ಇತ್ತೀಚೆಗೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಅನ್ನೋದು ಸಾಮಾನ್ಯ ಆಗಿ ಹೋಗಿದೆ. ಲಕ್ಷಗಟ್ಟಲೆ ಸುರಿದು ಫೋಟೋಗಳಿಗೆ ನಿಗದಿತ ಲೊಕೇಶನ್ಗಳಲ್ಲಿ ಪೋಸ್ ಕೊಡುತ್ತಾರೆ. ಆದರೆ ಇದೀಗ ಈ ಫೋಟೋಶೂಟನ್ನು ಬ್ಯಾನ್ ಮಾಡಲು ಯೋಜಿಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.
ಆದರೆ ಇದನ್ನು ಬ್ಯಾನ್ ಮಾಡಲು ಪ್ಲ್ಯಾನ್ ಮಾಡುತ್ತಿರುವುದು ನಮ್ಮ ರಾಜ್ಯದಲ್ಲಿ ಅಲ್ಲ, ಮಧ್ಯಪ್ರದೇಶದಲ್ಲಿ. ಈಗಾಗಲೇ ಮಧ್ಯಪ್ರದೇಶದ ಗುಜರಾತಿ, ಸಿಂಧಿ ಹಾಗೂ ಜೈನ ಸಮುದಾಯಗಳು ತಮ್ಮ ಸಮುದಾಯಗಳಲ್ಲಿ ಯಾರೂ ಪ್ರೀವೆಡ್ಡಿಂಗ್ ಫೋಟೋಶೂಟ್ ಮಾಡಿಸಬಾರದು ಎಂದು ಕಟ್ಟುನಿಟ್ಟಿನ ಆಜ್ಞೆ ಮಾಡಿವೆ. ಪ್ರೀ ವೆಡ್ಡಿಂಗ್ ಫೋಟೋಶೂಟ್ ನಮ್ಮ ಸಂಸ್ಕøತಿಯಲ್ಲ. ಇತ್ತೀಚೆಗೆ ಜನರು ಪಾಶ್ಚಾತ್ಯ ಸಂಸ್ಕøತಿಗಳ ಬೆನ್ನ ಹಿಂದೆ ಹೋಗುತ್ತಿದ್ದಾರೆ. ಮೊದಲೆಲ್ಲಾ ವಧು-ವರರು ಮದುವೆ ದಿನ ಮಾತ್ರ ಒಟ್ಟಿಗೆ ನಿಂತು ಫೊಟೋ ತೆಗೆಸಿಕೊಳ್ಳುತ್ತಿದ್ದರು.
ಈಗ ಮದುವೆಗೆ ಮುನ್ನವೇ ವಿಭಿನ್ನವಾಗಿ ಪೋಸ್ ನೀಡುತ್ತಾ ಸಂಸ್ಕøತಿ-ಸಂಪ್ರದಾಯದ ವಿರುದ್ಧ ಹೋಗುತ್ತಿದ್ದಾರೆ ಎಂಬುದು ಈ ಸಮುದಾಯಗಳ ವಾದವಾಗಿದೆ.
ಜನರು ಹಿಂದಿನ ಕಾಲದ ಆಚರಣೆಗಳನ್ನು ಫಾಲೋ ಮಾಡಿದರೆ ಅವರ ಜೀವನ ಸಂತೋಷದಾಯಕವಾಗಿರುತ್ತದೆ. ಆದ್ದರಿಂದ ಈ ರೀತಿಯ ಫೋಟೋಶೂಟ್ಗಳನ್ನು ಬ್ಯಾನ್ ಮಾಡಬೇಕು ಎಂದು ಗುಜರಾತ್ ಸಮಾಜ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್ ಪಾಟೀಲ್ ಕೂಡಾ ಹೇಳಿದ್ದಾರೆ. ಒಂದು ವೇಳೆ ಈ ಪ್ರೀ ವೆಡ್ಡಿಂಗ್ ಫೋಟೋಶೂಟ್ ವಿರೋಧಿಸಿ ಕಠಿಣ ಪ್ರತಿಭಟನೆಗಳು ನಡೆದರೆ ದೇಶಾದ್ಯಂತ ಇದನ್ನು ಬ್ಯಾನ್ ಮಾಡಿದರೂ ಮಾಡಬಹುದು.