ಪ್ರಿಯಾಂಕಾ ಗಾಂಧಿ ಎದೆ ಮೇಲಿನ ಬಟ್ಟೆ ಹಿಡಿದ ಪುರುಷ ಪೊಲೀಸ್..! ಬಿಜೆಪಿಗೆ ಛೀಮಾರಿ ಹಾಕಿದ ಬಿಜೆಪಿ ನಾಯಕಿ..!

0
132

ಉತ್ತರಪ್ರದೇಶದ ಹತ್ರಾಸ್‌ನಲ್ಲಿ ನಡೆದ ಅ’ತ್ಯಾಚಾರ ಪ್ರಕರಣಕ್ಕೆ  ಹೋರಾಟಕ್ಕಿಳಿದಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರನ್ನು ಉತ್ತರಪ್ರದೇಶದ ಪೊಲೀಸ್‌ರು ಅತ್ಯಂತ ಅಮಾನವೀಯವಾಗಿ ನಡೆಸಿಕೊಂಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದೆ ಅತ್ಯಾಚಾರಕ್ಕೊಳಗಾದ ಯುವತಿಯ ಕುಟುಂಬಸ್ಥರನ್ನು ಭೇಟಿಯಾಗಲು ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಉತ್ತರಪ್ರದೇಶ ಪೊಲೀಸರು ನೆಲಕ್ಕೆ ಕೆಡವಿ, ಬಲ ಪ್ರಯೋಗದ ಮೂಲಕ ವಶಕ್ಕೆ ಪಡೆದಿದ್ದ ಘಟನೆ ದೇಶಾದ್ಯಂತ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಉತ್ತರಪ್ರದೇಶ ಸರ್ಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶ ಮಾಡುತ್ತಿದೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಇದೀಗ ಪ್ರಿಯಾಂಕಾ ಗಾಂಧಿಯವರನ್ನು ಉತ್ತರಪ್ರದೇಶದ ಪುರುಷ ಪೊಲೀಸ್ ಒರ್ವ ಎದೆಯ ಮೇಲಿನ ಬಟ್ಟೆ ಹಿಡಿದಿರುವ ಪೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಮಾಜಿ ಪ್ರಧಾನಿ ಕುಟುಂಬದ ಒರ್ವ ಹೆಣ್ಣು ಮಗಳನ್ನು ಹೀಗೆ ನಡೆಸಿಕೊಳ್ಳುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನು ಪ್ರಿಯಾಂಕಾ ಗಾಂಧಿಯವರನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಂಡಿರುವುದನ್ನು ಮಾಹಾರಾಷ್ಟçದ ಬಿಜೆಪಿ ಉಪಾಧ್ಯಕ್ಷೆ ಚಿತ್ರಾ ವಾಘ್ ಖಂಡಿಸಿದ್ದು, ಮಾತೃ ಪಕ್ಷಕ್ಕೆ ಮತ್ತು ಉತ್ತರಪ್ರದೇಶ ಪೊಲೀಸರಿಗೆ ಛೀಮಾರಿ ಹಾಕಿದ್ದಾರೆ. ಈ ಕುರಿತು ಪೋಟೋಗಳೊಂದಿಗೆ ಟ್ವೀಟ್ ಮಾಡಿರುವ ಚಿತ್ರಾ ವಾಘ್ “ರಾಜಕೀಯ ನಾಯಕಿಯೊಬ್ಬರ ಬಟ್ಟೆಯ ಮೇಲೆ ಕೈ ಹಾಕಲು ಪುರುಷ ಪೊಲೀಸ್ ಅಧಿಕಾರಿಗೆ ಎಷ್ಟು ಧೈರ್ಯ..? ಪೊಲೀಸರು ತಮ್ಮ ಇತಿಮಿತಿಗಳನ್ನು ಅರಿತು ಕೆಲಸ ಮಾಡಬೇಕು. ಭಾರತೀಯ ಸಂಸ್ಕೃತಿಯನ್ನು ನಂಬುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡಲೇ ಆ ಪೊಲೀಸ್ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಚಿತ್ರಾ ವಾಘ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಾಹಾರಾಷ್ಟ ರಾಜ್ಯ ಯುವ ಕಾಂಗ್ರೆಸ್ “ಚಿತ್ರಾ ಅವರ ನಿಲುವನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ನೀವು ಎನ್‌ಸಿಪಿ ತೊರೆದು ಬಿಜೆಪಿ ಸೇರಿದ್ದರು, ನಿಮ್ಮ ಸಂಸ್ಕಾರಕ್ಕೆ ಬದ್ದರಾಗಿದ್ದೀರಿ ” ಎಂದು ಟ್ವೀಟ್ ಮಾಡಿದೆ.

ಇನ್ನು ಪ್ರಿಯಾಂಕಾ ಗಾಂಧಿ ಅವರನ್ನು ಈ ರೀತಿಯಾಗಿ ನಡೆಸಿಕೊಂಡಿರುವ ಘಟನೆಯನ್ನು ಅನೇಕ ಬಿಜೆಪಿ ನಾಯಕರೇ ಖಂಡಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಈ ರೀತಿಯ ಘಟನೆಗಳಿಗೆ ಅವಕಾಶ ಕೊಡಬಾರದು. ವಿರೋಧ ಪಕ್ಷದ ಒರ್ವÀ ನಾಯಕಿಯನ್ನು ಬಲ ಪ್ರಯೋಗದ ಮೂಲಕ ಹತ್ತಿಕ್ಕುವ ಕೆಲಸ ಪ್ರಜಾಪ್ರಭುತ್ವದಲ್ಲಿ ಅತ್ಯಂತ ಅಪಾಯಕಾರಿ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸರಣಿ ಅತ್ಯಾಚಾರ ಪ್ರಕರಣಗಳು ಪ್ರತಿದಿನ ವರದಿಯಾಗುತ್ತಿರುವುದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮುಜುಗರ ಉಂಟು ಮಾಡುತ್ತಿವೆ. ಈ ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗುತ್ತಿರುವುದು ಕೇಂದ್ರ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.

LEAVE A REPLY

Please enter your comment!
Please enter your name here