ಪುನೀತ್ ರಾಜ್ ಕುಮಾರ್, ಕರುನಾಡು ಕಂಡ ಹೆಮ್ಮೆಯ ನಟ .. ಬಾಲ್ಯದಿಂದಲೇ ಅಭಿನಯದಿಂದ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಡಾಕ್ಟರ್ ರಾಜ್ ಕುಮಾರ್ ಅವರ ಕಿರಿಯ ಪುತ್ರ !
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಳೇ ಹಾಗೆ! ಅವರ ಸಿನಿಮಾ ಬಿಡುಗಡೆಯಾದರೆ ಎಂದರೆ ಮನೆಮಂದಿ ಅವರೆಲ್ಲ ಕುಳಿತು ನೋಡುವಂತಹ ಉತ್ತಮ ಚಿತ್ರಗಳನ್ನು ಅಪ್ಪು ನೀಡಿರುತ್ತಾರೆ…

ಸದ್ಯ ಸಂತೋಷ್ ಆನಂದರಾಮ್ ಅವರ ಯುವ ರತ್ನ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಈ ಸಿನಿಮಾ ದಿನದಿಂದ ದಿನಕ್ಕೆ ಭಾರೀ ನಿರೀಕ್ಷೆ ಹುಟ್ಟು ಹಾಕುತ್ತಿದೆ! ಇನ್ನು ಈ ಚಿತ್ರವಾದ ಬಳಿಕ ಪುನೀತ್ ರಾಜ್ ಕುಮಾರ್ ಅವರು ‘ಜೇಮ್ಸ್’ ಎಂಬುವ ಚಿತ್ರದಲ್ಲಿ ಅಭಿನಯಿಸಿದ್ದಾರೆ !
‘ಜೇಮ್ಸ್ ‘,ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನ ಮೊದಲ ಸಿನಿಮಾ ! ಸದ್ಯ ಚೇತನ್ ಕುಮಾರ್ ಅವರು ಶ್ರೀಮುರಳಿ ಅಭಿನಯದ ಭರಾಟೆ ಸಿನಿಮಾ ನಿರ್ದೇಶಿಸಿದ್ದು ಈ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ… ಇನ್ನು ಯುವರತ್ನ ಮತ್ತು ಭರಾಟೆ ಸಿನಿಮಾ ಬಿಡುಗಡೆಯಾದ ಬಳಿಕ ಚೇತನ್ ಮತ್ತು ಅಪ್ಪು ಕಾಂಬಿನೇಷನ್ ನ ಜೇಮ್ಸ್ ಸಿನಿಮಾ ಸೆಟ್ಟೇರಲಿದೆ

ಇದರ ನಡುವೆ ಪುನೀತ್ ರಾಜ್ ಕುಮಾರ್ ಅವರು ಒಂದು ವಿಶೇಷ ಸಿನಿಮಾದಲ್ಲಿ ಸ್ಥಿತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ!
ಅಂದ ಹಾಗೆ ಪುನೀತ್ ಈ ಹಿಂದೆ ‘ಕಟಕ’ ಹಾಗೂ ‘ಹಂಬಲ್ ಪೊಲಿಟಿಷಿಯನ್ ನೋಗರಾಜ್’ ಚಿತ್ರದಲ್ಲಿ ಗೆಸ್ಟ್ ಪಾತ್ರದಲ್ಲಿ ನಟಿಸಿದ್ದರು.
ಇನ್ನು ಪುನೀತ್ ರಾಜ್ ಕುಮಾರ್ ಅವರ ನಿರ್ಮಾಣದ ಎರಡನೇ ಸಿನಿಮಾ ‘ಮಾಯಾಬಜಾರ್’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಂಡು ಬರಲಿದ್ದಾರೆ… ಇನ್ನು ಈಗಾಗಲೇ ‘ಮಾಯಾಬಜಾರ್’ ಚಿತ್ರದ ಚಿತ್ರೀಕರಣ ಮುಗಿದಿದ್ದು ಚಿತ್ರ ತಂಡ ಈ ವಿಶೇಷವಾದ ಸುದ್ದಿಯನ್ನು ಬಿಡುಗಡೆ ಮಾಡಿದೆ..

ಇನ್ನು ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಹೊಂದಿದ್ದು ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ, ಸುಧಾರಾಣಿ, ಪ್ರಕಾಶ್ ರಾಜ್, ಚೈತ್ರ ರಾವ್ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ . ಇವರ ಜೊತೆಗೆ ಇದೀಗ ಪುನೀತ್ ರಾಜ್ ಕುಮಾರ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.