ಬಾಲ್ಯದಿಂದಲೂ ನಾವೆಲ್ಲ `ಪ್ರತಿನಿತ್ಯ ಒಂದು ಸೇಬನ್ನು ತಿಂದರೆ ವೈದ್ಯರಿಂದ ದೂರವಿರಬಹುದು’ ಎಂಬ ಮಾತನ್ನು ಕೇಳದೆ ಇರಲು ಸಾಧ್ಯಯವೇ ಇಲ್ಲ ಎನ್ನಬಹುದು. ಆ ಮಾತು ಶೇಕಡ 100ರಷ್ಟು ಸತ್ಯ. ಯಾಕೆಂದರೆ ಸೇಬಿನ ಸೇವನೆ ದೇಹದ ಆರೋಗ್ಯವನ್ನು ವೃದ್ದಿಸುವುದರ ಜೊತೆ ಹಲವು ಕಾಯಿಲೆಗಳನ್ನು ನಿವಾರಿಸುತ್ತದೆ. ದಿನನಿತ್ಯ ಒಂದು ಸೇಬನ್ನು ಸೇವಿಸುವುದರಿಂದ ದೇಹಕ್ಕೆ ಸಿಗುವ ಲಾಭಾದಾಯಕ ಅಂಶಗಳು ಇಲ್ಲಿವೆ ನೋಡಿ,
1.ಸೇಬಿನಲ್ಲಿ ಆಂಟಿ-ಆಂಕ್ಸಿಡೆಂಟ್ಗಳ ಪ್ರಮಾಣ ಹೆಚ್ಚು ಇರುವ ಕಾರಣ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಸೇಬಿನ ಸೇವನೆಯಿಂದ ಕ್ಯಾನ್ಸರ್, ಟೆನಷನ್ ಸಮಸ್ಯೆ, ಸಕ್ಕರೆ ಕಾಯಿಲೆ ಮತ್ತು ಹೃದಯ ಸಮಸ್ಯೆಗಳನ್ನು ನಿಯಂತ್ರಣಗೊಳ್ಳುತ್ತದೆ.
- ಸೇಬಿನ ಸೇವನೆ ಹೆಚ್ಚು ಮಾಡಿದ್ದಲ್ಲಿ ಮೆದುಳಿನ ಕ್ರಿಯೆ ಸರಾಗವಾಗುವುದರ ಜೊತೆಗೆ ಮೆದುಳಿನ ನರಗಳಿಗೆ ಶಕ್ತಿಯನ್ನು ನೀಡುತ್ತದೆ.
- ದೇಹದಲ್ಲಿರುವ ಕೆಟ್ಟು ಕೊಬ್ಬಿನಾಂಶವನ್ನು ಕರಗಿಸುವಲ್ಲಿ ಸೇಬು ಪ್ರಮುಖ ಪಾತ್ರ ವಹಿಸುತ್ತದೆ.
- ಸ್ಟ್ರೋಕ್ ಸಮಸ್ಯೆಯನ್ನು ನಿಯಂತ್ರಿಸಲು ನಿತ್ಯ ಸೇಬು ಸೇವಿಸುವುದು ಒಳ್ಳೆಯದು.