ಆಸ್ಪತ್ರೆಯಲ್ಲಿ ಬಿಲ್ ಪಾವತಿಸದೇ ಇರದ ಕಾರಣ ಪ್ರಭಾಕರ್ ಅವರ ಮೃತದೇಹವನ್ನು ಹೊರಗೆ ಬಿಟ್ಟಿರಲಿಲ್ಲ : ಆಗ ಬಂದವರು ಯಾರು ಗೊತ್ತಾ?

0
4229

ಟೈಗರ್ ಪ್ರಭಾಕರ್, ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಅಪಾರ ಸೇವೆಯನ್ನು ಸಲ್ಲಿಸಿ ಹೆಸರುವಾಸಿಯಾಗಿದ್ದಾರೆ. ಕನ್ನಡ, ತೆಲುಗು ಮಾತ್ರವಲ್ಲದೆ ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಟೈಗರ್ ಎಂಬ ಪದಕ್ಕೆ ಅರ್ಥವನ್ನು ನೀಡಿದ್ದಾರೆ. ಹೆಚ್ಚಾಗಿ ಖಳನಾಯಕನ ಪಾತ್ರದಲ್ಲಿಯೇ ಹೆಸರುವಾಸಿಯಾಗಿರುವ ಅವರು, ಸಣ್ಣ ಬಜೆಟ್ ಚಲನಚಿತ್ರಗಳಲ್ಲಿ ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಚಲನಚಿತ್ರ ಜೀವನವನ್ನು ಪ್ರಾರಂಭಿಸಿದರು.

 

ಮಾನ್ಯತೆ ಪಡೆದ ನಂತರ ಅವರು ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿ ಸಾಕಷ್ಟು ಹೆಸರನ್ನು ಗಳಿಸಿಕೊಂಡರು. ಸುಮಾರು 450 ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಭಾಕರ್, ಚಿರಂಜೀವಿ ಅವರ ಅನೇಕ ಸಿನಿಮಾಗಳಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಕನ್ನಡ ಸಿನಿರಸಿಕರಂತೂ ಟೈಗರ್ ಪ್ರಭಾಕರ್ ಅವರ ಗತ್ತು, ಸ್ಟೈಲ್, ಡೈಲಾಗ್ ಮತ್ತು ಫೈಟಿಂಗ್ ಗಳನ್ನು ಇಂದಿಗೂ ಮರೆತಿಲ್ಲ. ಯಾವ ಫ್ಯಾಮಿಲಿ background ಇಲ್ಲದೆ ಸ್ವಂತ ಪರಿಶ್ರಮದಿಂದಲೇ ಮೇಲೆ ಬಂದವರು ಟೈಗರ್ ಪ್ರಭಾಕರ್. ಕಠಿಣ ಪರಿಶ್ರಮದ ನಂತರ ತನ್ನ ನೂರನೇ ಚಿತ್ರದಲ್ಲಿ ಪರಿಪೂರ್ಣ ನಾಯಕರಾಗಿ ಹೊರಹೊಮ್ಮಿದರು.

 

ಪ್ರಭಾಕರ್ ಅವರ ವೈವಾಹಿಕ ಜೀವನ ನೋಡುವುದಾದರೆ ಮೂರು ಬಾರಿ ವಿವಾಹವಾಗಿ ಮೂವರಿಗೂ ವಿಚ್ಛೇದನವನ್ನು ನೀಡಿ ಏಕಾಂಗಿ ಜೀವನವನ್ನು ನಡೆಸುತ್ತಿದ್ದರು. ಚಿತ್ರದಲ್ಲಿ ಘರ್ಜಿಸಿದ ಪ್ರಭಾಕರ್ ಅವರ ಕೊನೆಯ ದಿನಗಳು ನೀವು ಊಹಿಸಿದಂತೆ ಸುಂದರವಾಗಿರಲಿಲ್ಲ. ಅತಿಯಾದ ಅನಾರೋಗ್ಯದಿಂದ ತನ್ನ ಕೈಯಲ್ಲಿದ್ದ ಹಣವೆಲ್ಲ ಖಾಲಿಯಾದವು. ಮಾರ್ಚ್ 25, 2001 ರಂದು ಪ್ರಭಾಕರ್ ಅವರು ಬಹು ಅಂಗಾಂಗ ವೈಫಲ್ಯದಿಂದ ಇಹಲೋಕ ತ್ಯಜಿಸುತ್ತಾರೆ.

