ಅಸ್ಸಾಂನ ಗುವಾಹಟಿ ಮತ್ತು ದಿಬ್ರುಗಢದಲ್ಲಿ ಅನಿರ್ದಿಷ್ಟಾವಧಿವರೆಗೆ ಜಾರಿಗೊಳಿಸಿದ್ದ ಕರ್ಫ್ಯೂವನ್ನು ಶುಕ್ರವಾರ ಬೆಳಗ್ಗೆ 8ರಿಂದ 1ಗಂಟೆವರೆಗೆ ಸಡಿಸಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆ 2019 ಅನ್ನು ವಿರೋಧಿಸಿ ಅಸ್ಸಾಂನಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಇದೀಗ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಕೆಲಗಂಟೆಗಳ ಕಾಲ ಕರ್ಫ್ಯೂ ಸಡಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮತ್ತೊಂದೆಡೆ ಕೇಂದ್ರದ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಆಲ್ ಇಂಡಿಯಾ ಸ್ಟೂಡೆಂಟ್ಸ್ ಯೂನಿಯನ್ ಉಪವಾಸ ಸತ್ಯಾಗ್ರಹ ನಡೆಸಲು ಕರೆ ನೀಡಿದೆ. ದಿಬ್ರುಗಢದಲ್ಲಿ 24ಗಂಟೆಗಳ ಕಾಲದ ಕರ್ಫ್ಯೂವನ್ನು 48 ಗಂಟೆಗೆ ವಿಸ್ತರಿಸಿದ ನಂತರ ಈ ಬೆಳವಣಿಗೆ ನಡೆದಿದೆ ಎಂದು ವರದಿ ವಿವರಿಸಿದೆ.
ಅಸ್ಸಾಂನ ಲಾಖಿಂಪುರ್, ಟಿನ್ ಸುಕೀಯಾ, ಧೇಮಾಜಿ, ದಿಬ್ರುಗಢ್, ಚಾರಾಯಿಡೆವೊ, ಸಿವಸಾಗರ್, ಜೋಹ್ರಾತ್, ಗೋಲಾಘಾಟ್, ಕಾಮ್ರಾಪ್ (ಮೆಟ್ರೋ) ಮತ್ತು ಕಾಮ್ರಾಪ್ ಜಿಲ್ಲೆಗಳಲ್ಲಿ 48ಗಂಟೆಗಳ ಕಾಲ ಮೊಬೈಲ್, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