ಏನಿದು ಕಾಂಟ್ರೋವರ್ಶಿಯಲ್ ಸಂದರ್ಶನ..?

0
179

ನಮ್ಮ ಕನ್ನಡ ಯೂಟ್ಯೂಬ್ ಚಾನಲ್‍ನಲ್ಲಿ ಪ್ರಸಾರವಾಗುತ್ತಿರುವ ಸೆಲೆಬ್ರೆಟಿ ಟಾಕ್ ಶೋ ಪಾಪ್‍ಕಾರ್ನ್ ಸಾಕಷ್ಟು ಜನಮನ್ನಣೆ ಪಡೆದುಕೊಳ್ಳುತ್ತಿದ್ದು, ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಗಿರಿ ಎಮ್.ಗೌಡ ಅವರ ಸಂದರ್ಶನದೊಂದಿಗೆ ಆರಂಭವಾದ ಈ ಟಾಕ್ ಶೋ ಎರಡನೇ ಸಂಚಿಕೆಯಲ್ಲಿ ಕನ್ನಡದ ರಾಪ್ ಮಾಂತ್ರಿಕ ರಾಹುಲ್ ಡಿಟ್ಟೋ ಅವರ ಮನದಾಳದ ಮಾತಿನೊಂದಿಗೆ ಮತ್ತು ಅವರ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿಕೊಟ್ಟಿದ್ದರು, ಹಾಗೆಯೇ ಮೂರನೇ ಸಂಚಿಕೆಯಲ್ಲಿ ಕನ್ನಡದ ಬಹು ನಿರೀಕ್ಷಿತ ಚಿತ್ರ ಕಿಸ್ ಸಿನಿಮಾ ಬಗ್ಗೆ ಮಾತಾನಾಡಲು ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್ ಮತ್ತು ನಾಯಕ ವಿರಾಟ್ ಆಗಮಿಸಿ ಕಾರ್ಯಕ್ರಮದಲ್ಲಿ ಒಂದಿಷ್ಟು ಮೋಜು, ಮಸ್ತಿ ಮಾಡುತ್ತ ತಮ್ಮ ಚಿತ್ರದ ಕುರಿತು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.

ಈ ಬಾರಿ ಪಾಪ್‍ಕಾರ್ನ್ ಶೋ ನ ನಾಲ್ಕನೇ ಸಂಚಿಕೆಯಲ್ಲಿ ಜನರ ಮನಸ್ಸು ಗೆದ್ದಿದ ಅಶ್ವಿನಿ ನಕ್ಷತ್ರ ಧಾರವಾಹಿ ಖ್ಯಾತಿಯ ಸೂಪರ್ ಸ್ಟಾರ್ ಜೆ.ಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಅವರು ಕಾಣಿಸಿಕೊಳ್ಳಲಿದ್ದಾರೆ.
ಕನ್ನಡದಲ್ಲಿ ಮತ್ತು ಹಿಂದಿ ಕಿರುತೆರೆಯಲ್ಲಿ ಮಿಂಚುತ್ತಿರುವ ಜೆ.ಕೆ. ಸುಮಾರು ಹದಿನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ಕನ್ನಡದ ಸೂಪರ್ ಹಿಟ್ ರಿಯಾಲಿಟಿ ಶೋ ಬಿಗ್ ಬಾಸ್‍ನಲ್ಲಿ ಟಾಪ್ ಫೈನಲಿಸ್ಟ್ ಆಗುವ ಮುಖಾಂತರ ಎಲ್ಲರ ಪ್ರೀತಿಗೆ ಪಾತ್ರರಾದರು.

ಇಷ್ಟೊಂದು ಹೆಸರು ಮಾಡಿದ್ದರು ಜೆ.ಕೆ ಅವರು ಕನ್ನಡದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ವಿಚಾರದ ಬಗ್ಗೆ ನಮ್ಮ ಪಾಪ್‍ಕಾರ್ನ್ ಶೋನಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ ಮತ್ತು ನಮ್ಮ ಕಾರ್ಯಕ್ರಮದ ಕೆಲವೊಂದು ಮೇಕಿಂಗ್ ಫೋಟೋಸ್‍ಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ “ನಮ್ಮ ಕನ್ನಡ ಯೂಟ್ಯೂಬ್ ಚಾನಲ್‍ನಲ್ಲಿ ನನ್ನ ಕಾಂಟ್ರೋವರ್ಶಿಯಲ್ ಇಂಟರ್ ವ್ಯೂ ಬರಲಿದೆ” ಎಂದು ಬರೆದುಕೊಂಡು ಶೇರ್ ಮಾಡಿದ್ದಾರೆ. ಏನಪ್ಪಾ ಆದು ಕಾಂಟ್ರೋವರ್ಶಿಯಲ್ ಅನ್ಕೊತ್ತಿದ್ದಿರಾ. ನಮ್ಮ ಪಾಪ್‍ಕಾರ್ನ್ ಶೋನಲ್ಲಿ ನಿಮ್ಮ ಸೂಪರ್ ಸ್ಟಾರ್ ಜೆ.ಕೆ.ಯ ಸೂಪರ್ ಮಾತುಕತೆಯನ್ನು ನೋಡಿ ಹಾಗೆಯೆ ವಿಡಿಯೋವನ್ನು ಶೇರ್ ಮಾಡಿ.

LEAVE A REPLY

Please enter your comment!
Please enter your name here