ಅನುಷ್ಕಾ ಶೆಟ್ಟಿ ಬಗ್ಗೆ ಮನಬಿಚ್ಚಿ ಮಾತನಾಡಿದ `ಬಾಹುಬಲಿ’..!!

0
391

ತೆಲುಗಿನ ಮಿರ್ಚಿ, ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅನುಷ್ಕಾ ಶೆಟ್ಟಿ ಅವರೊಂದಿಗೆ ಪ್ರೀತಿ ಇದ್ಯಾ ಅಥವಾ ಇಲ್ಲವಾ.? ಎಂಬುದನ್ನು ಮಾಧ್ಯಮ ಮಿತ್ರರೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ, ಪ್ರಭಾಸ್ ಜೋಡಿಯನ್ನು ವೀಕ್ಷಿಸಿದ ಅವರ ಅಭಿಮಾನಿಗಳು ಇಬ್ಬರ ಜೋಡಿ ಅದ್ಭುತವಾಗಿದೆ. ಇವರಿಬ್ಬರ ಮಧ್ಯೆ ಪ್ರೀತಿ ಇರಬಹುದು ಎಂದು ಹಲವರು ಟ್ವೀಟ್ ಮಾಡಿ ತಿಳಿಸಿದರೆ. ಇನ್ನು ಕೆಲವರು ಈ ಜೋಡಿಯನ್ನು ಹಾಟ್ ಟಾಪೀಕ್ ಮಾಡಿಕೊಂಡರು.

ಸ್ವತಃ ಮಾಧ್ಯಮಾದವರು ಈ ವಿಚಾರ ಕುರಿತು ಪ್ರಭಾಸ್ ಅವರ ಬಳಿ ಆನೇಕ ಬಾರಿ ಕೇಳಿದರು, ಇದಕ್ಕೆ ಉತ್ತರಿಸದೆ ಹೋಗುತ್ತಿದ್ದರು ಪ್ರಭಾಸ್. ಆದರೆ ಹೈದ್ರಾಬಾದ್‍ನಲ್ಲಿ ನಡೆದ ಒಂದು ಸಂದರ್ಶನದಲ್ಲಿ ಮಾತನಾಡಿದ ಪ್ರಭಾಸ್ ಅನುಷ್ಕಾ ಮತ್ತು ಅವರ ನಡುವೆ ಪ್ರೀತಿ ಇದೆಯಾ.? ಎಂಬ ಪ್ರಶ್ನೆಗೆ ಸ್ಪಷ್ಟವಾಗಿ ಪ್ರತಿಕ್ರೀಯೆ ನೀಡಿದರು.

ಅನುಷ್ಕಾ ಹಾಗೂ ನಾನು ಉತ್ತಮ ಸ್ನೇಹಿತರು. ನಮ್ಮಿಬ್ಬರ ಮಧ್ಯೆ ಯಾವ ಪ್ರೀತಿಯಿಲ್ಲ.! ಅವೆಲ್ಲ ಒಂದು ರೂಮರ್ ಆಷ್ಟೇ ಅವಕ್ಕೆಲ್ಲ ಅಷ್ಟು ತಲೆಕಡಿಸಿಕೊಳ್ಳಬೇಡಿ ಎಂದು ನಗುತ್ತಲೇ ಹೇಳಿದ್ದಾರೆ. ನನ್ನ ಅನುಷ್ಕಾ ಮಧ್ಯೆ ಪ್ರೀತಿ ಇದ್ದಿದ್ದರೆ, ಇಷ್ಟು ದಿನ ಯಾವುದೇ ಕಾರಣಕ್ಕೂ ಮುಚಿಡಲು ಸಾಧ್ಯವಾಗುತ್ತಿರಲಿಲ್ಲ. ನಿಮ್ಮಗೆಲ್ಲ ತಿಳಿಯಲು ಇಷ್ಟು ದಿನ ಬೇಕಾಗಿಲ್ಲ. ಇಂಥ ಹಲವಾರು ಸುದ್ಧಿಗಳನ್ನು ನಾನು ಕಳೆದ ಮೂರು ವರ್ಷಗಳಿಂದ ಕೇಳುತ್ತಲೇ ಇದ್ದೀನಿ. ನಮ್ಮಿಬ್ಬರ ಪ್ರೀತಿ ಇದ್ದಿದ್ದರೆ ಖಂಡಿತವಾಗಿಯೂ ಇಷ್ಟು ದಿನಗಳೂಳಗೆ ಒಮ್ಮೆಯಾದರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದೆವು ಎಂದು ಎಲ್ಲರ ಪ್ರಶ್ನೆಗೂ ಸಂಮಜಸವಾದ ಉತ್ತರ ನೀಡಿದರು.

LEAVE A REPLY

Please enter your comment!
Please enter your name here