ಪಬ್ಲಿಕ್ ಟಿವಿ ರಂಗನಾಥ್ ರವರನ್ನು ಜನ ಹೀಗೆಲ್ಲಾ ಬೈತಾರೆ..!

0
1685

ಕರ್ನಾಟಕದಲ್ಲಿ ಕನ್ನಡ ಎಲ್ಲಿಲ್ಲ ಎಂದು ಕೇಳಿದ ಕನ್ನಡದವರನ್ನು ರೌಡಿಗಳು, ದಾಂಧಲೆ ಮಾಡುವವರು ಎನ್ನುತ್ತಿದ್ದಾರೆ. ಪಬ್ಲಿಕ್ ಟಿವಿ, ಟಿವಿ-9 ಆಂಧ್ರ ಚಾನೆಲ್ ಇದರ ಮ್ಯಾನೇಜರ್ ಮಹೇಂದ್ರಮಿಶ್ರಾ ಇಂತವರು ಈ ರೀತಿ ಪ್ರಶ್ನೆ ಕೇಳುತ್ತಿದ್ದಾರೆ. ಕರ್ನಾಟಕದ ಆದೇಶದಂತೆ 60%ಕನ್ನಡ ಹಾಗೂ 40%ಇಂಗ್ಲಿಷ್ ಬಳಸಬೇಕೆಂಬ ಆದೇಶ ಇದೆ. ನಮ್ಮನ್ನು ರೌಡಿಗಳು ಎಂದವರಿಗಾಗಿ ಲೈವ್ ವಿಡಿಯೋ ಮಾಡಿ ತೋರಿಸಬೇಕು. ಇದನ್ನು ಕರ್ನಾಟಕದ ಜನತೆಗೆ ತಿಳಿಸಿದ್ದೀರ ಇಂತ ರೀತಿಯಲ್ಲಿ ಮಾತನಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಜನತೆ ಟಿವಿಯವರನ್ನು ಕೇಳುತ್ತಿದ್ದಾರೆ.

ಕನ್ನಡಿಗರನ್ನು ನೀವು ಪ್ರಶ್ನೆ ಮಾಡಿದರೆ, ನಮಗೂ ಕೂಡ ನಿಮ್ಮನ್ನು ಪ್ರಶ್ನೆ ಮಾಡುವ ಅಧಿಕಾರ ಇದೆ. ಕನ್ನಡ ತಾಯಿ ನಿಮ್ಮಂತವರನ್ನು ನಂಬಿಕೊಂಡಿಲ್ಲ ,ನಮ್ಮಂತ ಕನ್ನಡಿಗರನ್ನು ನಂಬಿ ಕನ್ನಡಾಂಬೆ ಇರುವುದು. ಹಣಕ್ಕಾಗಿ ಸುಳ್ಳು ಪ್ರಚಾರ ಮಾಡುವುದು ನಿಮ್ಮಂತ ಚಾನೆಲ್ ನವರ ಕೆಲಸ ನಿಮ್ಮನ್ನು ನೀವೇ ಮಾರಿಕೊಂಡಿದ್ದೀರಿ, ನಿಮ್ಮ ಟಿವಿ ನೋಡಿ ನಮ್ಮ ಮನೆಯವರು ಮಕ್ಕಳು ,ಹೆಣ್ಣುಮಕ್ಕಳು ಏನು ಕಲಿತಿಲ್ಲ. ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದು ಮಾಡಿ ಜನರ ನಡುವೆ ಕಿಚ್ಚು ಹಚ್ಚಬೇಡಿ.

ಕನ್ನಡಿಗರ ತಾಳ್ಮೆ ಕೆಣಕಬೇಡಿ. ನೀವು ಹೀಗೆ ತೋರಿಸಿ ತೋರಿಸಿ ಕನ್ನಡಿಗರನ್ನು ಅವರ ಪರಿಸ್ಥಿತಿಯನ್ನು ಯಾವ ಸ್ಥಿತಿಗೆ ತಂದಿದ್ದೀರಾ! ಬೇರೆ ಬೇರೆ ರಾಜ್ಯದಲ್ಲಿ ಈ ರೀತಿ ರೂಲ್ಸ್ ಇಲ್ಲ ಆದರೆ, ಕರ್ನಾಟಕದಲ್ಲಿ ಬೇರೆ ಬೇರೆ ರಾಜ್ಯದ ವ್ಯಕ್ತಿಗಳು ಬಂದು ಅವರ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಅವರಿಗೆ ಅವರ ಭಾಷೆ ಮೇಲೆ ಅದೆಷ್ಟು ಅಭಿಮಾನ ಇದೆ. ನಾವು ಕನ್ನಡಿಗರಾಗಿ ಕನ್ನಡವನ್ನು ಕೇಳುವುದು ತಪ್ಪೇ! ನಾವು ಕನ್ನಡಿಗರು ಎಲ್ಲರಿಗೂ ಸಹಾಯ ಮಾಡುತ್ತೇವೆ. ಎಲ್ಲರಿಗೂ ಹೊಂದಿಕೊಳ್ಳುತ್ತೇವೆ.

ನಾವು ಯಾರಿಗೂ ಹೊಡೆದಿಲ್ಲ ,ತೊಂದರೆ ಕೊಟ್ಟಿಲ್ಲ. ಸ್ನೇಹಿತರೆ, ಮಾಧ್ಯಮಗಳನ್ನು ನಂಬಬೇಡಿ ಕನ್ನಡಿಗರನ್ನು ಯಾರು ಏನು ಮಾಡಲು ಸಾಧ್ಯವಿಲ್ಲ. ನಾವು ದೇಶವನ್ನು ಪ್ರೀತಿಸುತ್ತೇವೆ. ನಾವು ನಮ್ಮ ದೇಶವನ್ನು ಪ್ರೀತಿಸುತ್ತೇವೆ ಹಾಗೂ ಕನ್ನಡವನ್ನು ಅತಿಯಾಗಿ ಪ್ರೀತಿಸುತ್ತೇವೆ. ನಮಗೆ ಕನ್ನಡವೇ ಮೊದಲು,ಆದರೆ, ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಕಾನೂನು ಮೀರಿ ನಾವೇನು ಮಾಡಿಲ್ಲ ಎಂದು ಕನ್ನಡಿಗರೊಬ್ಬರು ಲೈವ್ ವಿಡಿಯೋ ಮಾಡಿ ಹೇಳಿದ್ದಾರೆ.
-ಹರ್ಷಿತ ಎಚ್.ಬಿ

LEAVE A REPLY

Please enter your comment!
Please enter your name here