ್ರದಲ್ಲಿ ಬ್ಯುಸಿ ಆಗಿರುವ ಅಪ್ಪು , ಪೈಲ್ವಾನ್ ಆಡಿಯೋ ಬಿಡುಗಡೆ ಮಾಡುವ ಮುಖಾಂತರ ಕಿಚ್ಚನಿಗೆ ಆಲ್ ದ ಬೆಸ್ಟ್ ಹೇಳಲಿದ್ದಾರೆ! ಇದರ ಜೊತೆಗೆ ಬಾಲಿವುಡ್ ನ ಸುನಿಲ್ ಶೆಟ್ಟಿ ಅವರು ಸಹಿತ ಆಡಿಯೋ ಲಾಂಚ್ಗೆ ಬರಲಿದ್ದಾರೆ ..ಅದಲ್ಲದೆ ಪೈಲ್ವಾನ್ ಮೂಲಕ ಕನ್ನಡಕ್ಕೆ ಸುನೀಲ್ ಪಾದಾರ್ಪಣೆ ಮಾಡುತ್ತಿದ್ದಾರೆ …

ಇಷ್ಟೆಲ್ಲ ವಿಶೇಷತೆ ತುಂಬಿಕೊಂಡಿರುವ ಪೈಲ್ವಾನ್ ಸದ್ಯ ಸೆಪ್ಟೆಂಬರ್ ಹದಿನೈದ ರಂದು ಥಿಯೇಟರ್ಗೆ ಲಗ್ಗೆ ಇಡುತ್ತಿದೆ !

LEAVE A REPLY

Please enter your comment!
Please enter your name here