ಗಾಳಿಪಟ-೨ ನಲ್ಲಿ ಎಂಟ್ರಿ ಕೊಡಲಿದ್ದಾರೆ ಪ್ರಭುದೇವ !??

0
214

ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ಗಾಳಿಪಟ ೨ ಚಿತ್ರತಂಡ, ದಿನದಿಂದ ದಿನಕ್ಕೆ ಒಂದಲ್ಲ ಒಂದು ವಿಶೇಷತೆಗಳನ್ನು ಕೊಡುತ್ತಾಲೆ ಬಂದಿದೆ! ಯೋಗರಾಜ್ ಭಟ್ ಅವರು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಚಂದನವನದಲ್ಲಿ ಒಳ್ಳೆಯ ಹೈಪ್ ಕ್ರಿಯೇಟ್ ಆಗಿದೆ !

ಗಾಳಿಪಟ, 2009ರಲ್ಲಿ ಬಿಡುಗಡೆಯಾದ ಭಟ್ಟರ ಬ್ಲಾಕ್ ಬಾಸ್ಟರ್ ಸಿನಿಮಾ! ಗಣೇಶ್ ಮತ್ತು ಭಟ್ಟರ ಕಾಂಬಿನೇಷನ್ನಲ್ಲಿ ಮೂಡಿ ಬಂದಿದ್ದ ಎರಡನೇ ಸಿನಿಮಾ ಇದಾಗಿದ್ದು ಲವ್ ಕಂಮ್ ಕಾಮಿಡಿ ಜಾನರ್ ನ ಈ ‘ಗಾಳಿಪಟ’ಕ್ಕೆ ಕನ್ನಡದಲ್ಲಿ ಭಾರೀ ಮಟ್ಟದ ಹೆಸರಾಗಿತ್ತು!
ಗಣೇಶ್ – ಪಂಚಿಂಗ್ ಡೈಲಾಗ್ ದಿಗಂತ್- ಕಾಮಿಡಿ ಹಾಗೂ ರಾಜೇಶ್ ಕೃಷ್ಣನ್ ರವರ ಲವ್ ಫೇಲ್ಯೂರ್ ಆಕ್ಟಿಂಗ್ಗೆ ಪ್ರೇಕ್ಷಕರು ಫಿದಾ ಆಗಿದ್ದರು! ಗಾಳಿಪಟ ಚಿತ್ರದ ಸೀಕ್ವೆಲ್ ಗಾಳಿಪಟ ೨ ಬರುತ್ತಿದ್ದು ಚಿತ್ರಕ್ಕೆ ನಾಯಕರಾಗಿ ಶರಣ್, ಕವಲುದಾರಿ ಖ್ಯಾತಿಯ ರಿಷಿ ಹಾಗೂ ಲೂಸಿಯಾ ಪವನ್ ಕುಮಾರ್ ನಾಯಕರಾಗಿ
ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು.. ಹಾಗೇ ಚಿತ್ರದ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದರು !

ಪಂಚತಂತ್ರ ಯಶಸ್ಸಿನಲ್ಲಿರುವ ಯೋಗರಾಜ್ ಭಟ್ಟರು ಮುಂದಿನ ತಿಂಗಳು ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂಬುವುದಾಗಿ ಹೇಳಿದ್ದರು.. ಆದರೆ ಇದ್ದಕ್ಕಿದ್ದಂತೆ ಚಿತ್ರದಲ್ಲಿ ಮಹತ್ತರ ಬದಲಾವಣೆಯಾಗಿದೆ !

ರಿಷಿ ಹಾಗೂ ಶರಣ್ ಜಾಗದಲ್ಲಿ ಮತ್ತೆ ದಿಗಂತ್ ಮತ್ತು ಗಣೇಶ್ ಕಾಣಿಸಿಕೊಳ್ಳಲಿದ್ದಾರಂತೆ !

ಇದ್ದಕ್ಕಿದಂತೆ ಈ ಚಿತ್ರದ ಕಲಾವಿದರು ಬದಲಾಗಿದ್ದೇಕೆ? ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಈಗಾಗಲೇ ಚಿತ್ರತಂಡ ಮಳೆಗಾಗಿ ಕಾದು ಚಿತ್ರೀಕರಣಕ್ಕೆ ಸಿದ್ಧವಾಗಿತ್ತು. ಆದರೆ ಇದೀಗ ಕಲಾವಿದರ ಬದಲಾವಣೆಯಾಗಿದೆ

