‘ಪೈನಾಪಲ್ ಪ್ರಾನ್ಸ್ ಕರ್ರಿ’ ಸಖತ್ ಡಿಲೀಶಿಯಸ್ ಫುಡ್ ಅಂತಾನೇ ಹೇಳಬಹುದು. ಹುಳಿ, ಸಿಹಿ, ಖಾರ ಈ ಮೂರು ರುಚಿಯನ್ನೂ ನೀಡುವ ಈ ರೆಸಿಪಿ ನಿಮಗೆ ಖಂಡಿತ ಇಷ್ಟವಾಗುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು
ಪೈನಾಪಲ್ – 1
ಪ್ರಾನ್ಸ್ – 100 ಗ್ರಾಂ
ತೆಂಗಿನಕಾಯಿ ಹಾಲು – 1 ಕಪ್
ಚಿಕನ್ ಸ್ಟಾಕ್ – 1/2 ಕಪ್
ಬೆಳ್ಳುಳ್ಳಿ ಎಸಳು – 6
ಶುಂಠಿ – ಚಿಕ್ಕ ತುಂಡು
ಅರಿಶಿನ – 1/2 tsp
ಸಾಂಬಾರ್ ಈರುಳ್ಳಿ – 1/2 ಕಪ್
ಹುರಿದ ಕಡ್ಲೆಕಾಯಿ ಬೀಜ – 2 tbsp
ಕೆಂಪು ಮೆಣಸಿನಕಾಯಿ – 5
ಲೆಮನ್ ಗ್ರಾಸ್ – 1 ಕಡ್ಡಿ
ಉಪ್ಪು – ರುಚಿಗೆ
ತಯಾರಿಸುವ ವಿಧಾನ
ಪ್ರಾನ್ಸ್ ಕ್ಲೀನ್ ಮಾಡಿ ನೀರು ಸೋರಿದ ನಂತರ ಸ್ವಲ್ಪ ಎಣ್ಣೆಯಲ್ಲಿ ರೋಸ್ಟ್ ಮಾಡಿಕೊಳ್ಳಿ. ಲೆಮನ್ ಗ್ರಾಸ್ ತಳಭಾಗವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.
ಮಿಕ್ಸಿಜಾರ್ನಲ್ಲಿ ಶುಂಠಿ, ಬೆಳ್ಳುಳ್ಳಿ, ಸಾಂಬಾರ್ ಈರುಳ್ಳಿ, ಲೆಮನ್ ಗ್ರಾಸ್, ಹುರಿದ ಕಡ್ಲೆಕಾಯಿ ಬೀಜ, ನೀರಿನಲ್ಲಿ ನೆನೆಸಿದ ಕೆಂಪು ಮೆಣಸಿನಕಾಯಿ, ಅರಿಶಿನ ಹಾಗೂ ನೀರು ಸೇರಿಸಿ ರುಬ್ಬಿಕೊಳ್ಳಿ.
ಅನಾನಸ್ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಹೆಚ್ಚಿಕೊಂಡು ಸ್ವಲ್ಪ ನೀರು ಸೇರಿಸಿ ಬೇಯಿಸಿಕೊಳ್ಳಿ.
ಒಂದು ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ರುಬ್ಬಿಕೊಂಡ ಮಸಾಲೆ ಸೇರಿಸಿ ಕಡಿಮೆ ಉರಿಯಲ್ಲಿ 15 ನಿಮಿಷ ಕುಕ್ ಮಾಡಿ.
ಇದರೊಂದಿಗೆ ಚಿಕನ್ ಸ್ಟಾಕ್, ಬೇಯಿಸಿಕೊಂಡ ಪೈನಾಪಲ್, ಉಪ್ಪು, ತೆಂಗಿನಕಾಯಿ ಹಾಲು, ಪ್ರಾನ್ಸ್ ಸೇರಿಸಿ ಮತ್ತೆ 10-15 ನಿಮಿಷ ಕುಕ್ ಮಾಡಿ.
ಸರ್ವಿಂಗ್ ಪ್ಲೇಟ್ಗೆ ಮಿಶ್ರಣ ಸೇರಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.ಅನ್ನ, ಚಪಾತಿ, ರೊಟ್ಟಿಯೊಂದಿಗೆ ನೀವು ಈ ಗೊಜ್ಜನ್ನು ತಿನ್ನಬಹುದು.