ಯಾವುದೇ ಆಗಲಿ ಅತಿಯಾದರೆ ವಿಷವಾಗವುದು ಖಂಡಿತ ಅದೇ ರೀತಿ ಯಾವುದೇ ಗೇಮ್ ಆದರೂ ಅತಿಯಾಗಿಸಿ ಕೊಳ್ಳಬಾರದು
ಯಾವುದೇ ಗೇಮ್ ಎಷ್ಟು ಮನರಂಜನೆ ಕೊಡುತ್ತೋ ಅಷ್ಟೇ ನಮ್ಮ ಮನಸ್ಥಿತಿಯನ್ನು ಕೆಡಿಸುತ್ತದೆ.
ಅತಿಯಾಗುವುದರಿಂದ ನಮ್ಮ ಈಗಿನ ಜನರೇಷನ ಯುವಕ ಯುವತಿಯರ ಮೇಲೆ ದುಷ್ಪರಿಣಾಮ ಬೀಳುತ್ತದೆ. ಇದಕ್ಕೆ ಸಂಬಂಧಿಸಿದಂತೆ ಪಬ್’ಜಿ ಗೇಮ್ ಆಡುವಾಗ ಆಚಾತುರ್ಯ ನಡೆದಿದೆ. ಫರ್ಖಾನ್ ಖುರೇಶಿ ಎಂಬ ಹದಿನಾರು ವರ್ಷದ ಯುವಕ ಮಧ್ಯಪ್ರದೇಶದವಾನಾಗಿದ್ದು. ಈ ಯುವಕ ಪಬ್’ಜಿ ಗೇಮ್ ಗೆ ಅಡಿಕ್ಟ್ ಆಗಿದ್ದ ದಿನಕ್ಕೆ ಕಮ್ಮಿ ಅಂದರೂ 7 ರಿಂದ 8 ಗಂಟೆ ಆಡುತ್ತಿದ್ದ ಆದರೆ ಅವನಿಗೆ ಈ ಗೇಮ್ ನಿಂದ ಬಂದೊದಗುವ ಸಾವಿನ ಬಗ್ಗೆ ಅರಿವಿರಲಿಲ್ಲ. ಫರ್ಖಾನ್ ಖುರೇಶಿ ಆಡುತ್ತಿದ್ದ ವೇಳೆ ಈ ಯುವಕ ಹೃದಯಾಘಾತದಿಂದ ತನ್ನ ಅಕ್ಕನ ಮುಂದೆಯೇ ಸಾವನ್ನಪ್ಪಿದ್ದಾನೆ.
ಪಬ್’ಜಿ ಗೇಮ್ ಆಡುತ್ತಿದ್ದ ವೇಳೆ BLAST ಮಾಡು BLAST ಮಾಡು ಎಂದು ಕಿರುಚುತ್ತಾ ಕೆಳಗೆ ಬಿದ್ದಿದ್ದಾನೆ, ಫರ್ಖಾನ್ ಖುರೇಶಿ ಯ ಮುಖ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಕೆಂಪು ಬಣ್ಣಕ್ಕೆ ತಿರುಗಿತ್ತು ಮತ್ತು ಸಾವನ್ನಪ್ಪಿದ್ದಾನೆ . ಈ ರೀತಿ ಗೇಮ್’ನಿಂದ ಎಷ್ಟೋ ಯುವಕ ಯುವತಿಯರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸುವ ವಯಸ್ಸಿನಲ್ಲಿ ಗೇಮ್’ಗೆ ಅಡಿಕ್ಟ್ ಆಗಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ ಮಧ್ಯಪ್ರದೇಶದ ಫರ್ಖಾನ್ ಖುರೇಶಿ.
ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್’ನಲ್ಲಿ ತಿಳಿಸಿ
ಧನ್ಯವಾದಗಳು.