ಇನ್ನು ಗಾಳಿಪಟ ೨ ಪೋಸ್ಟರ್ ಬಿಡುಗಡೆ ಮಾಡಿದಾಗಲಿ೦ದ ಸಾಕಷ್ಟು ಜನರು ಮೂಲ ಕಲಾವಿದರೇ ಅಭಿನಯಿಸಿದರೆ ಚಂದ ಎನ್ನುವ ಅಭಿಪ್ರಾಯಗಳ ಮೇರೆಗೆ ನಿರ್ದೇಶಕರು ‘ಗಾಳಿಪಟ-2’ ಗಾಗಿ ಮತ್ತೆ ಗಣೇಶ್ ಮತ್ತು ದಿಗಂತ್ ರನ್ನು ಕರೆ ತಂದಿದ್ದಾರೆ. ಅಲ್ಲದೆ ರಿಷಿ ಮತ್ತು ಶರಣ್ ಸಹಿತ ಯಾವುದೇ ಬೇಜಾರಿಲ್ಲದೆ ಒಪ್ಪಿಕೊಂಡಿದ್ದಾರಂತೆ
ಇನ್ನು ಗಾಳಿಪಟದಲ್ಲಿ ಇದ್ದ ನೀತು ಡೈಸಿ ಬೋಪಣ್ಣ ಭಾವನಾ ಬದಲಿಗೆ ಗಾಳಿಪಟ-೨ ನಲ್ಲಿ ಶರ್ಮಿಳಾ ಮಾಂಡ್ರೆ , ಅದಿತಿ ಪ್ರಭುದೇವ ಸೋನಾಲ್ ಮಂಥೇರೊ ಕಾಣಿಸಿಕೊಳ್ಳಲಿದ್ದಾರೆ.. ಇನ್ನು ರಾಜೇಶ್ ಕೃಷ್ಣನ್ ಜಾಗವನ್ನು ಲುಸಿಯಾ ಖ್ಯಾತಿಯಾ ಪವನ್ ಕುಮಾರ್ ತುಂಬಲಿದ್ದಾರೆ.. ಇನ್ನು ಹಿರಿಯ ಪಾತ್ರದಲ್ಲಿ ಅನಂತ್ ನಾಗ್ ಅವರು ಕಾಣಿಸಿಕೊಳ್ಳಲಿದ್ದು.. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ..

ವಿಶೇಷ ಏನೆಂದರೆ ಈ ಚಿತ್ರದಲ್ಲಿ ತಮಿಳು ಖ್ಯಾತ ನಟ ಪ್ರಭುದೇವ ಅಭಿನಯಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ !

ಸದ್ಯ ಡ್ಯಾನ್ಸರ್ ಪ್ರಭುದೇವ ಮುಂಬೈನಲ್ಲಿ ಸಲ್ಮಾನ್ ಖಾನ್ ನಟನೆಯ ದಬಾಂಗ್ 3 ಸಿನಿಮಾ ನಿರ್ದೇಶಿಸುತ್ತಿದ್ದಾರೆ..ಇನ್ನು ಈ ಚಿತ್ರದಲ್ಲಿ ಕನ್ನಡದ ಹೆಮ್ಮೆಯ ನಟ ,ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಭಿನಯಿಸುತ್ತಿದ್ದಾರೆ !
ಯೋಗರಾಜ್ ಭಟ್ ಮತ್ತು ನಿರ್ದೇಶಕ ಮಹೇಶ್ ದಾನಣ್ಣ ನ ಅವರು ಮುಂಬಯಿಗೆ ತೆರಳಿ ಪ್ರಭುದೇವರ ಹತ್ತಿರ ಚರ್ಚೆ ಮಾಡಿದ್ದಾರಂತೆ!
ಮೈಸೂರು ಮೂಲದ ಪ್ರಭುದೇವ ತಮಿಳು ತೆಲುಗು ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ಚಿರಪರಿಚಿತರು.
ಈಗಾಗಲೆ ಪ್ರಭುದೇವ ಅವರು ಕನ್ನಡದಲ್ಲಿ , ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಅವರ H2O ಚಿತ್ರದಲ್ಲಿ ಮತ್ತು 123 ಅಭಿನಯಿಸಿದ್ದಾರೆ ..

ಪ್ರಭುದೇವ ಅವರು ಗಾಳಿಪಟ ವ ಚಿತ್ರದಲ್ಲಿ ಅಭಿನಯಿಸುತ್ತಾರೋ ಇಲ್ಲವೋ ಎಂಬುದು ಆದಷ್ಟು ಬೇಗ ಚಿತ್ರತಂಡ ಹೇಳುತ್ತದೆಯಂತೆ!

LEAVE A REPLY

Please enter your comment!
Please enter your name here