ಪೋಷಕ ಪಾತ್ರದಿಂದ ನಾಯಕನಾಗಿ ಪ್ರಮೋಷನ್ ಪಡೆದ ಪ್ರಮೋದ್ ಶೆಟ್ಟಿ..!

0
186

ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ, ಕೊನೆಗೆ ಹೀರೋ ಆದವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಮೂಲತ: ರಂಗಭೂಮಿ ಕಲಾವಿದನಾಗಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದ ಮಂಗಳೂರಿನ ಪ್ರತಿಭೆ ಪ್ರಮೋದ್ ಶೆಟ್ಟಿ ಇದೀಗ ಸಿನಿಮಾವೊಂದರಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅವನೇ ಶ್ರೀಮನ್ನಾರಾಯಣ ಸೇರಿದಂತೆ ಬಹುತೇಕ ಸಿನಿಮಾಗಳಲ್ಲಿ ಪ್ರಮೋದ್ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ‘ಒಂದು ಶಿಕಾರಿಯ ಕಥೆ’ ಎಂಬ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾದಲ್ಲಿ ಪ್ರಮೋದ್ ನಾಯಕನಾಗಿ ಕಾಣಿಸಿಕೊಂಡಿದ್ದು ಈ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಪ್ರಮೋದ್, 50 ವರ್ಷದ ಕಾದಂಬರಿಕಾರನಾಗಿ ನಟಿಸಿದ್ದಾರೆ. ಎಲ್ಲವನ್ನೂ ತೊರೆದ ವಿರಕ್ತ ಕಾದಂಬರಿಕಾರನಾಗಿ ಪ್ರಮೋದ್ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಚಿತ್ರದ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಪ್ರಮೋದ್ ಲ್ಯಾಂಪ್ ಬೆಳಕಿನಲ್ಲಿ ಏನೋ ಬರೆಯುತ್ತಿರುವ ದೃಶ್ಯವನ್ನು ನೋಡಬಹುದು.

‘ಒಂದು ಶಿಕಾರಿಯ ಕಥೆ’ ಚಿತ್ರವನ್ನು ಸಚಿನ್ ಶೆಟ್ಟಿ ನಿರ್ದೇಶಿಸಿದ್ದಾರೆ. ಕುಂದಾಪುರದಲ್ಲಿ 100 ವರ್ಷ ಹಳೆಯದಾದ ಮನೆಯನ್ನು ಹುಡುಕಿ, ಜೊತೆಗೆ ಸೆಟ್ ಹಾಕಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆಯಂತೆ. ಚಿತ್ರದ ಟ್ರೇಲರ್ ಕೂಡಾ ಈಗಾಗಲೇ ಬಿಡುಗಡೆಯಾಗಿದ್ದು ಸಾಕಷ್ಟು ಕುತೂಹಲ ಹುಟ್ಟಿಸಿದೆ. ರಾಜೀವ್ ಶೆಟ್ಟಿ ಹಾಗೂ ಸಚಿನ್ ಶೆಟ್ಟಿ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಸಿರಿ ಪ್ರಹ್ಲಾದ್, ಶ್ರೀಪ್ರಿಯ, ಪ್ರಸಾದ್ ಚೆರ್ಕಾಡಿ, ಎಂ.ಕೆ. ಮಠ ಹಾಗೂ ಇನ್ನಿತರರು ನಟಿಸಿದ್ದಾರೆ.

LEAVE A REPLY

Please enter your comment!
Please enter your name here