‘ನನಗೆ ರಾಜಕೀಯ ಸಾಕಾಗಿದೆ’ ಎಂದ್ರು ಜಿ.ಟಿ. ದೇವೇಗೌಡರು..!

0
153

ವೈಯಕ್ತಿಕವಾಗಿ ನನಗೆ ರಾಜಕೀಯ ಸಾಕಾಗಿದೆ. ನಾನು ರಾಜಕೀಯದಲ್ಲಿ ಬಹಳ ನೊಂದಿದ್ದೇನೆ. ಹೀಗಾಗಿ ಇದು ನನ್ನ ಕೊನೆಯ ಚುನಾವಣೆ, ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ ಎಂದು ಜೆಡಿಎಸ್‍ನ ಪ್ರಭಾವಿ ಮುಖಂಡ ಜಿ.ಟಿ ದೇವೇಗೌಡ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಜಿ.ಟಿ. ದೇವೇಗೌಡರು, ಜೆಡಿಎಸ್ ವರಿಷ್ಠರಾದ ಹೆಚ್.ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಬಂದಿದ್ದೇನೆ. ದೇವೇಗೌಡರನ್ನು ನಾನು ದೇವರೆಂದು ಭಾವಿಸಿ ನನ್ನ ಕೆಲಸವನ್ನ ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂದಿನ ಮೂರುವರೆ ವರ್ಷ ಕ್ಷೇತ್ರದ ಜನರ ಜೊತೆ ಇರುತ್ತೇನೆ ಎಂದರು.

ನನಗೆ ಯಾರೂ ರಾಜಕೀಯ ಗುರುಗಳಿಲ್ಲ. ನಾನು ಯಾರ ಹಂಗಿನಲ್ಲೂ ಬದುಕಿಲ್ಲ. ನನಗೆ ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ ಯಾರಿಂದಲೂ ಸಹಾಯವಾಗಿಲ್ಲ. ಕುಮಾರಪರ್ವ ಹಾಗೂ ಚುನಾವಣೆಗಳಿಗೆ ನಾನು ಜೆಡಿಎಸ್‍ನಿಂದ ಒಂದು ರೂಪಾಯಿ ಹಣ ಪಡೆದಿಲ್ಲ. ನನ್ನ ಸ್ವಂತ ಹಣದಿಂದ ಎಲ್ಲವನ್ನೂ ಮಾಡಿದ್ದೇನೆ ಎಂದು ತಮ್ಮ ರಾಜಕೀಯ ಹಾದಿಯ ಕೆಲ ಸತ್ಯಗಳನ್ನು ಮಾದ್ಯಮದ ಮುಂದೆ ಹಂಚಿಕೊಂಡರು.

LEAVE A REPLY

Please enter your comment!
Please enter your name here