ಈಗಾಗಲೇ ಅನೇಕ ಮೂವಿಗಳಲ್ಲಿ ಬ್ಯುಸಿಯಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೊಸ – ಹೊಸ ಥ್ರಿಲ್ಲಿಂಗ್ ನೀಡುವುದರಲ್ಲಿ ಎತ್ತಿದೆ ಕೈ. ಅವರ ವಯಸ್ಸು ದಾಟಿದ್ದರೂ ಅಪ್ಪು ಇನ್ನೂ ಯಂಗ್ ಅಂಡ್ ಎನರ್ಜಿಟಿಕ್ ಆಗಿಯೇ ಇದ್ದಾರೆ.
ಪ್ರತಿ ಸಿನಿಮಾಗೂ ಸೂಪರ್ ಲುಕ್ ನಲ್ಲಿಯೇ ಮಿಂಚುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ದೇಹವನ್ನು ಹೇಗೆ ವರ್ಕೌಟ್ ಮಾಡಬಹುದೆಂದು ತೋರಿಸಿದ್ದಾರೆ. ಹಾಗೆಯೇ ಸದಾ ಫಿಟ್ ಆಗಿ ಕಾಣಲು ಅಪ್ಪು ಹೊಸ ಕಸರತ್ತನ್ನು ಮಾಡಬಹುದು ಎಂದು ತೋರಿಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.
ಇನ್ನು ತಮ್ಮ ವರ್ಕೌಟ್ ವಿಡಿಯೋನ ಪುನೀತ್ ರಾಜ್ ಕುಮಾರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕ್ರಾಸ್ ಎಕ್ಸರ್ಸೈಸ್ ಮತ್ತು ರೋಪ್ ಎಕ್ಸರ್ಸೈಸ್ ಗಳನ್ನ ನೀರು ಕುಡಿದಂತೆ ಸುಲಭವಾಗಿ ಪವರ್ ಸ್ಟಾರ್ ಪುನೀತ್ ಮಾಡಿದ್ದಾರೆ.
ತನ್ನ ಸದೃಢ ದೇಹಲಾಯವನ್ನು ಕಾಪಾಡಿಕೊಳ್ಳಲು ಪ್ರತಿ ದಿನ ಸುಮಾರು 10 ಕಿ.ಮಿ ಓಡುತ್ತಾರೆ ಪುನೀತ್ ರಾಜ್ ಕುಮಾರ್. ಶೂಟಿಂಗ್ ಇಲ್ಲದೇ ಇದ್ದರೂ, ವರ್ಕೌಟ್ ನ ಮಾತ್ರ ಅಪ್ಪು ಮಿಸ್ ಮಾಡುವುದಿಲ್ಲ. ಆಗಾಗ ಸೈಕ್ಲಿಂಗ್ ಮತ್ತು ವಾಕಿಂಗ್ ಗೂ ಅಪ್ಪು ಮೊರೆ ಹೋಗುತ್ತಾರೆ.