ಪ್ರಿಯಾಂಕಾ ಚೋಪ್ರಾಗೆ 7 ವರ್ಷ ಜೈಲು ಶಿಕ್ಷೆ.! ಯಾಕೆ ಗೊತ್ತಾ..??

0
431

ಬಾಲಿವುಡ್ ನ ಬಿಂದಾಸ್ ನಟಿ ಎಂದೇ ಹೆಸರುವಾಸಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾಗೆ ಮಹಾರಾಷ್ಟ್ರ ಪೊಲೀಸರು ೭ ವರ್ಷ ಜೈಲು ಶಿಕ್ಷೆ ಮತ್ತು ಭಾರಿ ದಂಡ ವಿಧಿಸಲಾಗುವುದು ಎಂಬ ಎಚ್ಚರಿಕೆ ಸೂಚನೆಯೊಂದನ್ನು ರವಾನಿಸಿದೆ. ಹೌದು, ಕಳೆದ ವರ್ಷ ೨೦೧೮ ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ಚೋಪ್ರಾ ಸಿನಿಮಾ ರಂಗದಿಂದ ತುಂಬಾ ದೂರ ಉಳಿದಿದ್ದರು. ಪತಿ ನಿಕ್ ಜೋನ್ಸ್ ಅವರೊಡನೆ ದೇಶ-ವಿದೇಶವನ್ನು ಸುತ್ತುವ ಮೂಲಕ ಜಾಲಿ ಮೂಡ್ನಲ್ಲಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಸದಾ ನಿರತರಾಗಿರುವ ಪ್ರಿಯಾಂಕಾ ಒಂದಲ್ಲ ಒಂದು ಸುದ್ದಿಯ ಮೂಲಕ ಟ್ರೆಂಡಿಂಗ್ ನಲ್ಲಿ ಇರುತ್ತಾರೆ. ಅದೇ ರೀತಿ ಮತ್ತೊಂದು ವಿಚಾರಕ್ಕೆ ಈಗ ಸುದ್ದಿಯಾಗಿದ್ದಾರೆ. ಮೊನ್ನೆಯಷ್ಟೇ ಪ್ರಿಯಾಂಕಾ ನಟಿಸಿರುವ ‘ಸ್ಕೈ ಇಸ್ ಪಿಂಕ್’ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು. ಟ್ರೇಲರ್ ಬಿಡುಗಡೆಗೊಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಪಡೆದುಕೊಂಡಿತ್ತು. ಆದರೆ ಮಹಾರಾಷ್ಟ್ರ ಪೊಲೀಸರು ಸಿನಿಮಾದ ಟ್ರೈಲರ್ ವೀಕ್ಷಿಸಿ ಪ್ರಿಯಾಂಕಾ ಚೋಪ್ರಾಗೆ ಎಚ್ಚರಿಕೆ ಸೂಚನೆ ರವಾನಿಸಿದ್ದಾರೆ. ಪೊಲೀಸರಿಗೂ ಸಿನಿಮಾಗೂ ಏನು ಸಂಬಂಧ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡುವುದು ಸಹಜ.

ಆದರೆ ಸಿನಿಮಾದ ಟೈಲರ್’ನ ಒಂದು ಸಂಭಾಷಣೆಯಲ್ಲಿ ನಟಿ ಪ್ರಿಯಾಂಕ ಅನಾರೋಗ್ಯದಿಂದ ಬಳಲುತ್ತಿರುವ ಮಗಳಿಗೆ ಖರ್ಚು ಮಾಡಲು ಹಣವಿಲ್ಲದ ಕಾರಣ ‘ಯಾವುದಾದರೂ ಬ್ಯಾಂಕ್ ದರೋಡೆ ಮಾಡೋಣ’ ಎಂದು ಸಹ ನಟ ಫರಾನ್ ಅಖ್ತರ್ ಗೆ ಹೇಳುತ್ತಾರೆ. ಈ ದೃಶ್ಯವನ್ನು ವೀಕ್ಷಿಸಿದ ಮಹಾರಾಷ್ಟ್ರ ಪೊಲೀಸರು ಆ ದೃಶ್ಯದ ಸ್ಕ್ರೀನ್ ಶಾಟ್ ತೆಗೆದು ಈ ಘಟನೆ ನಡೆದರೆ ಖಂಡಿತವಾಗಿ ಐಪಿಸಿ ಸೆಕ್ಷನ್ ೩೯೩ರ ಅಡಿಯಲ್ಲಿ ಏಳು ವರ್ಷ ಜೈಲು ಶಿಕ್ಷೆ ಮತ್ತು ಭಾರಿ ದಂಡವನ್ನು ವಿಧಿಸಲಾಗುವುದು ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದೆ. ಇದಕ್ಕೆ ರೀಟ್ವೀಟ್ ಮಾಡಿದ ಪ್ರಿಯಾಂಕಾ ‘ಅಯ್ಯೋ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದೆ’ ಇದರಿಂದ ಮತ್ತೊಂದು ಪ್ಲಾನ್ ಹುಡುಕಬೇಕು ಎಂದು ಕೂಲ್ ಆಗಿಯೇ ಮರು ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here