 

ಈ ಸುದ್ದಿ ಹೊರಬರುತ್ತಿದ್ದಂತೆ ಸಿನಿಮಾ ತಂತ್ರಜ್ಞರು ಮತ್ತು ಅವರ ಅಭಿಮಾನಿಗಳು ಬಹಳ ಬೇಸರಗೊಳ್ಳುತ್ತಾರೆ ಮತ್ತು ಅವರ ಅಂತಿಮ ದರ್ಶನ ಪಡೆಯಬೇಕೆಂದು ಮುಂದಾಗುತ್ತಾರೆ. ಆದರೆ ಆಸ್ಪತ್ರೆಯ ಬಿಲ್ ಪಾವತಿಸಿಲ್ಲ ಎಂದು ಅವರ ಮೃತದೇಹವನ್ನು ಹೊರಗೆ ಬಿಡಲಿಲ್ಲ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಸಿಬ್ಬಂದಿಗಳು. ವಿಪರ್ಯಾಸ ಎಂದರೆ ಆಸ್ಪತ್ರೆಯ ಬಿಲ್ ಪಾವತಿಸಲು ಸಾಧ್ಯವಾಗದ ದುಸ್ಥಿತಿಯಲ್ಲಿತ್ತು ಈ ನಟನ ಕುಟುಂಬ.

 

ಈ ವಿಷಯ ಅದೇಗೋ ರೆಬೆಲ್ ಸ್ಟಾರ್ ಅಂಬರೀಶ್ ಅವರ ಕಿವಿಗೆ ಬೀಳುತ್ತದೆ. ಈ ಸುದ್ದಿಯನ್ನು ಕೇಳಿ ಬೇಸರಗೊಂಡು ಕಣ್ಣೀರು ಹಾಕಿದ ಕಲಿಯುಗದ ಕರ್ಣ, ಹಿಂದೆ ಮುಂದೆ ಯೋಚಿಸದೆ ಆಸ್ಪತ್ರೆಗೆ ತೆರಳಿ ಪ್ರಭಾಕರ್ ಅವರ ಮೃತದೇಹವನ್ನು ಹೊರಗೆ ತರಲು ಬೇಕಾದ ಎಲ್ಲ ಸಹಾಯವನ್ನ ಮಾಡುತ್ತಾರೆ. ನಂತರ ತನ್ನ ನೆಚ್ಚಿನ ನಟ ಟೈಗರ್ ಪ್ರಭಾಕರ್ ಅವರ ಅಂತಿಮ ದರ್ಶನ ಪಡೆದರು ಅಭಿಮಾನಿಗಳು.

 

ತಮಗೆ ತಿಳಿದಿರುವಂತೆ ಅಂಬರೀಶ್ ಅವರು ಒಂದು ಕೈಯಿಂದ ಮಾಡಿದ ಸಹಾಯ ಮತ್ತೊಂದು ಕೈಗೆ ತಿಳಿಯುತ್ತಿರಲಿಲ್ಲ. ಅವರ ಮುಂದೆ ಕೈ ಚಾಚಿದ ಮಂದಿಗೆ ಬರಿ ಕೈಯಲ್ಲಿ ಕಳುಹಿಸಿರುವ ಇತಿಹಾಸವೇ ಇಲ್ಲ. ಇದಕ್ಕೆ ಅನ್ನಿಸುತ್ತದೆ ಅವರನ್ನು ಕಲಿಯುಗ ಕರ್ಣ ಎಂಬುದು.
ಈ ರೀತಿಯಾದ ಹೃದಯ ವಂತವನ್ನು ಕಳೆದುಕೊಂಡ ಚಂದನವನ ಸದಾ ಶೋಕದಿಂದ ಕೂಡಿದ.

LEAVE A REPLY

Please enter your comment!
Please enter your name here