ಬಾಲಿವುಡ್, ತಲುಗು,ತಮಿಳು ಚಿತ್ರಗಳಲ್ಲಿ ನಟಿಸಿರುವ ನಟಿ ತಾಪ್ಸಿ ಪನ್ನು ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ಗಳು ಹೆಚ್ಚಾಗಿದ್ದು, ಎಲ್ಲರ ಕೋಪಕ್ಕೆ ತುತ್ತಾಗಿದ್ದಾರೆ. ಹೌದು, ನಟಿ ತಾಪ್ಸಿ ಪನ್ನು ನಟಿಸಿರುವ ಚಿತ್ರ ಮಿಷನ್ ಮಂಗಲ್' ಇದೇ ಆಗಸ್ಟ 15 ರಂದು ದೇಶಾದ್ಯಂತ ಬಿಡುಗಡೆಗೊಳ್ಳಲ್ಲಿದೆ. ಈ ಚಿತ್ರ ಸಂಪೂರ್ಣವಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ
ಇಸ್ರೋ’ ಕುರಿತು ತೆಗೆದಿರುವ ಚಿತ್ರವಾಗಿದೆ.

ಮಂಗಳಾಯನದ ಉಡಾವಣೆ ಈ ಸಿನಿಮಾದ ಮುಖ್ಯ ಜೀವಳವಾಗಿದ್ದು, ಸಿನಿಮಾದ ನಾಯಕನಾಗಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ವಿದ್ಯಾ ಬಾಲನ್,ನಿತ್ಯಾ ಮೆನನ್, ಸೋನಾಕ್ಷಿ ಸೀನ್ಹಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಈ ಚಿತ್ರದ ಟ್ರೇಲರ್ ಬಿಡುಗಡೆಗೊಂಡ ಕೆಲವ ಗಂಟೆಗಳಲ್ಲಿ ಉತ್ತಮ ರೆಸ್ಪಾನ್ಸ್ ಪಡೆಯುವದರ ಜೊತೆಗೆ ತಾಪ್ಸಿ ಪನ್ನು ಅವರ ಒಂದು ದೃಶ್ಯ ಕುರಿತು ಪ್ರೇಕ್ಷಕರು ಟ್ವೀಟ್ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿತ್ರದ ಟ್ರೇಲರ್ ನಲ್ಲಿ ತಾಪ್ಸಿ ಕಾರನ್ನು ಕಲಿಯುತ್ತಿರುತ್ತಾರೆ. ತರೆಭೇತಿದಾರ ಹೇಳುವ ಮಾತನ್ನು ಆಲಿಸಿಕೊಂಡು ಕಾರನ್ನು ಚಾಲಾನೆ ಮಾಡುತ್ತಿದ್ದ ವೇಳೆ ಆತ ಕಾರಿನ ಗೇರ್ ಬದಲಾಯಿಸಲು ಹೇಳುತ್ತಾನೆ. ಇದರ ಅನುಸಾರ ತಾಪ್ಸಿ ಗೇರ್ ಹಿಡಿಯುವ ಬದಲು, ತರೆಬೇತಿದಾರನ ಗುಪ್ತಂಗಾವನ್ನು ತಪ್ಪಾಗಿ ಸ್ಪರ್ಶಿಸುತ್ತಾರೆ. ಈ ದೃಶ್ಯ ಗಮನಿಸಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ತಾಪ್ಸಿ ಹಾಗೂ ಚಿತ್ರತಂಡದ ವಿರುದ್ಧ ಭಾರಿ ಟ್ರೋಲ್ ಮಾಡುವ ಮೂಲಕ ಕಿಡಿಕಾರಿದ್ದಾರೆ.