ಗಣೇಶ ಹಬ್ಬದಂದು ಕೆಲಸದ ವೇಳೆಯಲ್ಲಿ ಮನೆಯಲ್ಲಿ ನಿದ್ದೆ ಮಾಡುತ್ತಿದ್ದ ಪೊಲೀಸ್ ಅಮಾನತು

0
884

ಗಣಪತಿ ಹಬ್ಬದಂದು ಮತ್ತು ಗಣಪತಿ ಹಬ್ಬ ಮುಗಿದ ಹದಿನೈದು ದಿನಗಳವರೆಗೂ ಪೋಲಿಸರು ಅಲರ್ಟ್ ಆಗಿರಬೇಕು. ಯಾಕೆಂದರೆ ಹಬ್ಬ ಮುಗಿದ ಮೇಲೆ ಸಾಕಷ್ಟು ಬೀದಿ ಗಣಪತಿಗಳನ್ನು ವಿಸರ್ಜನೆ ಮಾಡುತ್ತಿರುತ್ತಾರೆ. ಗಣಪತಿಯ ಮೆರವಣಿಗೆ ಮಾಡುತ್ತಾ ಕುಣಿದು ಕುಪ್ಪಳಿಸಿ ಗಣಪತಿಯನ್ನು ಕೆರೆಯಲ್ಲಿ ಬಿಡುವ ಸಂದರ್ಭದಲ್ಲಿ ಮತ್ತು ಗಣಪತಿಯ ಪ್ರತಿಷ್ಠಾಪನೆ ಮಾಡುವ ಸಂದರ್ಭದಲ್ಲಿ ಸಾಕಷ್ಟು ಗಲಾಟೆಗಳು, ಜಗಳಗಳು ನಡೆಯುವುದು ಸರ್ವೇಸಾಮಾನ್ಯ. ಈ ಸಮಯದಲ್ಲಿ ಪೊಲೀಸರು ಸಾಕಷ್ಟು ಎಚ್ಚರ ವಹಿಸಿ ಕೆಲಸ ಮಾಡಬೇಕು.
ಆದರೆ ಗಣೇಶ ಹಬ್ಬದಂದು ಕೆಲಸ ಮಾಡದೇ ಮನೆಯಲ್ಲಿ ನಿದ್ದೆ ಮಾಡುತ್ತಿದ್ದ ಪಿಎಸ್ಐ ಅವರನ್ನು ಅಮಾನತು ಮಾಡಲಾಗಿದೆ .

ಈ ಘಟನೆ ಧಾರವಾಡ ಜಿಲ್ಲೆಯ ಗರಗದಲ್ಲಿ ನಡೆದಿದೆ. ಇನ್ನು ಪಿಎಸ್ಐ ಸಮೀರ್ ಮುಲ್ಲಾ ಅಮಾನತು ಆಗಿರುವ ಅಧಿಕಾರಿಯಾಗಿದ್ದು ಧಾರವಾಡ ಜಿಲ್ಲೆಯ ಎಸ್ ಪಿ ಅಮಾನತು ಪಡಿಸಲು ಆದೇಶಿಸಿದ್ದಾರೆ.

ಧಾರವಾಡ ಜಿಲ್ಲೆಯ ಗರಗ ಠಾಣಾ ವ್ಯಾಪ್ತಿಯ ಕೋಟೂರು ಗ್ರಾಮದಲ್ಲಿ ಗಣಪತಿಯ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿತ್ತು.ಅದೇ ಪ್ರತಿಷ್ಠಾಪನೆಯ ದಿನ ಗ್ರಾಮದಲ್ಲಿ ಮೆರವಣಿಗೆಯನ್ನು ಸಹ ಆಯೋಜಿಸಿದ್ದರು. ಆದರೆ ಮೆರವಣಿಗೆ ಸಾಗುವಾಗ ಸ್ವಲ್ಪ ದ್ವೇಷಮಯ ವಾತಾವರಣ ಸಹ ನಿರ್ಮಾಣವಾಗಿತ್ತು ಆದುದರಿಂದ ಇದೊಂದು ಸೂಷ್ಮಾ ಪ್ರದೇಶವೆಂದು ಪರಿಗಣಿಸಿ, ಜಿಲ್ಲಾ ಮಹಿಳಾ ಎಸ್ ಪಿ ವರ್ತಿಕಾ ಕಟಿಯಾರ್ ಅವರು ಖುದ್ದು ತಾವೇ ಮಧ್ಯರಾತ್ರಿ 2 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು ಮತ್ತು ಸ್ಥಳದಲ್ಲಿದ್ದ ಪಿಎಸ್ಐ ಸಮೀರ್ ಮುಲ್ಲಾ ಅವರಿಗೆ ರಾತ್ರಿ ಗಸ್ತು ತಿರುಗುವಂತೆ ಸೂಚಿಸಿ ಹೋಗಿದ್ದರು.

ಹೀಗೆ ಸೂಚಿಸಿ ಎಸ್ ಪಿ ವರ್ತಿಕಾ ಕಟಿಯಾರ್ ಹೋಗುತ್ತಿದ್ದಂತೆ ಅತ್ತ ಸಮೀರ್ ಮುಲ್ಲಾ ಅವರು ನಿದ್ದೆ ಬಂತು ಎಂದು ಮನೆಗೆ ಹೋಗಿ ಮಲಗಿದ್ದಾರೆ. ನಂತರ ಅನುಮಾನ ಬಂದ ಎಸ್ ಪಿ ಮತ್ತೆ 4 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿ ಸಮೀರ್ ಮುಲ್ಲಾ ಮನೆಗೆ ಹೋಗಿರುವ ವಿಷಯ ತಿಳಿದುಕೊಂಡಿದ್ದಾರೆ.
ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಎಸ್ ಪಿ ವರ್ತಿಕಾ ಕಟಿಯಾರ್, ಸಮೀರ್ ಮುಲ್ಲಾ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲು ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here