ಭಾರತ-ಪಾಕ್ ನಡುವೆ ಸಮಸ್ಯೆ ಮತ್ತಷ್ಟು ಉಲ್ಬಣ ಕಾಶ್ಮೀರದಿಂದ ಪ್ರವಾಸಿಗರ ತೆರವು !.

0
240

ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪ್ರವಾಸಿಗರು ತಮ್ಮ ತಮ್ಮ ಊರುಗಳಿಗೆ ಮರಳಲು ಮುಂದಾಗುತ್ತಿದ್ದಾರೆ. ಇನ್ನೂ ಭಾರತೀಯ ಸೇನೆಯು ಹೆಚ್ಚಿನ ಸೈನಿಕರನ್ನು ಕಣಿವೇ ರಾಜ್ಯಗಳಿಗೆ ನಿಯೋಜಿಸಿದ್ದು , ಅಮರನಾಥ ಯಾತ್ರೆಯ ಪ್ರವಾಸಿಗರು ಪ್ರವಾಸವನ್ನು ನಿಲ್ಲಿಸುತ್ತಿದ್ದಾರೆ.
ಶ್ರೀನಗರದಿಂದ ತೆರಳಲು ಪ್ರವಾಸಿಗರು ಟಿಕೆಟನ್ನು ಕಾಯ್ದಿರಿಸುತ್ತಾರೆ, ಶ್ರೀನಗರಕ್ಕೆ ತೆರಳಲು ಟಿಕೆಟ್ ಕಾಯ್ದಿರಿಸಿದ್ದಾರೆ , ಈ ಟಿಕೆಟ್ಗಳನ್ನು ರದ್ದುಗೊಳಿಸುವುದು ಅನಿವಾರ್ಯವಾಗಿದೆಯಂತೆ . ಈ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಗಳು ಟಿಕೆಟ್ ಗಳ ರದ್ದತಿ ಹಾಗೂ ಪ್ರವಾಸವನ್ನು ಮರುನಿಗದಿ ಪಡಿಸಿಕೊಂಡ ಟಿಕೆಟ್ ಕಾಯ್ದಿರಿಸುವ ಶುಲ್ಕಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ. ಸರ್ಕಾರದ ಸೂಚನೆ ಮೇರೆಗೆ ಕಣಿವೆ ರಾಜ್ಯದಲ್ಲಿನ ಸದ್ಯದ ಭದ್ರತಾ ಪರಿಸ್ಥಿತಿಯ ಅನುಗುಣವಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಕಣಿವೆ ರಾಜ್ಯಕ್ಕೆ ಸಂಪರ್ಕ ಒದಗಿಸುವ ವಿಮಾನ ಸಂಸ್ಥೆಗಳು ತಿಳಿಸಿವೆ.

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯದಲ್ಲಿ ನೆಲೆಸಿರುವ ಇತರ ರಾಜ್ಯಗಳ ಜನರನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ವಿದ್ಯಾರ್ಥಿಗಳನ್ನು ಅವರವರ ಊರಿಗೆ ಕಳುಹಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ತಮ್ಮ ಊರಿಗೆ ತೆರಳುತ್ತಿರುವ ಕಾರಣ ಶುಕ್ರವಾರದಿಂದ ಆರಂಭವಾಗಿ ಮುಂದಿನ ಸೂಚನೆಯ ವರೆಗೂ ತರಗತಿಗಳನ್ನು ರದ್ದುಗೊಳಿಸುವುದಾಗಿ ಎನ್ಐಟಿ ಆಡಳಿತ ಮಂಡಳಿ ತಿಳಿಸಿದೆ . ವಿದ್ಯಾರ್ಥಿಗಳು ಊರಿಗೆ ಮರಳಲು ಅಧಿಕಾರಿಗಳು ಸಾರಿಗೆ ವ್ಯವಸ್ಥೆಯನ್ನು ಮಾಡಿದ್ದಾರೆ.

ಮತ್ತೊಂದು ಕಡೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಕಾಶ್ಮೀರ ಮಧ್ಯಸ್ಥಿಕೆಗೆ ತಾನು ಸಿದ್ಧ ಎಂದು ಎರಡೆರಡು ಬಾರಿ ಉಚ್ಚರಿಸಿದ್ದಾರೆ. ಅಲ್ಲದೆ ಅಮೆರಿಕ ಪಾಕ್ ಗೆ ಮಿಲಿಟರಿ ಸಹಾಯಧನವನ್ನು ಪುನಹ ನೀಡಲು ಆರಂಭಿಸಿದೆ . ಇದಕ್ಕೆ ಪ್ರತಿಯಾಗಿ ಭಾರತೀಯ ಸರ್ಕಾರವು ಕಣಿವೆಯ ರಾಜ್ಯಗಳಿಗೆ ಹೆಚ್ಚಿನ ಸೈನಿಕರನ್ನು ನಿಯೋಜಿಸಿದ್ದು ಪ್ರಪಂಚವು ಕಾಶ್ಮೀರದ ಕಡೆಗೆ ತಿರುಗಿ ನೋಡುವಂತಾಗಿದೆ. ಪಾಕ್ ಮತ್ತು ಭಾರತದ ನಡುವೆ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ ಎಂದು ಚಿಂತಕರು ಚಿಂತಿಸುತ್ತಿದ್ದಾರೆ.
ಪಾಕ್ ಸೈನಿಕರ ಅಟ್ಟಹಾಸ ಇತ್ತೀಚೆಗೆ ಮತ್ತಷ್ಟು ಹೆಚ್ಚಾಗಿದ್ದು ಭಾರತೀಯ ಸೈನ್ಯವು ತಕ್ಕ ಪಾಠವನ್ನು ಕಲಿಸುತ್ತಿದೆ. ಈ ಸಮಸ್ಯೆಯು ಯಾವ ರೀತಿ ಅಂತ್ಯ ಆಗುವುದೊ ಅದೆಷ್ಟು ಅವಘಡಗಳಿಗೆ ಕಾರಣವಾಗುವುದು ಎಂದು ಜನರು ಚಿಂತಿಸುವಂತಾಗಿದೆ.

LEAVE A REPLY

Please enter your comment!
Please enter your name here