ಅನಾವಶ್ಯಕವಾಗಿ ತಮ್ಮ ಮೇಲೆ ಟ್ರೋಲ್ ಮಾಡಿದವರಿಗೆ ರಾಹುಲ್ ಡಿಟ್ಟೋ ಹೇಳಿದ್ದೇನು ಗೊತ್ತಾ.?

0
355

ದಿನ ಭವಿಷ್ಯ, ನಮ್ಮ ಕನ್ನಡ ಸಿನಿಮಾ, ಲೈಫ್ ಗುರು, ನಿಂಬೆಹುಳಿ, ಹೀಗೆ ಸಾಕಷ್ಟು ಕಾರ್ಯಕ್ರಮಗಳನ್ನು ನೀಡುತ್ತ ಜನರನ್ನು ರಂಜಿಸುತ್ತಿರುವ “ನಮ್ಮ ಕನ್ನಡ” ಯೂಟ್ಯೂಬ್ ಚಾನಲ್ ನಲ್ಲಿ ಪಾಪ್‍ಕಾರ್ನ್’ ಎಂಬ ಮತ್ತೊಂದು ಹೊಚ್ಚ ಹೊಸ ಕಾರ್ಯಕ್ರಮ ಪ್ರಸಾರವಗುತ್ತಿದೆ. ಏನಿದು ಪಾಪ್‍ಕಾರ್ನ್? ಇದೊಂದು ಸೆಲೆಬ್ರೆಟಿ ಟಾಕ್ ಶೋ.ತಮ್ಮ ಜೀವನದಲ್ಲಿ ನಡೆದ ಏಳು-ಬೀಳು,ಸುಖ-ದುಖಃ ಹಾಗೂ ಸೆಲೆಬ್ರೆಟಿ ಜೊತೆ ಸ್ವಲ್ಪ ಮೋಜು-ಮಸ್ತಿ ಮಾಡುತ್ತ, ಅವರ ಮುಂದಿನ ಹೆಜ್ಜೆಯನ್ನು ವೀಕ್ಷಕರಿಗೆ ತೋರಿಸುವ ಪ್ರಯತ್ನವೇ ಈ ಕಾರ್ಯಕ್ರಮದ ಉದ್ದೇಶ.

ಕೆಲವರು ಚಿತ್ರಮಂದಿರದಲ್ಲಿ ಸಿನಿಮಾ ನೋಡಬೇಕದರೆ ಪಾಪ್‍ಕಾರ್ನ್ ಇಲ್ಲ ಅಂದರೆ ಸಿನಿಮಾ ನೋಡೊದೇಯಿಲ್ಲ. ಸಿನಿಮಾಗೂ ಈ ಪಾಪ್‍ಕಾರ್ನ್‍ಗೂ ಏನೋ ಒಂತಾರೆ ಸಂಭಂಧವಿದೆ. ಆದುದರಿಂದ ಈ ಶೋ ಗೆ ಪಾಪ್‍ಕಾರ್ನ್ ಎಂದು ಹೆಸರಿಡಲಾಗಿದೆ. ಇನ್ನು ಕಳೆದ ವಾರ ಪಾಪ್‍ಕಾರ್ನ್ ಶೋನಲ್ಲಿ ನಮ್ಮ ಜೊತೆ ಹರಟೆ ಹೊಡೆದ ಸೆಲೆಬ್ರೆಟಿ ಕನ್ನಡದ ರಾಪ್ ಮಾಂತ್ರಿಕ ರಾಹುಲ್ ಡಿಟ್ಟೋ. ಅನೇಕ ಏಳುಬೀಳುಗಳನ್ನು ದಾಟಿ ಸ್ವತಂತ್ರವಾಗಿ ತಮ್ಮನ್ನು ಗುರುತಿಸಿಕೊಂಡ ಕಲಾವಿದ ಈ ರಾಹುಲ್ ಡಿಟ್ಟೋ, ತಮ್ಮ ಪದಬಳಕೆಯಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಈ ಗ್ಯಾಂಗ್‍ಸ್ಟಾರ್ ಮಾಡೋ ರಾಪ್‍ಗಳೆಲ್ಲಾ ಟ್ರೆಂಡಿಂಗ್ ಮಗಾನೇ.


ಇನ್ನು ರಾಹುಲ್ ಡಿಟ್ಟೋ ಅವರಿಗೆ ಪೆಬ್ರವರಿ 1 ಮರೆಯಾಲಾರದ ದಿನ. ಯಾಕೆಂದರೆ ಅವತ್ತು ನಂಗನ್ಸಿದ್ದು ರಾಪ್ ಬಿಡುಗಡೆ ಮಾಡಿದ್ದರು. ಈ ರಾಪ್ ಯೂಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆದ್ರೆ ಇನ್ನೊಂದೆಡೆ ಸಾಮಾಜಿಕ ಜಾಲಾತಾಣಗಳಲ್ಲಿ ರಾಹುಲ್ ಅವರನ್ನು ಹಿಗ್ಗಾ-ಮುಗ್ಗ ಟ್ರೋಲ್ ಮಾಡಿದ್ದರು. ಇದರ ಬಗ್ಗೆ ನಮ್ಮ ಪಾಪ್‍ಕಾರ್ನ್ ಕಾರ್ಯಕ್ರಮದಲ್ಲಿ ಕೇಳಿದಾಗ ಅವರು ಪೆಬ್ರವರಿ ಒಂದು ನನ್ನ ಸಾಂಗ್ ಬಿಡುಗಡೆಯಗಿತ್ತು, ಮತ್ತು ಇದು ದೊಡ್ಡ ಕಾಂಟ್ರವರ್ಸಿಯಾಗಿತ್ತು. ಇದನ್ನು ಕಂಡ ನೆಟ್ಟಿಗರು ಇವನು ಯಾರನ್ನೊ ಉದ್ದೇಶಿಸಿಯೇ ಈ ರಾಪ್ ಮಾಡಿದ್ದಾನೆ ಎಂದು ಮಾತಾನಾಡಿದರು. ಸುಮ್ಮನೇ ಅನಾವಶ್ಯಕವಾಗಿ ನನ್ನ ಮೇಲೆ ಟ್ರೋಲ್ ಮಾಡುತ್ತಲೇ ಇದ್ದರು. ನಂತರ ಇದನ್ನು ಮನಸಲ್ಲೇ ಇಟ್ಟುಕೊಂಡು ಮತ್ತೊಂದು ರಾಪ್ ಮಾಡಿದೆ ಎಂದು ರಾಹುಲ್ ಹೇಳಿದರು.

ಯಾವುದು ಆ ರಾಪ್ ಮತ್ತು ಟ್ರೋಲ್ ಮಾಡಿದವರಿಗೆ ರಾಹುಲ್ ಡಿಟ್ಟೋ ಹೇಳಿದ್ದನ್ನು ನೋಡಾಬೇಕಾದಲ್ಲಿ ಈ ವೀಡಿಯೋ ನೋಡಿ.

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here