ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯಾರ ಅಭಿಮಾನಿ ಗೊತ್ತೇ ..?

0
200

ಸ್ಯಾಂಡಲ್ ವುಡ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ಅವರ ನಟನೆ ಬಗ್ಗೆ ಎಲ್ಲರಿಗೂ ಚೆನ್ನಾಗಿ ಗೊತ್ತೇ ಇದೆ. ಇವರು ಸ್ಯಾಂಡಲ್ ವುಡ್ ನ ಬೆಸ್ಟ್ ಡ್ಯಾನ್ಸರ್ ಎಂದು ಖ್ಯಾತಿ ಗಳಿಸಿದ್ದಾರೆ. ಹಲವಾರು ಅಭಿಮಾನಿಗಳಲ್ಲಿ ಇವರು ರಾಜ ರತ್ನರಾಗಿ ಉಳಿದಿದ್ದಾರೆ. ಪವರ್ ಸ್ಟಾರ್ ಗೆ ಯಾವ ಹೀರೊ ಇಷ್ಟ ಗೊತ್ತಾ!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಜಾ ಟಾಕೀಸ್ ಗೆ ಬಂದಾಗ ಸೃಜನ್ ಪ್ರಶ್ನೆ ಕೇಳಿದಾಗ ,ಶಿವಣ್ಣ ಮತ್ತು ರಾಗಣ್ಣ ನಿಮಗಿಂತ ಮೊದಲು ಇಂಡಸ್ಟ್ರಿ ಗೆ ಬಂದಿದ್ದು ಎಂದಾಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾತುಗಳನ್ನು ಮುಂದುವರೆಸಿ, ಶಿವಣ್ಣನ ಎನರ್ಜಿ ಮೊದಲು ಹೇಗಿತ್ತೋ ಹಾಗೆ ಇದೆ ,ಅವರನ್ನು ನೋಡಿ ನಾನು ಸಿಕ್ಕಾಪಟ್ಟೆ ವಿಷಯಗಳನ್ನು ತಿಳಿದುಕೊಂಡಿದ್ದೇನೆ ,ಕಲಿತುಕೊಂಡಿದ್ದೇನೆ ನಾನು ಅವರ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ .

ವಿಶೇಷ ಅಂದ್ರೆ ಪುನೀತ್ ಶಿವಣ್ಣನ ಓಂ ಸಿನಿಮಾವನ್ನು ನೂರಕ್ಕಿಂತ ಹೆಚ್ಚು ಬಾರಿ ನೋಡಿದ್ದಾರಂತೆ, ಎಂದು ಹೇಳಿದರು. ಓಂ ಸಿನಿಮಾ ನೋಡ್ತಾ ನೋಡ್ತಾ ನಾನೇ ನೂರು ದಿನ ಮಾಡಿದ್ದೇನೆ ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ. ನಾನು ಶಿವಣ್ಣನ ತರ ಪತ್ರ ಮಾಡೋಕೆ ಆಗಲ್ಲ,ಅವರ ತರ ಪಾತ್ರ ಮಾಡ್ತೀನಿ ಅನ್ನೋದು ಕನಸು. ನನಗೆ ರಣರಂಗ ಚಿತ್ರ ಎಂದರೆ ತುಂಬಾ ಇಷ್ಟ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ , ಸೆಂಚುರಿ ಸ್ಟಾರ್ ಶಿವಣ್ಣ ನ ಅಭಿಮಾನಿ ಎಂದು ಹೇಳಿದ್ದಾರೆ. ಅಣ್ಣ ತಮ್ಮ ಅಂದ್ರೆ ಹೇಗಿರಬೇಕು ಎಂದು ಇವರು ಆದರ್ಶವಾಗಿದ್ದಾರೆ ಅಂತಾನೆ ಹೇಳಬಹುದು.

LEAVE A REPLY

Please enter your comment!
Please enter your name here