ಕೆಜಿಎಫ್, ಕನ್ನಡದಲ್ಲಿ ಇತಿಹಾಸ ಸೃಷ್ಟಿಸಿದ ಸಿನಿಮಾ.
ಈ ಸಿನಿಮಾದಿಂದ ರಾಕಿಂಗ್ ಸ್ಟಾರ್ ಯಶ್, ಅಂತಾರಾಷ್ಟ್ರೀಯ ನಟನಾಗಿ ಹೊರಹೊಮ್ಮಿದರು.. ಇನ್ನು ಕೆಜಿಎಫ್ ಚಾಪ್ಟರ್ ೧ ರಲ್ಲಿ ದಶಕಗಳ ಹಿಂದೆ ಕೋಲಾರದ ಚಿನ್ನದ ಗಣಿಯಲ್ಲಿ ಮಾಫಿಯಾ ಹೇಗಿತ್ತು ಹಾಗೂ ಗಣಿಯ ಮೇಲೆ ಜಗತ್ತಿನ ಕಣ್ಣುಗಳು ಹೇಗೆ ಬಿದ್ದವು ಎಂಬುದನ್ನು ತೋರಿಸಲಾಗಿತ್ತು !

ಇನ್ನು ಕೆಜಿಎಫ್ ಚಾಪ್ಟರ್ ೨ ರಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ ..ಇನ್ನು ಚಿತ್ರದಲ್ಲಿ ಬಿ ಟೌನ್ ನ, ಸಂಜಯ್ ದತ್ ಜೊತೆಗೆ ಹಲವಾರು ಬಾಲಿವುಡ್ ನಟರು ಅಭಿನಯಿಸುತ್ತಿರುವುದು ವಿಶೇಷ! ಇನ್ನೂ ಈ ಭಾಗದಲ್ಲಿ ಮೊದಲ ಭಾಗಕ್ಕಿಂತ ಹೆಚ್ಚು ಆಕ್ಷನ್ ಸನ್ನಿವೇಶಗಳು ಇರಲಿದೆಯಂತೆ !
ಇನ್ನು ಕೆಜಿಎಫ್ ಚಾಪ್ಟರ್ ೨ ಗಾಗಿ ಚಿತ್ರತಂಡ ಅದ್ಧೂರಿಯಾಗಿ ಸೆಟ್ ಹಾಕಲಾಗಿದೆ. ಚಿತ್ರ ತಂಡ ಹಲವು ದಿನಗಳಿಂದ ಹಗಲು ರಾತ್ರಿ ಎನ್ನದೇ ಚಿತ್ರಕ್ಕೋಸ್ಕರ ಶ್ರಮಿಸುತ್ತಿದೆ.. ಆದರೆ ಕೆಲವು ಜನರು ಸೆಟ್ನಲ್ಲಿರುವ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಲು ಬಿಡುತ್ತಿದ್ದಾರೆ .. ಹೀಗೆ ಮಾಡಿದರೆ ಕಷ್ಟಪಟ್ಟು ಶ್ರಮಿಸುತ್ತಿರುವೆ ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತದೆ ಎಂಬುದು ನಿರ್ದೇಶಕ ಪ್ರಶಾಂತ್ ನೀಲ್ ಅವರ ಆಕ್ರೋಶ !
ಇನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ, “ದಯವಿಟ್ಟು ಯಾರೂ ಸೋಶಿಯಲ್ ಮಿಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ, ಈಗಾಗಲೇ ಅಂತಹ ಅಕೌಂಟ್ ಗಳನ್ನು ಡಿಲೀಟ್ ಮಾಡಿದ್ದೇವೆ. ಅಂತಹದ್ದು ಕಂಡು ಬಂದಲ್ಲಿ ನಮಗೆ ಲಿಂಕ್ ಶೇರ್ ಮಾಡಿ’ ಎಂದು ಅಭಿಮಾನಿಗಳತ್ತ ವಿನಂತಿ ಮಾಡಿಕೊಂಡಿದ್ದಾರೆ !