ಬಣ್ಣದ ಲೋಕದಲ್ಲಿ ಬದುಕು ಕಟ್ಟುಕೊಳ್ಳಬೇಕಂಬ ಕನಸು ಹೊತ್ತ ಹಾವೇರಿಯ ಹುಡುಗರ ತಂಡವೊಂದು, ಗೋರಿ ಎಂಬ ಚಿತ್ರವನ್ನು ತಯಾರು ಮಾಡಿಕೊಂಡು ಗಾಂಧಿ ನಗರಕ್ಕೆ ಲಗ್ಗೆ ಇಡಲು ಬರುತ್ತಿದ್ದಾರೆ. ಅಲ್ಲದೆ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು,ಸಾಂಗ್ ಮತ್ತು ಪೈಟ್ ಶೂಟ್ ಅನ್ನು ಮಾತ್ರ ಉಳಿಸಿಕೊಂಡಿದೆಯಂತೆ. ಆದರೆ ಈ ಗ್ಯಾಪ್ನಲ್ಲಿಯೇ ಚಿತ್ರತಂಡ ಆಡಿಯೋ ರಿಲೀಸ್ ಮಾಡಿದೆ. ಬೆಂಗಳೂರು ನಗರದ ಎಸ್.ಅರ್ವಿ ಥಿಯೇಟರ್ನಲ್ಲಿ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಗೋರಿ ಚಿತ್ರವನ್ನು ನವ ನಿರ್ದೇಶಕ ಗೋಪಾಲ ಕೃಷ್ಣ ನಿರ್ದೇಶನ ಮಾಡಿದ್ದು,ಸ್ನೇಹ ಮತ್ತು ಪ್ರೀತಿಯ ಸುತ್ತ ಸುತ್ತುವ ಕತೆ ಹೆಣೆದು,ಗೋರಿಯ ಮೇಲೆ ಪ್ರೀತಿಯ ಸಮಾಧಿ ಕಟ್ಟೋಕೆ ಹೊರಟಿದ್ದಾರಂತೆ.ಇನ್ನು ಚಿತ್ರದ ನಾಯಕ ನಟನಾಗಿ ಸಿನಿಮಾ ಪತ್ರಕರ್ತ ಕಿರಣ್ ಹಾವೇರಿ ಅಭಿನಯಿಸಿದ್ದು,ಈ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲು ಭರ್ಜರಿಯಾಗಿ ರೆಡಿಯಾಗಿದ್ದಾರೆ.ಇನ್ನು ಚಿತ್ರದಲ್ಲಿ ನಾಯಕಿಯಾಗಿ ಸ್ಮಿತ ಶ್ವೇತ ಮೊದಲಬಾರಿಗೆ ಬಣ್ಣ ಹಚ್ಚಿದ್ದು, ಅದೃಷ್ಟ ಪರೀಷೆಗೆ ಇಳಿದಿದ್ದಾರೆ. ಅಲ್ಲದೆ ಚಿತ್ರದಲ್ಲಿ 4 ಹಾಡುಗಳಿದ್ದು,ವಿನೋ ಮನಸು ಸಂಗೀತಾ ನೀಡಿದ್ದಾರೆ. ಕೆ ಕಲ್ಯಾಣ್,ಶಿವು ಬೇಗಿ ಹಾಗೂ ಪತ್ರಕರ್ತ ಜಗ್ಗಿನ್ ಸಾಹಿತ್ಯ ಬರೆದಿದ್ದಾರೆ.