ಯಡ್ಡಿ ಸರ್ಕಾರಕ್ಕೆ ಪೇಜಾವರಿ ಶ್ರೀಗಳು ಹೇಳಿದ್ದೇನು..?!

0
112

ರಾಜ್ಯದಲ್ಲಿ ರಚನೆಯಾಗಿರುವ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಕಳಂಕ ರಹಿತ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಲಿ ಎಂದು ಪೇಜಾವರದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಆಶಿಸಿದ್ದಾರೆ.

ಉಡುಪಿಯ ಕೃಷ್ಣ ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪೇಜಾವರ ಶ್ರೀಗಳು “ವೀರಶೈವ ಲಿಂಗಾಯತ ಎರಡು ಒಂದೇ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ. ಈ ಹೇಳಿಕೆಯನ್ನು ಸೋದರ ಭಾವನೆಯಿಂದ ಹೇಳಿದ್ದೇನೆ ವಿನಾ ಬೇರೆ ಉದ್ದೇಶವಿಲ್ಲ.

ವೀರಶೈವ-ಲಿಂಗಾಯತ ಇಬ್ಬರೂ ಹಿಂದೂಗಳೇ. ಈ ಬಗ್ಗೆ ಮುಕ್ತ ವೇದಿಕೆಯಲ್ಲಿ ಇದನ್ನು ವಿರೋಧಿಸುವ ಸಾಣೇಹಳ್ಳಿ ಸ್ವಾಮಿಗಳು, ಜಾಮದಾರ್ ಹಾಗೂ ಎಂ.ಬಿ.ಪಾಟೀಲ್ ಅವರು ನಮ್ಮೊಂದಿಗೆ ಸಂವಾದಕ್ಕೆ ಬರಲಿ. ನಾನು ಸಿದ್ಧನಿದ್ದೇನೆ. ಇನ್ನು ಬುದ್ಧ, ಜೈನ, ಸಿಖ್ ಧರ್ಮಗಳು ಸಹ ಹಿಂದೂ ಧರ್ಮಗಳೇ. ನಾನು ಹಿಂದೂ ಧರ್ಮವನ್ನು ಬಲಿಷ್ಠಗೊಳಿಸಲು ಪ್ರಯತ್ನ ಮುಂದುವರೆಸುತ್ತೇನೆ ಎಂದರು.

LEAVE A REPLY

Please enter your comment!
Please enter your name here