ಅವಾರ್ಡ ಫಂಕ್ಷನ್‍ನಲ್ಲಿ ಪತಿಗೆ ಕಿಸ್ ಮಾಡಿ ಲಿಪ್ಸ್ಟಿಕ್ ಒರೆಸಿದ ಪಿಗ್ಗಿ…ವಿಡಿಯೋ ವೈರಲ್..!

0
520

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತನಗಿಂತ 10 ವರ್ಷ ಕಿರಿಯವನಾದ ಪಾಪ್ ಸಿಂಗರ್ ನಿಕ್ಸ್ ಜೋನ್ಸ್ ಅವರನ್ನು ಮದುವೆಯಾಗಿ ವಿದೇಶದಲ್ಲಿ ನೆಲೆಸಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಇನ್ನು ಇವರಿಬ್ಬರೂ ಮದುವೆಯಾದಾಗಿನಿಂದ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಇವರ ಕಿಸ್ ವಿಡಿಯೋವೊಂದು ವೈರಲ್ ಆಗಿದೆ.

ನಡೆದದ್ದು ಇಷ್ಟೇ, ಕ್ಯಾಲಿಫೋರ್ನಿಯಾದಲ್ಲಿ ಜರುಗಿದ 77ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಿಯಾಂಕ ತನ್ನ ಪತಿ ನಿಕ್ ಜೋನ್ಸ್ ಜೊತೆ ಆಗಮಿಸಿದ್ದಾರೆ. ಈ ಜೋಡಿ ಕಾರ್ಯಕ್ರಮಕ್ಕೆ ಬರುತ್ತಿದ್ದಂತೆ ನಿರೂಕಪನೊಬ್ಬ ಇಬ್ಬರನ್ನೂ ಮಾತನಾಡಿಸಿ ಕಿಸ್ ಮಾಡುವಂತೆ ಹೇಳಿದ್ದಾರೆ. ಕೂಡಲೇ ಪ್ರಿಯಾಂಕ ತನ್ನ ಪ್ರೀತಿಯ ಪತಿ ತುಟಿಗೆ ಕಿಸ್ ಮಾಡಿದ್ದಾರೆ.

 

ಹಾಗೇ ಪತಿ ತುಟಿಗೆ ಅಂಟಿದ ತನ್ನ ತುಟಿಯ ಲಿಪ್ಸ್‍ಸ್ಟಿಕ್ಕನ್ನು ಕೈಯಿಂದ ಒರೆಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಏನ್ ಸೂಪರ್ ಜೋಡಿಯಪ್ಪಾ ಅಂತಿದ್ದಾರೆ ನೆಟಿಜನ್ಸ್.

LEAVE A REPLY

Please enter your comment!
Please enter your name here