ಉರಿಯುವ ಬಿಸಿಲಲ್ಲಿ ವಿದ್ಯುತ್ ಇಲ್ಲದ ದಿನವನ್ನು ನೆನೆಯಲು ಸಾಧ್ಯವಿಲ್ಲ. ಏಕೆಂದರೆ ಫ್ಯಾನ್ ಇಲ್ಲದೆ ಇರಲು ಸಾಧ್ಯವೇ ಆಗುವುದಿಲ್ಲ. ಇನ್ನು ಶ್ರೀಮಂತರಂತೂ ಏ ಸಿ ಇಲ್ಲದೆ ಇರುವುದಿಲ್ಲ. ಇವೆಲ್ಲದಕ್ಕೂ ವಿದ್ಯುತ್ ಅವಶ್ಯಕತೆ ಇದೆ. ಇದಕ್ಕೆ ವಿರುದ್ಧವಾಗಿ ನಿವೃತ್ತ ಪ್ರೊಫೆಸರ್ ವಿದ್ಯುತ್ ಬಳಸದೆ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ಪುಣೆಯ 89 ವರ್ಷದ ನಿವೃತ್ತ ಪ್ರಾಧ್ಯಾಪಕಿ ಪ್ರೊಫೆಸರ್ ಡಾ. ಹೇಮಾ ಸಿಂಗ್ ಅವರು ವಿದ್ಯುತ್ ಬಳಸದೆ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಪ್ರಕೃತಿ ,ಅವರಿಗೆ ಪ್ರಕೃತಿ ಮೇಲೆ ಇರುವ ಅತಿಯಾದ ಪ್ರೀತಿ ,ಕಾಳಜಿ .

ಜೀವನಕ್ಕೆ ಆಹಾರ,ಆಶ್ರಯ, ಬಟ್ಟೆ ಇಂತಹ ಮೂಲಭೂತ ಸೌಕರ್ಯಗಳು ಬೇಕು ವಿದ್ಯುತ್ ಬಳಸದೆ ಜೀವನ ನಡೆಸಬಹುದು ಎಂಬುದನ್ನು ಹೇಮಾ ಅವರು ತೋರಿಸಿಕೊಟ್ಟಿದ್ದಾರೆ. ಒಂದಾನೊಂದು ಕಾಲದಲ್ಲಿ ವಿದ್ಯುತ್ ಇಲ್ಲದೆ ಜನರು ಜೀವನ ನಡೆಸುತ್ತಿದ್ದರು. ಹಾಗಾಗಿ ಈಗಲೂ ಕೂಡ ಹಾಗೆ ಬದುಕಬಹುದು. ಇವರು ಒಂದು ಪುಟ್ಟ ಮನೆಯಲ್ಲಿ ವಾಸವಿದ್ದಾರೆ. ಇವರ ಆಸ್ತಿ ಎರಡು ನಾಯಿ,ಬೆಕ್ಕುಗಳು ಮುಂಗುಸಿ ಮತ್ತು ಬಹಳಷ್ಟು ಪಕ್ಷಿಗಳು.

“ಈ ಪರಿಸರವೆಲ್ಲ ಈ ಜೀವಿಗಳ ಸ್ವತ್ತು ನಾನು ಕೇವಲ ಅವನ್ನು ನೋಡಿಕೊಳ್ಳಲು ಇದ್ದೇನೆ”ಎಂದು ಹೇಳುತ್ತಾರೆ.
ಜನರು ಈಕೆಯ ವರ್ತನೆ ಕಂಡು ಇವರು ಮಾನಸಿಕ ಅಸ್ವಸ್ಥೆ ಎಂದು ಹೇಳುತ್ತಾರೆ. ಆದರೆ, ಇವರು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಇದ್ದಾರೆ. ಇದು ನನ್ನ ಜೀವನ ನನಗೆ ಈ ಜೀವನವೇ ಇಷ್ಟ ನಾನು ವಿದ್ಯುತ್ ಬಳಸದೆ ಜೀವನ ನಡೆಸುತ್ತಿದ್ದೇನೆ. ವಿದ್ಯುತ್ ಬಳಸದೆ ಜೀವನ ನಡೆಸಲು ಸಾಧ್ಯವಿಲ್ಲ ಎನ್ನುವವರು ಇವರನ್ನು ನೋಡಿ ಆದರೂ ವಿದ್ಯುತ್ ಅನ್ನು ಉಳಿಸಬೇಕು.