ದಯವಿಟ್ಟು ಹುಚ್ಚ ವೆಂಕಟ್ ಅವರನ್ನು ಹೊಡೆಯಬೇಡಿ : ನಟ ಭುವನ್ ಪೊನ್ನಣ್ಣ

0
505

ನಟ ನಿರ್ದೇಶಕ ಹುಚ್ಚ ವೆಂಕಟ್ ಅವರ ಹುಚ್ಚಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ…
ಎರಡು ಮೂರು ತಿಂಗಳಿಂದ ಕಣ್ಮರೆಯಾದ ಹುಚ್ಚ ವೆಂಕಟ್ ಅವರು ಚೆನ್ನೈ ಬೀದಿಯಲ್ಲಿ ಕಾಣಿಸಿಕೊಂಡಿದ್ದರು.. ಅದನ್ನು ಕಂಡ ರಾಂಧವ ಚಿತ್ರತಂಡ ಹುಚ್ಚ ವೆಂಕಟ್ ಅವರಿಗೆ ವಸತಿ ಮತ್ತು ಊಟವನ್ನು ನೀಡಿ ಒಂದೆಡೆ ಇಟ್ಟುಕೊಂಡಿದ್ದರು .. ತದನಂತರ ರಾಂಧವ ಚಿತ್ರದ ನಾಯಕ ಭುವನ್ ಪೊನ್ನಣ್ಣ ಹುಚ್ಚ ವೆಂಕಟ್ ಅವರ ಮನಸ್ಥಿತಿ ಸರಿಯಾಗಿಲ್ಲ ದಯವಿಟ್ಟು ಅವರನ್ನು ಬೆಂಗಳೂರಿಗೆ ಕರೆತರಲು ಯಾರಾರು ಸಹಾಯ ನೀಡಿ ಅವರಿಗೆ ಒಳ್ಳೆಯ ಮಾನಸಿಕ ಆಸ್ಪತ್ರೆಯಲ್ಲಿ ತೋರಿಸಬೇಕಾಗಿದೆ ಎಂದು ಕೇಳಿಕೊಂಡಿದ್ದರು… ನಂತರ ಹುಚ್ಚ ವೆಂಕಟ್ ಅವರನ್ನು ಬೆಂಗಳೂರಿಗೆ ಕರೆತರಲಾಯಿತು.

ಇದಾದ ಮೇಲೆ ಹುಚ್ಚ ವೆಂಕಟ್ ಅವರು ಇದ್ದಕ್ಕಿದ್ದಂತೆ ಮಡಿಕೇರಿಯಲ್ಲಿ ಕಾಣಿಸಿಕೊಂಡಿದ್ದಾರೆ.. ಇನ್ನು ಮಡಿಕೇರಿಯಲ್ಲಿ ರಂಪಾಟ ಮಾಡಿ ಪೊಲೀಸ್ ಮೆಟ್ಟಿಲನ್ನು ಸಹ ಏರಿದ್ದಾರೆ… ಮಡಿಕೇರಿಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕಾರಿನ ಗಾಜಿಗೆ ಕಲ್ಲಿನಲ್ಲಿ ಹೊಡೆದು ದೊಡ್ಡದಾಗಿ ಗಲಾಟಿ ಮಾಡಿದ್ದಾರೆ ಹಾಗೂ ಅಲ್ಲಿ ಸಾರ್ವಜನಿಕನೊಬ್ಬನ ಕಪಾಳಕ್ಕೂ ಸಹ ಹೊಡೆದಿದ್ದಾರೆ. ಇದನ್ನು ಕಂಡ ಸ್ಥಳೀಯರು ಹುಚ್ಚ ವೆಂಕಟ್ ಅವರಿಗೆ ಹಿಗ್ಗಾಮುಗ್ಗಾ ಹೊಡೆದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನು ಕಂಡ ನಟ ಭುವನ್ ಪೊನ್ನಣ್ಣ ಸಾಮಾಜಿಕ ಜಾಲ ತಾಣಗಳಲ್ಲಿ ಹುಚ್ಚ ವೆಂಕಟ್ ಅವರ ವಿಡಿಯೋ ಹಾಕಿ ಮನವಿ ಮಾಡಿಕೊಂಡಿದ್ದಾರೆ..

ಗೆಳೆಯರೆ ದಯವಿಟ್ಟು ಹುಚ್ಚ ವೆಂಕಟ್ ಅನ್ನು ಎಲ್ಲಿ ಕಂಡರು ಹೊಡಿಬೇಡಿ. ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದೆ. ಅವರು ಕೆಟ್ಟವರಲ್ಲ. ಮಾನಸಿಕ ತೊಂದರೆಯಲ್ಲಿರುವವರು. ನನ್ನ ಕಳಕಳಿಯ ವಿನಂತಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಬುಧವಾರ ಹುಚ್ಚ ವೆಂಕಟ್ ಅವರು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಕಾಣಿಸಿಕೊಂಡಿದ್ದರು..ನೀಲಿ ಶರ್ಟ್, ಕಪ್ಪು ನೀಲಿ ಬಣ್ಣ ಪ್ಯಾಂಟ್ ಹಾಗೂ ಶೂ ಹಾಕಿಕೊಂಡು ರಸ್ತೆಯಲ್ಲಿ ಅಲೆಮಾರಿಯಂತೆ ಓಡಾಡುತ್ತಿದ್ದರು. ಇದನ್ನು ಕಂಡ ಕೆಲವು ಯುವಕರು ಅವರ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಲು ಬಿಟ್ಟಿದ್ದರು.. ಇದಾದ ಬಳಿಕ ಅಂದರೆ ಗುರುವಾರ ಮಡಿಕೇರಿಯಲ್ಲಿ ಈ ರೀತಿ ರಂಪಾಟ ಮಾಡಿಕೊಂಡಿದ್ದಾರೆ ..ಇವರ ಹುಚ್ಚಾಟವನ್ನು ಕಂಡು ಸಾರ್ವಜನಿಕರು ಮನಬಂದಂತೆ ತಣಿಸಿದ್ದಾರೆ..

ಈ ಕುರಿತು ಚೆನ್ನೈನಲ್ಲಿ ಓಡಾಡಿದ ವಿಡಿಯೋ ಒಂದನ್ನು ನಟ ಭುವನ್ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ದಯವಿಟ್ಟು ಹುಚ್ಚ ವೆಂಕಟ್ ಅವರಿಗೆ ಹೊಡೆಯಬೇಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ ..

LEAVE A REPLY

Please enter your comment!
Please enter your name here