ಗಣೇಶ್ ಹಾಗೂ ಪ್ರೇಮ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ !

0
212

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡದ ಒಬ್ಬ ಹೆಮ್ಮೆಯ ನಟ.. ತಂದೆಯಂತೆ ಅಭಿಮಾನಿಗಳನ್ನು ದೇವರು ಎಂದು, ಕರುನಾಡ ಆರಾಧ್ಯದೈವನ ಹೆಮ್ಮೆಯ ಕಿರಿಯ ಪುತ್ರ. ಚಿಕ್ಕ ವಯಸ್ಸಿನಿಂದಲೇ ನಟನೆಯ ಹಾದಿ ಹಿಡಿದ ಅಪ್ಪು, ಒರ್ವ ಗಾಯಕನೂ ಹೌದು.. ಇನ್ನು ಪುನೀತ್ ರಾಜ್ ಕುಮಾರ್, ಅವರ ಚಿತ್ರಕ್ಕೆ ಮಾತ್ರವಲ್ಲದೆ ಹೊಸಬರ ಮತ್ತು ಅನುಭವಿ ಕಲಾವಿದರ ಚಿತ್ರಗಳಿಗೂ ಹಾಡಿದ್ದಾರೆ.ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನೆನಪಿರಲಿ ಪ್ರೇಮ್ ಚಿತ್ರಗಳಿಗೂ ಧ್ವನಿಯನ್ನು ನೀಡುವ ಮುಖಾಂತರ ಚಿತ್ರ ತಂಡಗಳಿಗೆ ಆಲ್ ದ ಬೆಸ್ಟ್ ಹೇಳಿದ್ದಾರೆ.

ಇತ್ತೀಚೆಗೆ ಅಪ್ಪು ಅವರು ಗಣೇಶ್ ರವರ ‘ಗೀತಾ’ ಮತ್ತು ನೆನಪಿರಲಿ ಪ್ರೇಮ್ ಅವರ ‘ಪ್ರೇಮಂ ಪೂಜ್ಯಂ’ ಚಿತ್ರಗಳಿಗೆ ಹಾಡನ್ನು ಹಾಡಿದ್ದಾರೆ..
ಗೋಲ್ಡನ್ ಸ್ಟಾರ್ ಗಣೇಶ್ ಅವರ ‘ಗೀತಾ’ ಕನ್ನಡದ ಬಹು ನಿರೀಕ್ಷಿತ ಚಿತ್ರ. ಇದೇ ಮೊದಲ ಬಾರಿಗೆ ಕನ್ನಡ ಪರ ಹೋರಾಟಗಾರನಾಗಿ ಗಣೇಶ್ ಕಾಣಿಸಿಕೊಂಡಿದ್ದಾರೆ,ಈಗಾಗಲೇ ಟೀಸರ್ ಬಿಡುಗಡೆಯಾಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ. ಗಣೇಶ್ ಅವರ ಕನ್ನಡ ಪರ ಡೈಲಾಗ್ ಗಳು ಪ್ರೇಕ್ಷಕರನ್ನು ಮನ ಮುಟ್ಟುವಂತಿದೆ!

ಚಿತ್ರದ ‘ಕನ್ನಡ ಕನ್ನಡ ಕನ್ನಡವೇ ಸತ್ಯ’ ಎಂಬ ಕನ್ನಡದ ಜಾಗೃತಿ ಹಾಗೂ ಹೋರಾಟಕ್ಕೆ ಸಂಬಂಧ ಪಟ್ಟ ಹಾಡನ್ನು ಅಪ್ಪು ಹಾಡಿದ್ದಾರೆ.. ಮತ್ತು ಈ ಹಾಡನ್ನು ಬರೆದಿರುವುದು,ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್..
ಗಣೇಶ್ ಹೇಳಿಕೆಯಂತೆ ಈ ಹಾಡನ್ನು ಸಮಸ್ತ ಕನ್ನಡ ಜನತೆಗೆ ,ಸ್ವಾಭಿಮಾನಿ ಕನ್ನಡಿಗರಿಗೆ ಅರ್ಪಿಸುತ್ತಿದ್ದಾರಂತೆ.. ಮತ್ತು ‘ಅಪ್ಪು ಸರ್ ಗೆ ನನ್ನ ತುಂಬು ಹೃದಯದ ಧನ್ಯವಾದಗಳು’ ಇಂದು ಗಣೇಶ್ ಹೇಳಿದ್ದಾರೆ !

ಇನ್ನು ‘ಪ್ರೇಮಂ ಪೂಜ್ಯಂ’, ನೆನಪಿರಲಿ ಪ್ರೇಮ್ ಅವರ ವೃತ್ತಿ ಜೀವನದ 25ನೇ ಚಿತ್ರ..ಈ ಚಿತ್ರದ ಹಾಡಿಗೆ ಪುನೀತ್ ರಾಜ್ ಕುಮಾರ್ ಧ್ವನಿ ಯಾಗಿರುವುದರಿಂದ ತುಂಬು ಹೃದಯದ ಧನ್ಯವಾದಗಳು ಎಂದು ಪ್ರೇಮ್ ಹೇಳಿದ್ದಾರೆ.

ನೀವೇ ನನ್ನನ್ನು ಕರೆದು ನಿಮ್ಮ ಮೊಬೈಲ್ ಫೋನಿಂದಲೇ ನನ್ನ ಜೊತೆ SELFIE ಫೊಟೋ ತೆಗೆದಿರಿ iam realy blessed ನೀವು ನಿಜಕ್ಕೂ ತಂದೆಗೆ ತಕ್ಕ ಮಗ. ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಆಯಸ್ಸು, ಆರೋಗ್ಯ ಸದಾ ಯಶಸ್ಸನ್ನು ಕೊಟ್ಟು ಕಾಪಾಡಲಿ ಎಂದು ವಯಕ್ತಿಕವಾಗಿ ಹಾಗೂ ಚಿತ್ರತಂಡದ ಪರವಾಗಿ ಪ್ರಾರ್ಥಿಸುತ್ತೇನೆ. LOVE U SIR’ ಎಂದು ಪ್ರೇಮ್ ಹೃದಯಪೂರ್ವಕವಾದ ಧನ್ಯವಾದಗಳನ್ನು ತಿಳಿಸಿದ್ದಾರೆ !

LEAVE A REPLY

Please enter your comment!
Please enter your name here