ಲೇಪಾಕ್ಷಿ ದೇವಸ್ಥಾನದ ನೇತಾಡುವ ಪಿಲ್ಲರ್..!

0
133

ಇದೇನಿದು‌ ನೇತಾಡುವ ಪಿಲ್ಲರ್..? ಕೆಲವರಿಗೆ ಆಶ್ಚರ್ಯ ಅನಿಸುತ್ತೆ..! ಇನ್ನೂ ಕೆಲವರಿಗೆ ನಾವು ಯಾವುದರ ಬಗ್ಗೆ ಹೇಳ್ತಿದ್ದೀವಿ ಅಂತ ಹೆಡ್ ಲೈನ್ ನೋಡಿದಾಗಲೇ ತಿಳಿದಿರುತ್ತೆ.

ಪಿಲ್ಲರ್ ನೇತಾಡುತ್ತಾ..? ಪಿಲ್ಲರ್ ಅಂದ್ರೆ ನೆಲ ಮತ್ತು ಛಾವಣಿಗೆ ಅಂಟಿ ಕೊಂಡಿರುತ್ತೆ, ನೆಲದಲ್ಲಿ ನಿಂತು ಛಾವಣಿಗೆ ಸಪೋರ್ಟಿವ್ ಆಗಿರುತ್ತೆ. ನೆಲ ಬಿಟ್ಟು ಪಿಲ್ಲರ್ ಹೇಗ್ರೀ ನೇತಾಡುತ್ತೆ ಅನ್ನೋದು‌ ಸಾಮಾನ್ಯವಾಗಿ ಮೂಡೋ ಪ್ರಶ್ನೆ..! ಪಿಲ್ಲರ್ ಗೆ ನೆಲದ ಸಪೋರ್ಟ್ ಬೇಕೇ ಬೇಕು. ಆದರೆ, ಭಾರತದ ಈ ದೇವಾಲಯದಲ್ಲಿ ಗಾಳಿಯಲ್ಲಿ ನಿಂತ, ನೇತಾಡುವ ಪಿಲ್ಲರ್ ಇದೆ.

ಇದು ಮಧ್ಯಕಾಲಿನ ವಾಸ್ತುಶಿಲ್ಪದ ಅದ್ಭುತ.ಈ ಪಿಲ್ಲರ್ ಇರೋದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ‌‌. ಇಲ್ಲಿನ ಲೇಪಾಕ್ಷಿ ದೇವಸ್ಥಾನದಲ್ಲಿ ಇರೋ ಒಂದು ಕಂಬ (ಪಿಲ್ಲರ್) ಗುರುತ್ವಾಕರ್ಷಣೆಗೆ ವಿರುದ್ಧವಾಗಿ ನೆಲ ಬಿಟ್ಟು ನಿಂತಿದೆ. ಈ ದೇವಸ್ಥಾನದಲ್ಲಿ 70 ಪಿಲ್ಲರ್ ಗಳಿವೆ, ಇವುಗಳಲ್ಲಿ 1 ಕಂಬ ನೆಲಬಿಟ್ಟು ನಿಂತಿದೆ. ಕಂಬದಡಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಟ್ಟೆ ಹಾಸಿ ತೆಗೆಯಬಹದು. ಇದು ನಿಜಕ್ಕೂ ಅಚ್ಚರಿಯೇ ಸರಿ.

LEAVE A REPLY

Please enter your comment!
Please enter your name here