ಸಲಿಂಗಿ ಜೋಡಿಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್..!

0
151

ಸಲಿಂಗಿ ಜೋಡಿಗಳ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಗೊಂಡಿದೆ. ಹೌದು, ಪಾಕಿಸ್ತಾನ ಮತ್ತು ಭಾರತದ ಯುವತಿಯರು ಜೋಡಿಯಾಗಿ ತೆಗೆಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಫೋಟೋದಲ್ಲಿ ಇಬ್ಬರು ತಬ್ಬಿಕೊಂಡಿರುವ ಹಾಗೂ ಚುಂಬಿಸುತ್ತಿರುವ ದೃಶ್ಯಗಳು ಎಲ್ಲರಲ್ಲೂ ಸಂಚಲನ ಸೃಷ್ಟಿಸಿದೆ ಎನ್ನಬಹುದು. ಅಮೆರಿಕದ ನ್ಯೂಯಾರ್ಕ್’ನಲ್ಲಿ ಸಲಿಂಗಿ ಜೋಡಿಯ ಫೋಟೊ ಶೂಟ್ ಮಾಡಿದ ಛಾಯಾಗ್ರಾಹಕ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡಿದ್ದಾನೆ. ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಬಾರಿ ವೀಕ್ಷಣೆ ಜೊತೆಗೆ ಕಾಮೆಂಟ್’ಗಳು ಹರಿದು ಬಂದಿದೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಕ್ಯಾಮೆರಾಗೆ ಪೋಸ್ ನೀಡಿರುವ ಸಲಿಂಗಿ ಜೋಡಿ, ಗೆಳೆಯರ ವಿವಾಹದ ಸಂದರ್ಭದಲ್ಲಿ ತೆಗೆಸಿದ ಫೋಟೋಗಳು ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here